ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಕೋಲ್ಡ್ ವಾರ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಜೈಲಿಂದ ರಿಲೀಸ್ ಆಗೋದು ಪತ್ನಿ ವಿಜಯಲಕ್ಷ್ಮಿ ಇಷ್ಟ ಇಲ್ಲ ಎಂಬ ವಿಚಾರವನ್ನು ಧನ್ವೀರ್ ಸ್ನೇಹಿತನ ಜೊತೆ ಅನಾಮಿಕ ಬಾಯ್ಬಿಟ್ಟಿದ್ದಾನೆ.
ಆಡಿಯೋದಲ್ಲಿ ಏನಿದೆ?
ಧನ್ವೀರ್ ಸ್ನೇಹಿತ: ಧನ್ವೀರ್ ಅವರ ಮೇಲೆ ಕಾರು ಬಗ್ಗೆ ಅಲಿಗೇಷನ್ ಬಂದಿದೆ ಅಲ್ವಾ. ಚೀಟಿಂಗ್ ಕೇಸ್ ಗೌರವ್ ಅವರು ಹಾಕಿದ್ದು, ಕಾರು ನಿಮ್ಮ ಹತ್ರ ಇದ್ದಿದ್ದಾ..?
ಅನಾಮಿಕ: ಹೌದು, ಈಗ್ಲೂ ನಮ್ಮ ಮನೆ ಹತ್ರ ಕಾರು ಇದೆ.
ಧನ್ವೀರ್ ಸ್ನೇಹಿತ: ಓಕೆ
ಅನಾಮಿಕ: ಗಾಡಿಗೂ ಅವರಿಗೂ ಸಂಬಂಧವಿಲ್ಲ. ನಾನು ಕಾರು ತೆಗೆದುಕೊಂಡಿರೋದು ಅವರಿಗೆ ಗೊತ್ತಿಲ್ಲ.
ಧನ್ವೀರ್ ಸ್ನೇಹಿತ: ಮತ್ತೆ ಎನ್ಸಿಆರ್ ಅಲ್ಲಿ ಮೆನ್ಷನ್ ಮಾಡಿದ್ದಾರೆ.
ಅನಾಮಿಕ: ನಾನು ಒಂದು ವಿಚಾರ ಹೇಳಲಾ. ಅವರು ಮೇಲೆ ಅಲಿಗೇಷನ್ ಮಾಡ್ತಾ ಇದ್ದಾರೆ. ಅವರಿಗೂ ಇವರಿಗೂ ಸಂಬಂಧವೇ ಇಲ್ಲ. ಕೇಸ್ ಕೊಟ್ಟಿರೋರು ಯಾರು. ಅವರ ಜೊತೆಯಲ್ಲಿ ಇರೋರು ತಾನೇ?
ಧನ್ವೀರ್ ಸ್ನೇಹಿತ: ಹೌದು.
ಅನಾಮಿಕ: ಸಿಂಪಲ್ ಆಗಿ ಹೇಳಲಾ.. ಅವರಿಗೆ ಕೆಲಸ ಮಾಡೋದು ಇಷ್ಟ ಇಲ್ಲ.
ಧನ್ವೀರ್ ಸ್ನೇಹಿತ: ಕೆಲಸದಿಂದ ಅಂದ್ರೆ ಸರ್?
ಅನಾಮಿಕ: ಅಯಮ್ಮಗೆ ಅವರನ್ನ ಹೊರಗಡೆ ಕರ್ಕೊಂಡು ಬರೋದು ಇಷ್ಟ ಇಲ್ಲ. ಇರೋದು ಓಪನ್ ಆಗಿ ಹೇಳ್ತೀನಿ. ಮುಚ್ಚು ಮರೆ ಏನು ಇಲ್ಲ. ನಾನು ನೋಡಿದ ಹಾಗೇ ಅವತ್ತಿಂದ ಇವತ್ತಿನವರೆಗೂ ಅವರೊಬ್ಬರೇ ಕೆಲಸ ಮಾಡ್ತಾ ಇರೋದು.
ಧನ್ವೀರ್ ಸ್ನೇಹಿತ: ಅಂದ್ರೆ ದರ್ಶನ್ ಅವರನ್ನ?
ಅನಾಮಿಕ: ಹೌದು..
ಧನ್ವೀರ್ ಸ್ನೇಹಿತ: ಅಯಮ್ಮ ಅಂದ್ರೆ ವಿಜಯಲಕ್ಷ್ಮಿ ಬಗ್ಗೆ ನಾ ಹೇಳ್ತಾ ಇರೋದು?
ಅನಾಮಿಕ: ಆಯಪ್ಪ ಒಬ್ಬನೇ ಕೆಲಸ ಮಾಡ್ತಾ ಇದ್ದಿದ್ದು. ಎಲ್ಲಾ ಕಡೆಯಿಂದಲೂ ಅರೆಂಜ್ ಮಾಡ್ತಾ ಇದ್ದಿದ್ದು ಇವರೊಬ್ಬರೇ. ಈಗ ಅಯಪ್ಪನ ಮೇಲೆ ಏನಕ್ಕೆ ಮಾಡಬೇಕು? ಮಾಡೋ ಅವಶ್ಯಕತೆ ಏನಿತ್ತು? ಒಂದೂವರೆ ಲಕ್ಷ ಗಾಡಿಗೋಸ್ಕರ ಮಾಡ್ತಾರೆ ಅಂದ್ರೆ ಏನರ್ಥ?
ಧನ್ವೀರ್ ಸ್ನೇಹಿತ: ಗಾಡಿ ಎಲ್ಲಾ ನೀವೆ ಪರ್ಚೇಸ್ ಮಾಡಿದ್ದಾ?
ಅನಾಮಿಕ: ನನ್ನ ಹತ್ರವೇ ಗಾಡಿ ಇದೇ. ನಾನೇ ಗೌರವ್ಗೆ ಕಾಸು ಕೊಟ್ಟಿದ್ದು.
ಧನ್ವೀರ್ ಸ್ನೇಹಿತ: ಓಕೆ
ಅನಾಮಿಕ: ಇನ್ನು ಐವತ್ತು ಸಾವಿರ ಕೊಡಬೇಕು. ಡಾಕ್ಯೂಮೆಂಟ್ ಅವರ ಹತ್ರ ಇದೆ. ಇದರಲ್ಲೇನು ಮುಚ್ಚುಮರೆ ಏನು ಮಾಡಬೇಕು.
ಧನ್ವೀರ್ ಸ್ನೇಹಿತ: ದರ್ಶನ್ ಫ್ಯಾಮಿಲಿಗೆ ನೀವು ಆಪ್ತರಾಗಿದ್ರಾ?
ಅನಾಮಿಕ: ಇಲ್ಲ ಇಲ್ಲ ಸರ್.. ಅವರಿಗೆ ನಾನು ಒಳ್ಳೆ ರೀತಿಯಿಂದಲೇ ಪರಿಚಯ ಅಷ್ಟೆ. ವಿಷಯ ಏನೇನೊ ನಡೀತಿದೆ ಅಂತಾ ಎಲ್ಲಾ ಗೊತ್ತು. ನಾವು ನಿತ್ಯ ಬೆಳಗ್ಗೆ ಎದ್ದು ನ್ಯೂಸ್ ನೋಡ್ತೀವಿ. ಆಯಪ್ಪನ ಬ್ಲಾಕ್ ಮಾಡಿದ್ರೆ ಎಲ್ಲಿಯೂ ಕೆಲಸ ಆಗಲ್ಲ ಅಂತಾ ಗೊತ್ತು. ಆಯಪ್ಪನ ಮೇಲೆ ಮಾಡಬೇಕಾಗಿರೋ ಕಂಪ್ಲೆಂಟ್ ಹೆಂಗಿರಬೇಕು ಹೇಳಿ? ಒಂದೂವರೆ ಲಕ್ಷ ಗಾಡಿಗೆ ಯಾರಾದ್ರೂ ಕಂಪ್ಲೆಂಟ್ ಮಾಡ್ತಾರಾ? ಇದರಲ್ಲಿ ಏನಾದ್ರೂ ಅರ್ಥ ಇದೀಯಾ?
ಧನ್ವೀರ್ ಸ್ನೇಹಿತ: ಹೌದು… ಗಾಡಿ ನಿಮ್ಮ ಹತ್ರವೇ ಇದಿಯಾ?
ಅನಾಮಿಕ: ಹೌದು ಸರ್, ನಮ್ಮ ಮನೆ ಮುಂದೆಯೇ ಇದೆ.
ಧನ್ವೀರ್ ಸ್ನೇಹಿತ: ನೀವಿನ್ನೂ ಐವತ್ತು ಸಾವಿರ ಕೊಡಬೇಕು. ಇದೆಲ್ಲಾ ನಡೆಯಬೇಕಾದ್ರೆ ಗೌರವ್ ಕಾಲ್ ಮಾಡಿದ್ರಾ?
ಅನಾಮಿಕ: ಗೌರವ್ ಕಾಲ್ ಮಾಡಿಲ್ಲ. ನಿಮಗೆ ಸ್ಕ್ರೀನ್ಶಾಟ್ ಕಳಿಸ್ತೀನಿ. ಯಾವಾಗ ಲಾಸ್ಟ್ ಕಾಲ್ ಮಾಡಿದ್ರೂ ಅಂತಾ. ನನಗೆ ಪೇಮೆಂಟ್ ಬರಬೇಕು. ಬಂದ ಕೂಡಲೇ ನಿನಗೆ ಕೊಡ್ತೀನಿ ಅಂತಾ ಹೇಳಿದ್ದೆ. ಬೆಳಗ್ಗೆ ಎದ್ದು ನ್ಯೂಸ್ ನೋಡಿದೆ. ಗಾಡಿದು ಅವರ ಮೇಲೆ ಹಾಕಿದ್ದಾರೆ ಅಂತಾ. ನಾನು ಗಾಡಿ ತಗೊಂಡಿರೋದೆ ಅವರಿಗೆ ಗೊತ್ತಿಲ್ಲ.
ಧನ್ವೀರ್ ಸ್ನೇಹಿತ: ಧನ್ವೀರ್ಗೆ ಗೊತ್ತಿಲ್ಲ ಹಾಗಾದ್ರೆ?
ಅನಾಮಿಕ: ಅವರಿಗೆ ಗೊತ್ತಿಲ್ಲ.
