ಹಾಸನ: ಅ.29 ರಿಂದ ನ.11 ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವದ ಹಿನ್ನಲೆ, ಇಂದು (ಅ.26) ದೇವಾಲಯಕ್ಕೆ (Hasanamba Temple) ದೇವಿಯ ಒಡವೆಗಳನ್ನು (Gold Jewelry) ರವಾನೆ ಮಾಡಲಾಗಿದೆ.
ಹಾಸನ (Hassan) ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ರಥದಲ್ಲಿ ಅಧಿಕಾರಿಗಳು ಹಾಗೂ ಅರ್ಚಕರು ಕೊಂಡೊಯ್ದಿದ್ದಾರೆ. ಇದಕ್ಕೂ ಮುನ್ನ ಜಿಲ್ಲಾ ಖಜಾನೆಯಲ್ಲಿ ಒಡವೆಗಳಿರುವ ಪೆಟ್ಟಿಗೆಗೆ ಎಸಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ಗೀತಾ, ಪ್ರಧಾನ ಅರ್ಚಕ ನಾಗರಾಜ್ ಪೂಜೆ ಸಲ್ಲಿಸಿದರು. ನಂತರ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹಾಸನಾಂಬ ದೇವಾಲಯಕ್ಕೆ ಒಡವೆಗಳನ್ನು ಕೊಂಡೊಯ್ಯಲಾಯಿತು. ಇದನ್ನೂ ಓದಿ: ಹೂವಿನ ಅಲಂಕಾರಕ್ಕೆ 90 ಲಕ್ಷ, ಡಾನ್ಸ್ ಮಾಡೋಕೆ 80 ಲಕ್ಷ – ಹಾಸನಾಂಬ ಜಾತ್ರೆಯ ಖರ್ಚು ಕೇಳಿ ಬೆಚ್ಚಿಬಿದ್ದ ರೇವಣ್ಣ!
ಆರ್.ಸಿ. ರಸ್ತೆ, ಎನ್.ಆರ್.ವೃತ್ತ, ಗಾಂಧಿ ಬಜಾರ್ ರಸ್ತೆ ಮೂಲಕ ಹಾಸನಾಂಬ ದೇವಾಲಯಕ್ಕೆ ದೇವಿಯ ಒಡವೆಗಳನ್ನು ಕೊಂಡೊಯ್ಯಲಾಗಿದೆ. ಒಡವೆ ಕೊಂಡೊಯ್ಯುವ ವೇಳೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಮುನಿಸು ಮರೆತು ಒಂದಾದ ಡಿಸಿ, ಎಸ್ಪಿ – ಒಟ್ಟಾಗಿ ಹಾಸನಾಂಬ ದರ್ಶನೋತ್ಸವ ಸಿದ್ಧತೆ ಪರಿಶೀಲನೆ; ಕುಂಕುಮಾರ್ಚನೆ
