ಪಣಜಿ: ಅಕ್ಟೋಬರ್ 11ರಂದು ಪಣಜಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯಲ್ಲಿ ಹಿಂದೂಗಳ(Hindu) ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ 300 ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಗೋವಾ ಪೊಲೀಸರು(Goa Police) ಎಫ್ಐಆರ್ ದಾಖಲಿಸಿದ್ದಾರೆ.
ಪಣಜಿಯಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯ ವೇಳೆ ಸಿಜೆಪಿ ಮುಖಂಡರು ಮತ್ತು ಬೆಂಬಲಿಗರು ‘ಮುರ್ದಾಬಾದ್, ಮುರ್ದಾಬಾದ್, ಹಿಂದುತ್ವ ಮುರ್ದಾಬಾದ್’ ಎಂಬಂತಹ ಘೋಷಣೆಗಳನ್ನು ಕೂಗುವ ಮೂಲಕ ಧಾರ್ಮಿಕ ಅಶಾಂತಿ ಮೂಡಿಸಲು ಮತ್ತು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಪಣಜಿ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ್ ಚೋಡಣಕರ್ ತಿಳಿಸಿದ್ದಾರೆ.
ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತಂದ ಹಾಗೂ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 196 ಮತ್ತು 299ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಕುರಿತು ಈಗಾಗಲೇ ತನಿಖೆ ನಡೆಯುತ್ತಿದ್ದು, ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಮುನ್ನ ಎಚ್ಚರಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಅಕ್ಟೋಬರ್ 11ರ ಪ್ರತಿಭಟನೆಯ ವಿಡಿಯೋವನ್ನು ಆಧರಿಸಿ ತಾಲಿಗಾಂವ್ ನಿವಾಸಿ ರಾಮಪ್ರಸಾದ್ ಕೇಳ್ಕರ್ ಎಂಬುವವರು ಈ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: SIR ಪ್ರತಿಭಟನೆ ನಡುವೆಯೇ ವಿಯೆಟ್ನಾಂಗೆ ಹಾರಿದ ರಾಹುಲ್ ಗಾಂಧಿ
BIG BREAKING 🚨
Goa Police have registered an FIR against around 300 cockroaches over alleged anti-Hindutva slogans during a CJP-linked protest against CEC in Panaji.
The complaint was filed after a video of the protest surfaced on social media, showing slogans targeting Hindutva. Police have initiated an investigation into the incident.
A protest against the government or the ECI is one thing. But why bring religious hatred into it? https://t.co/BS2mMoqeo9
— Megh Updates 🚨™ (@MeghUpdates) October 19, 2026
ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ಹಾಗೂ ಎಸ್ಐಆರ್ನಲ್ಲಿನ (SIR) ವ್ಯತ್ಯಾಸಗಳನ್ನು ಖಂಡಿಸಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ಉತ್ತರ ಗೋವಾ ಜಿಲ್ಲಾಧಿಕಾರಿಗಳು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ, ಶಾಂತಿಯುತ ಪ್ರತಿಭಟನೆ ಎಂಬ ನೆಪದಲ್ಲಿ ಹಿಂದೂಗಳ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿ ಸಮಾಜದ ಶಾಂತಿ ಕದಡಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಜಿಲ್ಲಾಡಳಿತದ ಅನುಮತಿ ಇಲ್ಲದೆ ಆಜಾದ್ ಮೈದಾನ ಪ್ರವೇಶಿಸಿದ್ದ ಏಳು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ, ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ನ ನಿರ್ದೇಶನದಂತೆ ಅಕ್ಟೋಬರ್ 11ರಂದು ತಡರಾತ್ರಿ ಅವರನ್ನು ಬಿಡುಗಡೆ ಮಾಡಲಾಗಿತ್ತು.
