– ನ್ಯಾಯಾಲಯವನ್ನೇ ಬ್ಲ್ಯಾಕ್ಮೇಲ್ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ
– ದೆಹಲಿ ಪ್ರತಿಭಟನ ರಾಜಕೀಯ ಪ್ರೇರಿತ
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಮೋಹಳ್ಳಿ ಸಮೀಪದ ಭೀಮನಕುಪ್ಪೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಅಸ್ಸಾಂ ಭವನ’ವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಶುಕ್ರವಾರ ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿಗಳ ಜೊತೆಗೆ ಹಲವು ಗಣ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.
ಭವನ ಉದ್ಘಾಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿವಾದ ಹಾಗೂ ಕಾಂಗ್ರೆಸ್ ಹೋರಾಟದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಎಸ್ ಐಆರ್ (SIR) ಅಕ್ರಮ ಆರೋಪದ ಕುರಿತು ಮಾತನಾಡಿದ ಅಸ್ಸಾಂ ಸಿಎಂ, “ಕಾಂಗ್ರೆಸ್ ಎಲ್ಲಿ ಗೆಲ್ಲುತ್ತದೆಯೋ ಅಲ್ಲಿ ಎಸ್ಐಆರ್ ಒಳ್ಳೆಯದು, ಎಲ್ಲಿ ಸೋಲುತ್ತದೆಯೋ ಅಲ್ಲಿ ಅದು ಕೆಟ್ಟದ್ದು ಎಂದು ಬೊಬ್ಬೆ ಹೊಡೆಯುತ್ತಾರೆ. ರಾಹುಲ್ ಗಾಂಧಿ ನಿರಂತರವಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಬ್ಲ್ಯಾಕ್ಮೇಲ್ ಮಾಡಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಉದ್ಯಮಿಗಳನ್ನೂ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕಡೆಗೆ ಮೆರವಣಿಗೆ ನಡೆಸುವಂತೆ ಜನರಿಗೆ ಕರೆ ನೀಡುವ ಮೂಲಕ ದೇಶದ ಅತ್ಯುನ್ನತ ನ್ಯಾಯಾಲಯವನ್ನೇ ಬ್ಲ್ಯಾಕ್ಮೇಲ್ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
A new 6-storey Assam Bhavan in Bengaluru!
Equipped with modern amenities, it will serve as a true “Home Away from Home” for the Assamese diaspora, as well as visitors in Karnataka for medical, educational and official purposes.
In a short while, HCM Dr @himantabiswa will inaugurate the Bhawan.
— Chief Minister Assam (@CMOfficeAssam) October 16, 2026
ಭಾರತ ಶಾಂತಿಯುತ ಪ್ರಜಾಪ್ರಭುತ್ವ ರಾಷ್ಟ್ರ. ಜನರಿಗೆ ಸರ್ಕಾರ ಇಷ್ಟವಾಗದಿದ್ದರೆ ಚುನಾವಣೆಯಲ್ಲಿ ಮತದಾನದ ಮೂಲಕ ಬದಲಾಯಿಸುತ್ತಾರೆ. ಇದಕ್ಕೆ ಕರ್ನಾಟಕವೇ ಅತ್ಯುತ್ತಮ ಉದಾಹರಣೆ. ಇಲ್ಲಿ ಕೆಲವೊಮ್ಮೆ ಜನ ಬಿಜೆಪಿಗೆ ಅಧಿಕಾರ ಕೊಡುತ್ತಾರೆ, ನಂತರ ಬಿಜೆಪಿಯನ್ನು ಕೆಳಗಿಳಿಸಿ ಕಾಂಗ್ರೆಸ್ಗೆ ಅವಕಾಶ ನೀಡುತ್ತಾರೆ, ಮತ್ತೆ ಕಾಂಗ್ರೆಸ್ಗೆ ಗೇಟ್ಪಾಸ್ ನೀಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳನ್ನು ಬದಲಾಯಿಸುವ ಅಂತಿಮ ಶಕ್ತಿ ಇರುವುದು ಜನರ ಬಳಿ ಎಂದರು.
#WATCH Bengaluru, Karnataka: Assam Chief Minister Himanta Biswa Sarma says, “Today we are going to inaugurate an Assam Bhawan in Bengaluru. This will be the first Assam Bhawan in Bengaluru…. Now Assamese people can come and stay here.”
He further says, “When you discuss the SIR, you should also pay attention to your own ethics… Until your own Chief Minister in Kerala resigns, you cannot raise the SIR issue because you cannot have everything at once… Where they win, SIR is fine, and where they lose, SIR becomes bad. Rahul Gandhi is trying to blackmail institutions… He has no vision for India…”
— ANI (@ANI) October 16, 2026
ನೀವು ಚುನಾವಣಾ ಆಯೋಗವನ್ನೇ ಪ್ರಶ್ನಿಸುವುದಾದರೆ, ಮೊದಲು ನೀವು ಈಗ ಹೊಂದಿರುವ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ಗೆಲುವಿನ ಪ್ರಮಾಣಪತ್ರ ನೀಡಿದ ಅದೇ ಚುನಾವಣಾ ಆಯೋಗವೇ ನಿಮಗೂ ಪ್ರಮಾಣಪತ್ರ ನೀಡಿದೆ. ನಿಮ್ಮ ಪ್ರಮಾಣಪತ್ರ ಸರಿಯಾಗಿದೆ ಎಂದಾದರೆ ನೀವು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಿಮ್ಮಿಷ್ಟದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮದೇ ನಿಯಮಗಳ ಪ್ರಕಾರ ಆಟವಾಡಲು ಇಲ್ಲಿ ಅವಕಾಶವಿಲ್ಲ ಎಂದು ಸವಾಲು ಹಾಕಿದರು.
ದೆಹಲಿಯಲ್ಲಿ ನಡೆಯುತ್ತಿರುವುದು ಯುವಜನರ ಹೋರಾಟವಲ್ಲ. ಅದರಲ್ಲಿ ಭಾಗವಹಿಸಿರುವವರೆಲ್ಲರೂ ರಾಜಕೀಯ ವ್ಯಕ್ತಿಗಳು. ಕೇವಲ ಆಡಳಿತ ಬದಲಾವಣೆ ಮತ್ತು ಸ್ವಾರ್ಥ ರಾಜಕೀಯ ಉದ್ದೇಶಕ್ಕಾಗಿ ಈ ಹೋರಾಟ ನಡೆಯುತ್ತಿದೆ. ಸಂಪೂರ್ಣ ರಾಜಕೀಯ ಪ್ರೇರಿತವಾಗಿರುವ ಈ ಪ್ರತಿಭಟನೆಗೆ ರಾಜಕೀಯವಾಗಿಯೇ ಉತ್ತರ ನೀಡಲಾಗುವುದು. ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿದರೆ ಅವರನ್ನು ಪ್ರಶ್ನಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ಹಿಮಂತ ಬಿಸ್ವ ಶರ್ಮಾ ಸ್ಪಷ್ಟಪಡಿಸಿದರು.

