ರಾವಲ್ಪಿಂಡಿ: ಸಿಕ್ಸರ್, ಬೌಂಡರಿ ಆಟದಲ್ಲಿ ಕೊನೆಗೂ ಶ್ರೀಲಂಕಾ (Sri Lanka) 429 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಇಂಗ್ಲೆಂಡ್(England) ವಿರುದ್ಧ ರೋಚಕ 2 ವಿಕೆಟ್ಗಳ ಜಯ ಸಾಧಿಸಿ ಪಾಕಿಸ್ತಾನದಲ್ಲಿ ಇತಿಹಾಸ ಬರೆದಿದೆ.
ತ್ರಿಕೋನ ಸರಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್(Harry Brook) ಅವರ ಸ್ಫೋಟಕ ದ್ವಿಶತಕದ ನೆರವಿನಿಂದ ಇಂಗ್ಲೆಂಡ್ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ429 ರನ್ ಹೊಡೆಯಿತು.
ಸವಾಲಿನ ಮೊತ್ತವಾಗಿದ್ದರೂ ಆಟಗಾರ ಅತ್ಯುತ್ತಮ ಪ್ರದರ್ಶನದಿಂದ ಲಂಕಾ ಇನ್ನು ಒಂದು ಎಸೆತ ಬಾಕಿ ಇರುವಂತೆಯೇ 8 ವಿಕೆಟ್ ನಷ್ಟಕ್ಕೆ 430 ರನ್ ಹೊಡೆದು ಜಯ ಸಾಧಿಸಿ ಪಾಕ್ ನೆಲದಲ್ಲಿ ದಾಖಲೆ ಬರೆಯಿತು.
ನಾಲ್ವರು ಆಟಗಾರರ ಅತ್ಯುತ್ತಮ ಪ್ರದರ್ಶನದಿಂದ ಲಂಕಾ ಈ ಪಂದ್ಯವನ್ನು ಗೆದ್ದುಕೊಂಡಿದೆ. ಆರಂಭದಲ್ಲಿ ಅವಿಶ್ಕಾ ಫೆರ್ನಾಂಡೋ 97 ರನ್(83 ಎಸೆತ, 11 ಬೌಂಡರಿ, 2 ಸಿಕ್ಸ್) ಪವನ್ ರತ್ನಾನಾಯಕೆ 130 ರನ್(106 ಎಸೆತ, 15 ಬೌಂಡರಿ, 3 ಸಿಕ್ಸ್), ದಸುನ್ ಶನಕ 97 ರನ್(50 ಎಸೆತ, 6 ಬೌಂಡರಿ, 8 ಸಿಕ್ಸ್), ಜನಿತ್ ಲಿಯನಗೆ 61 ರನ್(27 ಎಸೆತ, 7 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟಾದರು.
Sri Lanka’s Winning Moment in Rawalpindi ❤️
WHAT. A. CHASE 🇱🇰 👏🏏
Janith Liyanage seals a record-breaking chase with a towering six💪🔥
Sri Lanka chase 430 to beat England by 2 wickets in an unbelievable ODI thriller!
WHAT A FINISH! WHAT A WIN! 🇱🇰❤️ https://t.co/IOMiTeGQME
— Sri Lanka Tweet 🇱🇰 (@SriLankaTweet) October 22, 2026
ಅವಿಶ್ಕಾ ಫೆರ್ನಾಂಡೋ ಮತ್ತು ಪವನ್ ರತ್ನಾನಾಯಕೆ ನಾಲ್ಕನೇ ವಿಕೆಟಿಗೆ 79 ಎಸೆತಗಳಲ್ಲಿ 133 ರನ್ ಜೊತೆಯಾಟವಾಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಕೊನೆಯ 30 ಎಸೆತಗಳಲ್ಲಿ ತಂಡಕ್ಕೆ 53 ರನ್ಗಳ ಅಗತ್ಯವಿತ್ತು. 47 ಓವರ್ ಎಸೆದ ಕರ್ರನ್ 19 ರನ್ ನೀಡಿದಾಗ ಪಂದ್ಯ ಲಂಕಾದ ಕಡೆಗೆ ವಾಲಿತು.
ಜೋಶ್ ಟಂಗ್ ಎಸೆದ ಕೊನೆಯ ಓವರ್ನಲ್ಲಿ 8 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಮೊದಲ ಎಸೆತದಲ್ಲಿ ಒಂದು ರನ್ ಬಂದರೆ ಎರಡನೇ ಎಸೆತದಲ್ಲಿ ವೆಲ್ಲಲಗೆ ಔಟಾದರೆ ಮೂರನೇ ಎಸೆತದಲ್ಲಿ ಮಲಿಂಗಾ ಬೌಲ್ಡ್ ಮಾಡಿಸುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. 4ನೇ ಎಸೆತದಲ್ಲಿ 1 ಫೆರ್ನಾಂಡೋ ಒಂದು ರನ್ ಓಡಿದರು. ಐದನೇ ಎಸೆತದಲ್ಲಿ ಜನಿತ್ ಲಿಯನಗೆ ಸಿಕ್ಸ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
INCREDIBLE SCENES, LAST OVER THRILLER UNCUT
ENGLAND vs SRI LANKA, 8 OFF 6 REQUIRED 😱🔥 https://t.co/nuWqD7QdxN
— PCT Replays 2.0 (@ReplaysPCT) October 22, 2026
ಚೇಸಿಂಗ್ನಲ್ಲಿ ದಾಖಲೆ:
429 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಶ್ರೀಲಂಕಾ ಏಕದಿನ ಕ್ರಿಕೆಟ್ನಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಎರಡನೇ ತಂಡ ಎಂಬ ದಾಖಲೆ ಬರೆದಿದೆ. ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದೆ. ಆಸ್ಟ್ರೇಲಿಯಾ ವಿರುದ್ಧ 2006 ರ ಪಂದ್ಯದಲ್ಲಿ ಆಫ್ರಿಕಾ 435 ರನ್ಗಳನ್ನು ಚೇಸ್ ಮಾಡಿ ವಿಶ್ವದಾಖಲೆ ಬರೆದಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಟಾಮ್ ಬ್ಯಾಂಟನ್ 50 ರನ್, ಜೋ ರೂಟ್ 69 ರನ್, ಹ್ಯಾರಿ ಬ್ರೂಕ್ 202 ರನ್(116 ಎಸೆತ, 21 ಬೌಂಡಿ, 10 ಸಿಕ್ಸ್), ವಿಲ್ ಜಾಕ್ಸ್ 66 ರನ್(30 ಎಸೆತ, 8 ಬೌಂಡರಿ, 3 ಸಿಕ್ಸ್) ಹೊಡೆದ ಪರಿಣಾಮ 420 ರನ್ಗಳ ಗಡಿಯನ್ನು ದಾಟಿತ್ತು. ಹ್ಯಾರಿ ಬ್ರೂಕ್ 75 ಎಸೆತಗಳಲ್ಲಿ ಶತಕ ಹೊಡೆದರೆ 97 ಎಸೆತಗಳಲ್ಲಿ 150 ರನ್ ಹೊಡೆದಿದ್ದರು. ಅಂತಿಮವಾಗಿ 114 ಎಸೆತಗಳಲ್ಲಿ ಬ್ರೂಕ್ ದ್ವಿಶತಕ ಸಿಡಿಸಿದರು.
