– ಅಧಿಕಾರಿಯೇ ತಡೆದಿದ್ದರೆ ಕೂಡಲೇ ಅಮಾನತು ಮಾಡಿ ಅಂತ ಬಿಜೆಪಿ ನಾಯಕ ಆಗ್ರಹ
ಬೆಂಗಳೂರು: ಮೈಸೂರು ದಸರಾ ನಂದಿಧ್ವಜ ಪೂಜೆಗೆ ಸಿಎಂ ಜೊತೆ ತೆರಳುತ್ತಿದ್ದ ಸಚಿವರನ್ನು ತಡೆದ ಎಸ್ಪಿ ರಿಷ್ಯಂತ್ (SP Rishyanth) ವಿರುದ್ಧ ಬಿಜೆಪಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ದಸರಾದಲ್ಲಿ ದಲಿತ ಸಚಿವರಿಗೆ ಅಪಮಾನ ಆಗಿದೆ. ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ, ಬಸಂತಪ್ಪ ದಲಿತ ಸಚಿವರು. ಪೊಲೀಸ್ ಅಧಿಕಾರಿ, ಮಂತ್ರಿಗಳನ್ನು ತಡೆದಿದ್ದಾರೆ. ಮಂತ್ರಿಗಿಂತ ಅಧಿಕಾರಿ ದೊಡ್ಡವರಾ? ಸಿಎಂ ಅವರು ಬಂದು ಮಂತ್ರಿಗಳನ್ನು ಬಿಡಿ ಅನ್ಬೇಕಾ? ಈ ಸರ್ಕಾರ ವೀಕಾ? ಸಿಎಂ ವೀಕಾ? ದಲಿತ ಸಚಿವರನ್ನ ಬಿಡಬೇಡಿ ಅಂತ ಯಾರಾದ್ರು ಆದೇಶ ಮಾಡಿದ್ರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಂದಿಧ್ವಜ ಪೂಜೆ ವೇಳೆ ಯಡವಟ್ಟು; ಸಿಎಂ ಜೊತೆ ಸಚಿವರನ್ನ ಪೂಜೆಗೆ ಬಿಡದೆ ಅಡ್ಡಗಟ್ಟಿದ ಎಸ್ಪಿ
ಸಿಎಂ ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕು. ಮಂತ್ರಿಗಳಿಗೆ ಜಾತಿ ಕಟ್ಟಬಾರದು. ಆದರೆ, ಯಾಕೆ ತಡೆದ್ರಿ? ಸಿಎಂ ಉತ್ತರ ಕೊಡಬೇಕು. ಸರ್ಕಾರ, ರಾಜ್ಯಕ್ಕೆ ಅಪಮಾನ ಇದು. ಇದನ್ನ ನಾನು ಖಂಡಾತುಂಡವಾಗಿ ಖಂಡಿಸುತ್ತೇನೆ ಎಂದರು.
ಯಾರೋ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಬಿಡಬೇಡಿ ಅಂತ ಹೇಳಿರಬೇಕು. ಯಾರು ಅದು? ಪೊಲೀಸ್ ಅಧಿಕಾರಿ ಯಾಕೆ ತಡೆದರು? ದಲಿತ ಸಮುದಾಯಕ್ಕೆ ಇದನ್ನ ಮಾಡಿದ್ರು ಅಂತ ಅನುಮಾನ ಬರುತ್ತದೆ. ಯಾರು ಅಧಿಕಾರಿಗೆ ಸೂಚನೆ ಕೊಟ್ಟಿದ್ದರು. ಅದನ್ನ ಅಧಿಕಾರಿ ಹೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಂದಿಧ್ವಜ ಪೂಜೆಗೆ ಸಿಎಂ ಜೊತೆ ಸಚಿವರನ್ನ ಬಿಡದೆ ಅಡ್ಡಗಟ್ಟಿದ ಎಸ್ಪಿ – ವಿಚಾರಣೆಗೆ ಡಿಕೆಶಿ ಆದೇಶ
ಒಂದು ವೇಳೆ ಅಧಿಕಾರಿಯೇ ತಡೆದಿದ್ದರೆ, ಕೂಡಲೇ ಅಧಿಕಾರಿ ಅಮಾನತು ಮಾಡಬೇಕು. ಇಲ್ಲದೇ ಹೋದ್ರೆ ಯಾರು ಸೂಚನೆ ಕೊಟ್ಟರು ಅವರ ಹೆಸರು ಹೇಳಬೇಕು. ಇಲ್ಲದಿದ್ರೆ ಇದು ದಲಿತ ವಿರೋಧಿ ಸರ್ಕಾರ ಆಗುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.
