ಹಾಸನ: ಬಿಕಾಂ ವಿದ್ಯಾರ್ಥಿನಿಯೊಬ್ಬಳು (Student) ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಹಾಸನ (Hassan) ರವೀಂದ್ರನಗರದಲ್ಲಿರುವ ಒಕ್ಕಲಿಗರ ಸಂಘದ ಮಹಿಳಾ ಹಾಸ್ಟೆಲ್ನಲ್ಲಿ ನಡೆದಿದೆ.
ಲಕ್ಷ್ಮೀ (20) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಅರಕಲಗೂಡು ತಾಲೂಕಿನ ಹೊಡೆನೂಡು ಗ್ರಾಮದ ಕೌಸಲ್ಯ-ಜಯಣ್ಣ ದಂಪತಿ ಪುತ್ರಿಯಾಗಿದ್ದ ಲಕ್ಷ್ಮೀ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದಳು. ಇಂದು (ಅ.17) ಹಾಸ್ಟೆಲ್ನಲ್ಲಿ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಗುರುಗ್ರಾಮ್ನಲ್ಲಿ ಟೆಕ್ಕಿ ದಂಪತಿ ನಿಗೂಢ ಸಾವು
ಡೆತ್ನೋಟ್ನಲ್ಲಿ ಏನಿದೆ?
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ʻಸಾರಿ ಅಮ್ಮ, ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳ್ಳಿಸಿಕೊಳ್ಳಲು ಆಗಲಿಲ್ಲ. ಯಾರಿಗೂ ಯಾವತ್ತು ಮೋಸ ಮಾಡಲಿಲ್ಲ. ಯಾರಿಗೂ ಕಣ್ಣಲ್ಲೂ ನೀರು ಹಾಕ್ಸಿಲ್ಲ. ಯಾರ ಹತ್ರನೂ ಕಿತ್ಕಂಡು ತಿಂದಿಲ್ಲ ಅಮ್ಮ. ಆದರೂ ಜೀವನ ತುಂಬಾ ಅನ್ಯಾಯ ಮಾಡಬಿಡ್ತು ಅಮ್ಮ. ಮೆಂಟಲಿ ವೀಕ್ ಆಗ್ಬಿಟ್ಟೆ. ಎಷ್ಟು ಟ್ರೈ ಮಾಡಿದ್ರೂ ಬದುಕೊಕೆ ಆಗಲಿಲ್ಲ. ನನ್ನ ಸ್ವಾರ್ಥಕ್ಕೆ ಜೀವನ ಪೂರ್ತಿ ನಿನಗೆ ನೋವು ಕೊಟ್ಟು ಹೋಗ್ತಿದ್ದೀನಿ. ಸಾರಿ ಅಪ್ಪಾಜಿ, ನನ್ನ ಮೇಲೆ ಕೋಪ ಮಾಡ್ಕೋಬೇಡಿ. ನನಗೆ ಬೇರೆ ದಾರಿ ತಿಳಿಯಲಿಲ್ಲ. ತಮ್ಮ, ನಿನ್ನ ಅಕ್ಕ ಕೆಟ್ಟವಳಲ್ಲಾ ಕಣೋ. ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೋ, ನಾನು ಹೋಗ್ತಿದ್ದೀನಿ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನು ಬ್ಲೇಮ್ ಮಾಡೋದು ಬೇಡ ಗುಡ್ ಬೈ ಎಂದು ಬರೆದಿದ್ದಾಳೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಬಾಡಿಗೆ ಮನೆಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು; 6 ತಿಂಗಳ ಬಳಿಕ ತನಿಖೆಯಲ್ಲಿ ಸತ್ಯ ರಿವೀಲ್
