ಬೆಂಗಳೂರು: ದಸರಾ ಜಂಬೂ ಸವಾರಿ ವೇಳೆ ದಲಿತ ಸಚಿವರಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಅಂತ ಜೆಡಿಎಸ್ ಮಾಜಿ ಶಾಸಕ ಅಶ್ವಿನ್ ಕುಮಾರ್ (Ashwin Kumar) ಆಗ್ರಹಿಸಿದ್ದಾರೆ.
ಜೆಪಿ ಭವನದಲ್ಲಿ ಮಾತಾಡಿದ ಅವರು, ದಸರಾದಲ್ಲಿ ನಿನ್ನೆ ದಲಿತ ಸಚಿವರಿಗೆ ಅಪಮಾನ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಮ್ಮನ್ನ ಎಲ್ಲಾ ಕಡೆ ಕರೆದುಕೊಂಡು ಹೋಗಿದ್ದರು. ನೀವು ದಲಿತರು ಅಲ್ಲಿಗೆ ಹೋಗಬಾರದು ಅಂತ ಹೀಗೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗೆ ಇವರು ಯಾರು ಅಂತ ಗೊತ್ತಿಲ್ಲವಾ? ಸಿಎಂ 22 ಸಚಿವರಿಗೆ ಜವಾಬ್ದಾರಿ ಕೊಟ್ಟಿದ್ದರು. ದಲಿತರಿಗೆ ಇವರು ಅಪಮಾನ ಮಾಡಿದ್ದಾರೆ. ಪ್ರೋಟೋಕಾಲ್ ಪ್ರಿಯಾಂಕ್ ಇಲಾಖೆಗೆ ಬರುತ್ತದೆ. ಇದರ ಜವಾಬ್ದಾರಿ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಮೈಸೂರು ದಸರಾಗೆ ಹ್ಯಾಂಡಲ್ ಇಲ್ಲದ ಬೈಕ್ನಲ್ಲಿ 460 ಕಿ.ಮೀ. ಸಂಚರಿಸಿ ಸಾಹಸ
