ಬೆಂಗಳೂರು: ದಸರಾ ಹಬ್ಬದ ಹೊತ್ತಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ (Krishna Byre Gowda) ಬೆಂಗಳೂರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಎ ಮತ್ತು ಇ ಖಾತಾದ ಜಂಟಿ ಮಾಲೀಕರು ಇಂದಿನಿಂದ ತಮ್ಮ ಪಾಲಿಗೆ ಅನುಗುಣವಾಗಿ ಉಪವಿಭಜನೆ ಮಾಡಿಕೊಂಡು ಪ್ರತ್ಯೇಕ ಇ-ಖಾತಾಗಳನ್ನು ಆನ್ಲೈನ್ ಮೂಲಕ ಪಡೆಯಲು ಅವಕಾಶ ನೀಡಲಾಗಿದೆ ಅಂತ ಪ್ರಕಟಿಸಿದ್ದಾರೆ. ಅಲ್ಲದೇ, ಅರ್ಧ ಎಕರೆಗಿಂತ ಕಡಿಮೆ ಇದ್ದರೆ ರಸ್ತೆಯ ಜಾಗದ ಮಾಲೀಕತ್ವ ಜಿಬಿಎಗೆ ನೀಡದೇ ತಾವೇ ಇಟ್ಟುಕೊಳ್ಳುವ ಅವಕಾಶ ಇದೆ.
ಜೊತೆಗೆ 1 ಎಕರೆಯೊಳಗೆ ಜಾಗ ಇದ್ದರೆ ರಸ್ತೆಗೆ ಜಾಗದ ಬದಲು ಮಾರ್ಗಸೂಚಿ ದರವನ್ನು ಕಟ್ಟಿ ಕೂಡ ತಾವು ರಸ್ತೆಯ ಮಾಲೀಕತ್ವ ಪಡೆಯಲು ಅವಕಾಶ ಇದೆ. ಖಾಲಿ ನಿವೇಶನ ಅಥವಾ ಕಟ್ಟಡ ಸಹಿತ ನಿವೇಶನಕ್ಕೆ ಮಾತ್ರ ಇದು ಅನ್ವಯ ಆಗಲಿದೆ. ಬಹುಮಹಡಿ ಕಟ್ಟಡ, ಪ್ಲ್ಯಾಟ್ಗಳಿಗೆ ಈ ನಿಯಮ ಅನ್ವಯವಾಗಲ್ಲ ಅಂತ ಸಚಿವರು ತಿಳಿಸಿದ್ದಾರೆ.
