ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ಬಹುನಿರೀಕ್ಷಿತ `ರಾಮಾಯಣ’ (Ramayana) ಸಿನಿಮಾ ಅಬ್ಬರಿಸಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಸಿನಿಮಾ ಮತ್ತೊಂದು ಟ್ರೇಲರ್ ರಿಲೀಸ್ ಮಾಡಿದ್ದು, ಪ್ರಭು ಶ್ರೀರಾಮನಾಗಿ ರಣಬೀರ್ ಕಪೂರ್ (Ranbir Kapoor) ಹಾಗೂ ರಾವಣನಾಗಿ ಯಶ್ (Yash) ಮಿಂಚಿರುವ ಹೊಸ ಅವತಾರಗಳನ್ನು, ಚಿತ್ರದಲ್ಲಿನ ಭವ್ಯಲೋಕವನ್ನು ಅನಾವರಣಗೊಳಿಸಿದೆ.
ಇದೇ ನವೆಂಬರ್ 5ರಂದು ಸಿನಿಮಾ ರಿಲೀಸ್ ಆಗಲಿರುವ ಹಿನ್ನೆಲೆ `ರಾಮಾಯಣ’ ಚಿತ್ರತಂಡವು ಎರಡನೇ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಈ ಟ್ರೇಲರ್ನಲ್ಲಿ ರಣಬೀರ್ ಕಪೂರ್, ಯಶ್ ವಿಭಿನ್ನ ಲುಕ್, ಶೌರ್ಯ, ಅಸುರರ ಸಂಹಾರ ಅಬ್ಬರಿಸಿದೆ. ಇದನ್ನೂ ಓದಿ: ನಮ್ಮ ಇತಿಹಾಸ, ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು: ಯಶ್

Ramayana: Rise of Legend – New Trailer (Kannada)
Mankind’s greatest story comes to life.
From the visual artists behind The Odyssey and Dune watch the new trailer for RAMAYANA: RISE OF A LEGEND – exclusively in theatres, IMAX and Premium Large Formats worldwide November 5. https://t.co/n7HJDFHwvl
— The World Of Ramayana (@WorldOfRamayana) October 15, 2026
ಇನ್ನೂ ಕುನಾಲ್ ಕಪೂರ್ (Kunal Kapoor) ಇಂದ್ರದೇವನಾಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನವರ ಸಂರಕ್ಷಣೆಗಾಗಿ ರಾಮನ ಹೋರಾಟ, ಸೀತೆಯನ್ನು ಅಪಹರಿಸಿದ ರಾವಣ ಪ್ರತಿಜ್ಞೆ ಹಾಗೂ ಪತಿಗಾಗಿ ಸೀತೆಯ ತ್ಯಾಗ ಎಲ್ಲವೂ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದೆ. ಈ ಇಂಟರ್ನ್ಯಾಷನಲ್ ಟ್ರೇಲರ್ ಅನ್ನು ನಿನ್ನೆ (ಅ.15) ಬೆಂಗಳೂರಿನಲ್ಲಿ ನಡೆದ ಇವೆಂಟ್ನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್, ರವಿ ದುಬೆ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸಿದ್ದರು.
ರಾಮಾಯಣದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನು ಸೀತೆಯನ್ನು ಅಪಹರಿಸಿದಾಗ, ಆಕೆಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಜಟಾಯು ಪಾತ್ರಕ್ಕೆ ಅವರು ಅನುಪಮ್ ಖೇರ್ ಧ್ವನಿ ನೀಡಿದ್ದಾರೆ.ಇದನ್ನೂ ಓದಿ: ನ.5ರಂದು ರಾಷ್ಟ್ರಪತಿ ಭವನದಲ್ಲಿ ರಾಮಾಯಣ ಸಿನಿಮಾ ಪ್ರದರ್ಶನ

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ `ರಾಮಾಯಣ’ ಚಿತ್ರವನ್ನು, ನಮಿತ್ ಮಲ್ಹೋತ್ರಾ ಅವರ `ಪ್ರೈಮ್ ಫೋಕಸ್ ಸ್ಟುಡಿಯೋಸ್’, ಡಿಎನ್ಇಜಿ ಮತ್ತು ಯಶ್ ಅವರ`’ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸುತ್ತಿವೆ. ಇದೊಂದು ಎರಡು ಭಾಗಗಳ ಮಹಾಕಾವ್ಯವಾಗಿದ್ದು, ಮೊದಲ ಭಾಗವು 2026ರ ನವೆಂಬರ್ 5ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗವು 2027ರ ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರ ಭಾರತದಾದ್ಯಂತ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿವೆ.ಇದನ್ನೂ ಓದಿ:ನ.5 ರಂದೇ ವಿಶ್ವದಾದ್ಯಂತ ಏಕಕಾಲಕ್ಕೆ ‘ರಾಮಾಯಣ ಪಾರ್ಟ್ 1’ ರಿಲೀಸ್!


