ಲಕ್ನೋ: ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ದೀಪಾವಳಿ (UP Crime) ಹಬ್ಬದ ಸಂಭ್ರಮದ ನಡುವೆಯೇ ಘೋರ ದುರಂತವೊಂದು ಸಂಭವಿಸಿದೆ. ಪಟಾಕಿ ಸಿಡಿಸುವ (President Bodyguard) ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ, ರಾಷ್ಟ್ರಪತಿ ಭವನದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್ ತಲೆಗೆ ಗುಂಡು ಹಾರಿಸಲಾಗಿದೆ.
ರಾಮಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲ್ಪುರ ಖದಾನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 26 ವರ್ಷದ ಸೌರಭ್ ತೋಮರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೌರಭ್ ತೋಮರ್ ಅವರು 2021 ರಲ್ಲಿ ಸೇನೆಗೆ ಸೇರಿದ್ದು, ಸದ್ಯ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯಂತ ಹಿರಿಯ ಅಶ್ವದಳವಾದ ರಾಷ್ಟ್ರಪತಿ ಅಂಗರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೀಪಾವಳಿ ರಜೆಗೆಂದು ಸ್ವಗ್ರಾಮಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.ಇದನ್ನೂ ಓದಿ: 11 ದಿನದಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬೆ ದರ್ಶನ – ಇಂದು ದೇವಾಲಯದ ಗರ್ಭಗುಡಿ ಬಾಗಿಲು ಬಂದ್
ನ. 8 ರಂದು ರಾತ್ರಿ 9 ಗಂಟೆ ಸುಮಾರಿಗೆ ಸೌರಭ್ ಮತ್ತು ಅವರ ಸಹೋದರರು ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದಾಗ, ಹಳೇ ವೈಷಮ್ಯ ಹೊಂದಿದ್ದ ಧೀರಜ್ ಮತ್ತು ಮೋನು ಎಂಬ ಗ್ರಾಮಸ್ಥರು ಗನ್ ಹಾಗೂ ದೊಣ್ಣೆಗಳೊಂದಿಗೆ ಬಂದು ಜಗಳ ತೆಗೆದಿದ್ದಾರೆ.
ಮಾತು ಬೆಳೆದು ಆರೋಪಿ ಧೀರಜ್ ದೇಶಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಆ ಗುಂಡು ಮೊದಲು ಗೋಡೆಗೆ ತಗುಲಿ, ನಂತರ ಸೌರಭ್ ಅವರ ಕಿವಿಯ ಹಿಂಭಾಗದ ಮೂಲಕ ತಲೆಯೊಳಗೆ ಹೊಕ್ಕಿದೆ. ಮತ್ತೊಬ್ಬ ಆರೋಪಿ ಮೋನು, ಸೌರಭ್ ಅಣ್ಣ ವಿನೀತ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ತಲೆಗೆ ಹೊಡೆದಿದ್ದಾನೆ. ಸದ್ಯ ಮೀರತ್ನ ಖಾಸಗಿ ಆಸ್ಪತ್ರೆಯಲ್ಲಿ ಸೌರಭ್ಗೆ ಶಸ್ತ್ರಚಿಕಿತ್ಸೆ ನಡೆಸಿ ತಲೆಯಲ್ಲಿದ್ದ ಗುಂಡನ್ನು ಹೊರತೆಗೆಯಲಾಗಿದ್ದು, ಐಸಿಯುನಲ್ಲಿ ಅವರ ಸ್ಥಿತಿ ಗಂಭೀರವಾಗಿದೆ. ಅಣ್ಣ ವಿನೀತ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಬಳಿಕ ಆರೋಪಿಗಳು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳುಗಳ ತಂದೆ ಜನಕರಾಜ್ ಕೊಟ್ಟ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಸರ್ಕಾರ ಗುಡ್ ನ್ಯೂಸ್ – ನ.30 ರವರೆಗೆ ಇ-ಕೆವೈಸಿ ಅವಧಿ ವಿಸ್ತರಣೆ
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಬಾಗ್ಪತ್ ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸುತ್ತಿದ್ದಾರೆ.
