ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಕಾವ್ಯಾ ಮಾರನ್ (Kavya Maran) ಹಾಗೂ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಮದುವೆ ನವೆಂಬರ್ 21ಕ್ಕೆ ಮದುವೆ ನಡೆಯಲಿದೆ.
Chief Minister Joseph Vijay has been invited for Kaviya Maran × Anirudh Ravichander wedding reception. ❤️ https://t.co/84kHwW0QzG
— Johns. (@CricCrazyJohns) October 17, 2026
ಕಳೆದ ಒಂದು ವರ್ಷದಿಂದ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಮತ್ತು ಅಲ್ಲಿ ಡಿನ್ನರ್ ಡೇಟ್ ಎಂಜಾಯ್ ಮಾಡುತ್ತಿದ್ದರು ಎಂಬ ಗಾಸಿಪ್ಗಳು ಹರಿದಾಡುತ್ತಿದ್ದವು. ಈಗ ಈ ಊಹಾಪೋಹಗಳೆಲ್ಲ ನಿಜವಾಗಿವೆ. ಕೊನೆಗೂ ಅನಿರುದ್ಧ-ಕಾವ್ಯಾ ವಿವಾಹ ಶೀಘ್ರದಲ್ಲೇ ನಡೆಯಲಿದೆ. ಮದುವೆಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೂ ಆಹ್ವಾನ ನೀಡಲಾಗಿದೆ.
ಕಾವ್ಯಾ ಮಾರನ್ಗೆ ಈಗ 33 ವರ್ಷ ಮತ್ತು ಅನಿರುದ್ಧಗೆ 35 ವರ್ಷ ವಯಸ್ಸು ಮತ್ತು ಸ್ಟೇಟಸ್ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ತಮ್ಮ ಹಾಡಿನ ಮೂಲಕವೇ ಎಲ್ಲರನ್ನೂ ಕುಣಿಸಿವ ಅನಿರುದ್ಧ್ ಮದುವೆ ಮೂಲಕ ಹೊಸ ಹೆಜ್ಜೆ ಹಾಕಲು ಮುಂದಾಗಿದ್ದಾರೆ.ಇದನ್ನೂ ಓದಿ: ಕೋಮಲ್ ನಟನೆಯ ರಿಲ್ಯಾಕ್ಸ್ ಸಿನಿಮಾದ ಸಾಂಗ್ ರಿಲೀಸ್

ಕಲಾನಿಧಿ ಮಾರನ್ ದಂಪತಿ 21ರಂದು ನಡೆಯಲಿರುವ ಆರತಕ್ಷತೆಗೆ ಅನೇಕ ಗಣ್ಯರು ಮತ್ತು ಆಪ್ತರಿಗೆ ಆಹ್ವಾನ ನೀಡಿದ್ದಾರೆ.ಇದನ್ನೂ ಓದಿ: ನಮ್ಮ ಇತಿಹಾಸ, ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು: ಯಶ್
