ವಾಷಿಂಗ್ಟನ್: ರಾತ್ರಿ ವಾಕಿಂಗ್ಗೆ (Walking) ತೆರಳಿದ್ದ ವೇಳೆ ಕುಸಿದುಬಿದ್ದು ತೆಲಂಗಾಣ (Telangana) ಮೂಲದ ಯುವತಿ ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನ ಆಲ್ಬನಿಯಲ್ಲಿ (Albany) ನಡೆದಿದೆ.
ತೆಲಂಗಾಣ ಮೂಲದ ಅಕ್ಷಿತಾ (25) ಮೃತ ಯುವತಿ. ಅಕ್ಷಿತಾ ಮಾಸ್ಟರ್ ಆಫ್ ಸೈನ್ಸ್ ಪದವಿ ಪೂರ್ಣಗೊಳಿಸಿ, ಇತ್ತೀಚೆಗಷ್ಟೇ ಉದ್ಯೋಗವನ್ನೂ ಪಡೆದು ಹೊಸ ಜೀವನ ಆರಂಭಿಸಲು ಸಿದ್ಧರಾಗಿದ್ದರು. ಇದೀಗ ಅಕ್ಷಿತಾ ಅವರ ದಿಢೀರ್ ಸಾವು ಕುಟುಂಬಸ್ಥರಿಗೆ ಆಘಾತ ತಂದಿದೆ. ಇದನ್ನೂ ಓದಿ: Public TV Impact | KSOU ಶಿವಮೊಗ್ಗ ಪ್ರಾದೇಶಿಕ ಕಚೇರಿಯ ನಿರ್ದೇಶಕ ಅಮಾನತು
ತೆಲಂಗಾಣದ ಉದ್ಯಮಿ ನಲ್ಲಮಾಲ ಆನಂದ್ ಅವರ ಪುತ್ರಿ ಅಕ್ಷಿತಾ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಇತ್ತೀಚೆಗಷ್ಟೇ ತಮ್ಮ ಎಂಎಸ್ ಪದವಿಯನ್ನು ಪೂರ್ಣಗೊಳಿಸಿದ್ದರು. ಕುಟುಂಬದ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ಊಟದ ಬಳಿಕ ಅಕ್ಷಿತಾ ತಮ್ಮ ನಿವಾಸದ ಹೊರಗೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: UP Elections | 175-200 ಸೀಟ್ಗೆ ಕಾಂಗ್ರೆಸ್ ಡಿಮ್ಯಾಂಡ್; 60-70 ಸ್ಥಾನ ನೀಡುವ ಬಗ್ಗೆ ಸಮಾಜವಾದಿ ಪಕ್ಷ ಚಿಂತನೆ
ಸ್ವಲ್ಪ ಸಮಯದ ಬಳಿಕ ಹೊರಗೆ ಬಂದ ಅವರ ಸಹೋದರ ಅಕ್ಷಯ್, ಅಕ್ಷಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ನೆರೆಹೊರೆಯವರ ಸಹಾಯದಿಂದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅಕ್ಷಿತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹೃದಯಾಘಾತದಿಂದ ಅಕ್ಷಿತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಫಿಲಿಪ್ಪೀನ್ಸ್ನಲ್ಲಿ ತರಬೇತಿ ವೇಳೆ ಎರಡು ವಿಮಾನಗಳು ಡಿಕ್ಕಿ; ನಾಲ್ವರು ಪೈಲಟ್ಗಳ ಸಾವು
ಇತ್ತೀಚೆಗಷ್ಟೇ ಉದ್ಯೋಗ ಪಡೆದು ಕೆಲಸಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ ಅಕ್ಷಿತಾ ಸಾವಿನಿಂದ ಕುಟುಂಬದವರು ತೀವ್ರ ದುಃಖಕ್ಕೀಡಾಗಿದ್ದಾರೆ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ವಾಸಿಸುತ್ತಿರುವ ಅಕ್ಷಿತಾ ಅವರ ಕುಟುಂಬಸ್ಥರು, ಮೃತದೇಹವನ್ನು ಭಾರತಕ್ಕೆ ತರಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಾಲ ಮರುಪಾವತಿಸಲಾಗದೇ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ ತಾಯಿ – ಬಾಲಕಿ ಸಾವು
