ಬಳ್ಳಾರಿ: ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳ(Transport Bus) ದುಸ್ಥಿತಿ ಹೇಳತೀರಾಗಿದ್ದು ಎಲ್ಲೆಂದರಲ್ಲಿ ಡೀಸೆಲ್(Diesel) ಖಾಲಿಯಾಗಿ ಹಾಗೂ ತಾಂತ್ರಿಕ ಸಮಸ್ಯೆಯಿಂದ ಕೆಟ್ಟು ನಿಲ್ಲುತ್ತಿರುವುದು ನಿತ್ಯದ ಗೋಳಾಗಿ ಪರಿಣಮಿಸಿದೆ.
ಬಸ್ಗಳನ್ನು ನಂಬಿಕೊಂಡು ಹೊರಡುವ ಪ್ರಯಾಣಿಕರು ಮಾರ್ಗಮಧ್ಯದಲ್ಲೇ ಗಂಟೆಗಟ್ಟಲೆ ಪರದಾಡುವಂತಾಗಿದ್ದು, ಸಾರ್ವಜನಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ ಡಿಪೋದಲ್ಲಿರುವ(Ballari Depot) ಶೇ. 60ಕ್ಕೂ ಹೆಚ್ಚು ಬಸ್ಗಳು ತೀರಾ ಹಳೆಯದಾಗಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಬೀದಿಗೆ ಬೀಳುತ್ತಿವೆ. ಚಾಲನೆಯಲ್ಲಿರುವಾಗಲೇ ಏಕಾಏಕಿ ಕೈಕೊಡುವ ಈ ‘ಗುಜರಿ’ ಬಸ್ಗಳನ್ನು ಚಾಲಕರು, ನಿರ್ವಾಹಕರು ಮಾತ್ರವಲ್ಲದೆ ಪ್ರಯಾಣಿಕರೇ ಕೈಜೋಡಿಸಿ ತಳ್ಳಬೇಕಾದ ದುಸ್ಥಿತಿ ಎದುರಾಗಿದೆ.
9 ಸಾವಿರ ಕೋಟಿ ರೂ. ನಷ್ಟವಾಗಿದೆ. ವರ್ಷಕ್ಕೆ 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಸಂಸ್ಥೆಗಳು ಉಳಿಯಬೇಕಾದರೆ ದರ ಏರಿಸಲೇಬೇಕು: ಸಾರಿಗೆ ಸಚಿವ ಬೈರತಿ ಸುರೇಶ್
#KSRTC #BMTC #ByrathiSuresh #Karnataka https://t.co/1gbSObIPBe
— PublicTV (@publictvnews) November 1, 2026
ಬಳ್ಳಾರಿಯಿಂದ ಸಂಗನಕಲ್ಲು ಗ್ರಾಮಕ್ಕೆ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಕೆಎಸ್ಆರ್ಟಿಸಿ ಬಸ್, ಮಾರ್ಗಮಧ್ಯದಲ್ಲೇ ಡೀಸೆಲ್ ಖಾಲಿಯಾಗಿ ನಿಂತುಹೋಗಿದೆ. ಡಿಪೋದಿಂದ ಹೊರಡುವ ಮುನ್ನ ಕನಿಷ್ಠ ಇಂಧನವೂ ಇಲ್ಲದೆ ಬಸ್ ರಸ್ತೆಗಿಳಿದಿದ್ದನ್ನು ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಚಾಲಕ ಮತ್ತು ನಿರ್ವಾಹಕರು ಎಲ್ಲೋ ಡೀಸೆಲ್ ತರಿಸಿ, ಹಾಕಿದ ಬಳಿಕವೇ ಬಸ್ ಚಲಿಸಿದೆ. ಇದನ್ನೂ ಓದಿ: ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗೆ ಹೊಸ ಎಸ್ಐಆರ್ ಪಟ್ಟಿ ಇಲ್ಲ: ಈಶ್ವರ್ ಖಂಡ್ರೆ
ಸರ್ಕಾರ ಕನಿಷ್ಠ ಪ್ರಯಾಣಕ್ಕೆ ಯೋಗ್ಯವಾದ ಬಸ್ಗಳನ್ನು ರಸ್ತೆಗೆ ಇಳಿಸುತ್ತಿಲ್ಲ. ಡೀಸೆಲ್ ಇಲ್ಲದೆ, ಎಂಜಿನ್ ಕೆಟ್ಟು ರಸ್ತೆಯಲ್ಲೇ ನಿಲ್ಲುವ ಇಂತಹ ಬಸ್ಗಳಿಂದ ಸಮಯವೂ ಹಾಳು, ಜೀವಕ್ಕೂ ಅಪಾಯ ಎಂದು ಪ್ರಯಾಣಿಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
