ತಿರಾನಾ: ನಿರುದ್ಯೋಗ, ಶಿಕ್ಷಣ ವೆಚ್ಚ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಅಲ್ಬೇನಿಯಾದಲ್ಲಿ(Albania) ಭುಗಿಲೆದ್ದಿರುವ ಜನಾಕ್ರೋಶ ಹಿಂಸಾರೂಪಕ್ಕೆ ತಿರುಗಿದ್ದು, ಉದ್ರಿಕ್ತ ಪ್ರತಿಭಟನಾಕಾರರು ದೇಶದ ಸುಪ್ರೀಂ ಕೋರ್ಟ್ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.
ಪ್ರಧಾನಿ ಎಡಿ ರಾಮಾ (Edi Rama) ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಐದು ದಿನಗಳಿಂದ ರಾಜಧಾನಿ ತಿರಾನಾದಲ್ಲಿ ಸತತ ಹೋರಾಟ(Protest) ನಡೆಯುತ್ತಿದೆ. ಅಕ್ಟೋಬರ್ 17ರಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೊಚ್ಚಿಗೆದ್ದ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
🇦🇱 Rioters set fire to Albania’s Supreme Court building in the capital, Tirana, sending flames and thick smoke into the night sky.
The blaze struck part of the building as violent anti-government protests entered their 5th day, with demonstrators also storming other government offices and clashing with police.
Protesters are demanding Prime Minister Edi Rama’s resignation over corruption, unemployment, and education conditions.
— NewsForce (@Newsforce) October 19, 2026
ಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಬ್ಯಾಂಕ್ ಆಫ್ ಅಲ್ಬೇನಿಯಾದ ಪ್ರವೇಶ ದ್ವಾರ ಹಾಗೂ ಶಿಕ್ಷಣ ಸಚಿವಾಲಯದ ಕಟ್ಟಡಗಳ ಮೇಲೂ ಪ್ರತಿಭಟನಾಕಾರರು ಬೆಂಕಿ ಹಚ್ಚಿ, ವ್ಯಾಪಕ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ಹಿಂಸಾಚಾರವನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಕಣ್ಣೀರು ಟಿಯರ್ ಗ್ಯಾಸ್, ಜಲಫಿರಂಗಿ ಹಾಗೂ ರಬ್ಬರ್ ಗುಂಡುಗಳನ್ನು ಪ್ರಯೋಗಿಸಿವೆ. ಈ ಭೀಕರ ಘರ್ಷಣೆಯಲ್ಲಿ 130ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಲ್ಬೇನಿಯಾ ನ್ಯಾಯಾಂಗ ಸಚಿವ ಟೋನಿ ಗೋಗು “ಇದು ಕೇವಲ ಸರ್ಕಾರದ ಮೇಲಿನ ಆಕ್ರೋಶವಲ್ಲ; ದೇಶದ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲೆಯೇ ನಡೆದಿರುವ ನೇರ ದಾಳಿ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜಧಾನಿಯಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.
