ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾದ ಪರಿಣಾಮ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Gas Cylinder Explosion) 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ಪಟ್ಟಣದ ಶ್ರೀಸಾಯಿ ಬಡಾವಣೆಯಲ್ಲಿ ನಡೆದಿದೆ.
ಮಂಜುನಾಥ್ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದ್ದು, ಇವರ ಮನೆಯಲ್ಲಿ ಉತ್ತರ ಭಾರತ ಮೂಲದವರು ಬಾಡಿಗೆಗೆ ಇದ್ದರು. ರಾತ್ರಿ ಗ್ಯಾಸ್ ಸ್ಟೌವ್ ಸ್ವಿಚ್ ಆಫ್ ಮಾಡಿರಲಿಲ್ಲ. ಕಿಟಕಿ ಬಾಗಿಲು ಕ್ಲೋಸ್ ಮಾಡಿ ನಿದ್ರೆಗೆ ಜಾರಿದ್ದರು. ಈ ವೇಳೆ ಮನೆಯ ತುಂಬೆಲ್ಲ ಅಡುಗೆ ಅನಿಲ ಸೋರಿಕೆಯಾಗಿದೆ. ಮುಂಜಾನೆ 3 ಗಂಟೆಗೆ ಬೀಡಿ ಸೇದಲು ಕಡ್ಡಿ ಹಚ್ಚಿದ ವೇಳೆ ಮನೆಯಲ್ಲಿ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಘಟನೆಯ ಪರಿಣಾಮ ಮನೆಯಲ್ಲಿದ್ದ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯಲ್ಲಿ ಹಿಂದೂ ಧರ್ಮದ ಅವಹೇಳನ – 300 ಜಿರಳೆಗಳ ವಿರುದ್ಧ ಎಫ್ಐಆರ್
ಪಶ್ಚಿಮ ಬಂಗಾಳ ಮೂಲದ ಸಂಜಯ್ ಮತ್ತು ಬೋರೋ ಹಾಗೂ ಮದ್ಯಪ್ರದೇಶದ ಧೀರು, ವಿಜಯ್, ಕೋಬಿನ್ ಗಾಯಗೊಂಡಿದ್ದಾರೆ. ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳೆಲ್ಲಾ ಬಿಲ್ಡಿಂಗ್ ಸೆಂಟ್ರಿAಗ್ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಮನೆಯ ಸಿಮೆಂಟ್ ಶೀಟ್ಗಳು ಛಿದ್ರಛಿದ್ರಗೊಂಡಿದೆ. ಸ್ಫೋಟದಿಂದ ಮನೆಯಲ್ಲಿನ ಬಟ್ಟೆಗಳಿಗೆ ಬೆಂಕಿ ತಗುಲಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಿಕಾರಿಪುರದಲ್ಲಿ ಯುವ ಇಂಜಿನಿಯರ್ ನೇಣಿಗೆ ಶರಣು
