-ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರಾಗಿ ಪ್ರಮಾಣ ವಚನ
ಬೆಂಗಳೂರು: ಕರ್ನಾಟಕದ 20ನೇ ರಾಜ್ಯಪಾಲರಾಗಿ ಹಾಗೂ ರಾಜ್ಯದ ಎರಡನೇ ಮಹಿಳಾ ರಾಜ್ಯಪಾರಾಗಿ ಡಾ. ಸುಧಾ ಯಾದವ್ (Sudha Yadav) ಅವರಿಂದು (ಅ.16) ಪ್ರಮಾಣ ವಚನ ಸ್ವೀಕರಿಸಿದರು.
ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ನೂತನ ರಾಜ್ಯಪಾಲರಿಗೆ ಸಿಎಂ ಡಿಕೆ ಶಿವಕುಮಾರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನಿರ್ಗಮಿತ ರಾಜ್ಯಪಾಲ ಗೆಹ್ಲೋಟ್ ಶುಭ ಕೋರಿದರು. ಇದನ್ನೂ ಓದಿ: ಸಿದ್ರಾಮಯ್ಯ ವಿರುದ್ಧ ಸ್ಟಿಂಗ್ ಆರೋಪ ಕೇಸ್ – ʻಕರ್ನಾಟಕ ಹನಿಟ್ರ್ಯಾಪ್ʼ ಯೂಟ್ಯೂಬ್ ಸಬ್ಸ್ಕ್ರೈಬ್ ಆದ 54 ಜನರ ವಿಚಾರಣೆಗೆ ತಯಾರಿ!
ಡಾ. ಸುಧಾ ಯಾದವ್ ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರಾಗಿದ್ದಾರೆ. ವಿ.ಎಸ್. ರಮಾದೇವಿ ಅವರು 1999-2002ವರೆಗೆ ಕರ್ನಾಟಕ ಮೊದಲ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಡಾ. ಸುಧಾ ಯಾದವ್ ಎರಡನೇ ಮಹಿಳಾ ರಾಜ್ಯಪಾಲರಾಗಿ ಇಂದಿನಿಂದ ಕೆಲಸ ಪ್ರಾರಂಭ ಮಾಡಲಿದ್ದಾರೆ.
ಪ್ರಮಾಣ ವಚನಕ್ಕೂ ಮುನ್ನ ಡಾ. ಸುಧಾ ಯಾದವ್ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಡಿಸಿಎಂ ಪರಮೇಶ್ವರ್, ಸಿ.ಟಿ.ರವಿ, ವಿಜಯೇಂದ್ರ ಸೇರಿ ಹಲವರು ಭಾಗಿಯಾಗಿದ್ದರು.ಇದನ್ನೂ ಓದಿ: ಸೈಟು ಒತ್ತುವರಿದಾರರ ಮಾಹಿತಿ ನೀಡಿ.. 4 ಲಕ್ಷದ ವರೆಗೆ ಬಹುಮಾನ ಗೆಲ್ಲಿ – ಬಿಡಿಎ ಬಂಪರ್ ಆಫರ್

