ಮುಂಬೈ: 5 ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡ 2027ರ ಐಪಿಎಲ್ ಸೀಸನ್ಗೂ ಮುನ್ನವೇ ಹಲವು ಬದಲಾವಣೆಗಳನ್ನ ಮಾಡಿಕೊಳ್ಳುತ್ತಿದೆ. ಮಹೇಲ ಜಯವರ್ಧನೆ ಅವರು ತಂಡದ ಮುಖ್ಯಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಫ್ರಾಂಚೈಸಿ ಕೀರನ್ ಪೊಲಾರ್ಡ್ (Kieron Pollard) ಅವರನ್ನ ಹೆಡ್ಕೋಚ್ ಆಗಿ ನೇಮಕ ಮಾಡಿದೆ.
Mumbai Indians elevate Kieron Pollard as Head Coach
A defining figure in MI’s success, the remarkable 16-year association of Kieron Pollard within the #OneFamily enters a new chapter.
Read more – https://t.co/ORZz4gruIr https://t.co/BMI38BYH1f
— Mumbai Indians (@mipaltan) October 24, 2026
ಮಹೇಲ ಜಯವರ್ಧನೆ (Mahela Jayawardene) ಅವರು ಈ ಹಿಂದೆ ತಂಡದ ಮುಖ್ಯ ಕೋಚ್ ಆಗಿ 5 ಆವೃತ್ತಿಗಳನ್ನ ಮುನ್ನಡೆಸಿದ್ದರು, ಈ ಪೈಕಿ 3 ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಇದೀಗ ಅವರು ಆ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಕೀರನ್ ಪೊಲಾರ್ಡ್ ನೇಮಕವಾಗಿದ್ದಾರೆ.
ಫ್ರಾಂಚೈಸಿ. ಈ ಮೂಲಕ, ಪೊಲಾರ್ಡ್ ಬ್ಯಾಟಿಂಗ್ ಕೋಚ್ ನಿಂದ ಹೆಡ್ ಕೋಚ್ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಇದರೊಂದಿಗೆ 5 ಬಾರಿ ಐಪಿಎಲ್ (IPL) ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಜೊತೆಗಿನ ಅವರ ದೀರ್ಘ ಕಾಲದ ಸಂಬಂಧ ಮುಂದುವರಿದಿದೆ.
ಕೀರನ್ ಪೊಲಾರ್ಡ್ 2010 ರಿಂದಲೂ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಗುರುತಿಸಿಕೊಂಡಿದ್ದಾರೆ. ಟೂರ್ನಿಯಿಂದ ನಿವೃತ್ತರಾದ ನಂತರ, ಕಳೆದ 4 ಐಪಿಎಲ್ ಆವೃತ್ತಿಗಳಲ್ಲಿ ಅವರು ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2010 ರಲ್ಲಿ ಅವರು ಮೊದಲ ಬಾರಿಗೆ ಆಟಗಾರನಾಗಿ ತಂಡವನ್ನ ಸೇರಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ಗೆದ್ದ 5 ಐಪಿಎಲ್ ಪ್ರಶಸ್ತಿಗಳ ಅಭಿಯಾನದಲ್ಲಿ ಹಾಗೂ 2011 ಮತ್ತು 2013 ರಲ್ಲಿ ತಂಡವು ಗೆದ್ದ ಎರಡು ಚಾಂಪಿಯನ್ಸ್ ಟಿ20 ಲೀಗ್ (CLT20) ಪ್ರಶಸ್ತಿಗಳಲ್ಲಿ ಪೊಲಾರ್ಡ್ ಪ್ರಮುಖ ಪಾತ್ರ ವಹಿಸಿದ್ದರು.
ಹೆಡ್ಕೋಚ್ ಆಗಿ ಪೊಲಾರ್ಡ್ ಹೇಳಿದ್ದೇನು?
ಮುಂಬೈ ಇಂಡಿಯನ್ಸ್ ತಂಡದ ನೂತನ ಹೆಡ್ಕೋಚ್ ಆಗಿ ನೇಮಕಗೊಂಡ ಬಳಿಕ ಮಾತನಾಡಿದ ಪೊಲಾರ್ಡ್, ಮುಂಬೈ ಇಂಡಿಯನ್ಸ್ನ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ಸಂತೋಷ ಮತ್ತು ಗೌರವದ ವಿಷಯವಾಗಿದೆ. ಮುಂಬೈ ಇಂಡಿಯನ್ಸ್ ನನ್ನ ಜೀವನ ಮತ್ತು ವೃತ್ತಿಜೀವನದ ಒಂದು ದೊಡ್ಡ ಭಾಗವಾಗಿದೆ. ಈ ತಂಡ, ಆಟಗಾರರು ಮತ್ತು ಫ್ಯಾನ್ಸ್ ಬಳಗದ ಜೊತೆಗಿರುವ ಬಾಂಧವ್ಯ ನನಗೆ ಅತ್ಯಂತ ಮಹತ್ವದ್ದಾಗಿದೆ. ಒಬ್ಬ ಆಟಗಾರನಾಗಿ ಮತ್ತು ನಂತರ ತರಬೇತುದಾರನಾಗಿ ಈ ಪಯಣವನ್ನು ಅನುಭವಿಸಿರುವುದರಿಂದ, ಮುಂಬೈ ಇಂಡಿಯನ್ಸ್ನ ಮೌಲ್ಯಗಳೇನು ಮತ್ತು ‘ನೀಲಿ ಮತ್ತು ಚಿನ್ನದ’ (Blue and Gold) ಬಣ್ಣದ ಜೆರ್ಸಿಯನ್ನು ಪ್ರತಿನಿಧಿಸುವುದರೊಂದಿಗೆ ಬರುವ ಜವಾಬ್ದಾರಿ ಏನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.


