* 2 ಲಕ್ಷ ಮಂದಿಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ
* 75 ಕೋಟಿಯಲ್ಲಿ ಈಗ 43 ಕೋಟಿ ಹಣ ವಾಪಸ್
ಬೆಂಗಳೂರು: ಮೃತಪಟ್ಟ ಗೃಹಲಕ್ಷ್ಮಿ (Gruhalakshmi Scheme) ಫಲಾನುಭವಿ ಕುಟುಂಬಸ್ಥರು ಸೌಲಭ್ಯಕ್ಕಾಗಿ ಮರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ರಾಜ್ಯದಲ್ಲಿ 3 ಲಕ್ಷ ಮಂದಿ ಗೃಹಲಕ್ಷ್ಮಿ ಫಲಾನುಭವಿಗಳು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬದ ಸದಸ್ಯರು ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 2 ಲಕ್ಷ ಮಂದಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 22 ದಿನದಲ್ಲಿ 3.46 ಕೋಟಿ ಸಂಗ್ರಹ
ಮನೆ ಯಜಮಾನಿ ಮೃತಪಟ್ಟ ಬಳಿಕ ಆ ಮನೆಯ ಸೊಸೆ, ಮಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಯಿಂದ 43 ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ. 75 ಕೋಟಿಯಲ್ಲಿ ಈಗ 43 ಕೋಟಿ ಹಣ ಅಷ್ಟೇ ವಾಪಸ್ ಪಡೆಯಲಾಗಿದೆ.
ಗೃಹಲಕ್ಷ್ಮಿ ಮರು ಪರಿಶೀಲನಾ ಅರ್ಜಿ ಸದ್ಯಕ್ಕೆ ಇನ್ನೂ ಶುರುವಾಗಿಲ್ಲ. ಮುಖ್ಯಮಂತ್ರಿಗಳು ಸೂಚನೆ ಕೊಟ್ಟ ಬಳಿಕ ಮರು ಪರಿಶೀಲನೆ ಶುರುವಾಗಲಿದೆ. ಸದ್ಯಕ್ಕೆ ಮೃತಪಟ್ಟ ಫಲಾನುಭವಿಗಳ ಕುಟುಂಬಸ್ಥರು ಮತ್ತೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆ ಮಾಡ್ತಿರೋ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ಅಡಳಿತದಲ್ಲಿ ತಮಿಳುನಾಡಿಗೆ ಮತ್ತೆ ಕಾವೇರಿ ಕರುಣೆ: ಅಶೋಕ್ ಕಿಡಿ
