ಶ್ರೀನಗರ: ಲಡಾಖ್ಗೆ (Ladakh) 3,350 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನ ಪ್ರಧಾನಿ ನರೇಂದ್ರ ಮೋದಿ (PM Modi) ಕೊಡುಗೆಯಾಗಿ ನೀಡಲಿದ್ದಾರೆ. ಇಂದು ಐದು ಪ್ರಮುಖ ಯೋಜನೆಗಳನ್ನ ಪ್ರಧಾನಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
Tomorrow, 15th October, I will inaugurate and dedicate to the nation development projects worth around ₹3,350 crore in Ladakh via video conferencing.
These include:
New Passenger Terminal Building at Kushok Bakula Rimpochee Airport, Leh.
The Nimmu-Padum-Darcha Road, strengthening connectivity and strategic mobility.
9 MW Hanu Hydroelectric Project and power transmission infrastructure.
India’s first Petroglyph Conservation Park in Leh.
40 water bodies across 40 villages under Project Amrit Him Sarovar.
These projects will strengthen connectivity, boost development, preserve the rich heritage and improve the quality of life of the people.
https://t.co/lxu5A83SId
— Narendra Modi (@narendramodi) October 14, 2026
ಲೇಹ್ನ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದ (Kushok Bakula Rimpochee Airport) ಹೊಸ ಟರ್ಮಿನಲ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. 640 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ ಟರ್ಮಿನಲ್ 23,800 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ವಾರ್ಷಿಕವಾಗಿ 35 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನ ಈ ಟರ್ಮಿನಲ್ ಹೊಂದಿದೆ.

ಟರ್ಮಿನಲ್ನಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಭೂಶಾಖದ ಶಕ್ತಿಯನ್ನು ಬಳಸಲಾಗಿದೆ.
ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ
ಇದಲ್ಲದೇ ಲಡಾಖ್ನ ಅಭಿವೃದ್ಧಿ ಯೋಜನೆಗಳಲ್ಲಿ ವಿಮಾನ ನಿಲ್ದಾಣ, ರಸ್ತೆ ಸಂಪರ್ಕ, ನವೀಕರಿಸಬಹುದಾದ ಇಂಧನ, ಪರಂಪರೆ ಸಂರಕ್ಷಣೆ ಹಾಗೂ ಜಲ ಭದ್ರತೆಗೆ ಆದ್ಯತೆ ನೀಡಲಾಗಿದೆ.

