ನಾನಾ ಪಾಟೇಕರ್ (Nana Patekar) ವಿದೇಶದಲ್ಲಿ ಜೀವಂತವಾಗಿ ಇರಬಹುದು ಅಂತ ಬಾಲಿವುಡ್ ನಟಿ ತನುಶ್ರೀ ದತ್ತಾ (Tanushree Dutta) ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಲೈವ್ನಲ್ಲಿ ಮಾತಾಡಿರುವ ತನುಶ್ರೀ, ಬಾಲಿವುಡ್ ಅಥವಾ ಮಾಧ್ಯಮದ ಯಾರೊಬ್ಬರೂ ನಾನಾ ಪಾಟೇಕರ್ ಮೃತದೇಹವನ್ನು ನೋಡಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಸೂರ್ಯಾಸ್ತದ ನಂತರ ಸಾಮಾನ್ಯವಾಗಿ ಅಂತ್ಯಕ್ರಿಯೆ ನಡೆಸುವುದಿಲ್ಲ. ಆದರೆ, ರಾತ್ರಿ 11:28ಕ್ಕೆ ಅಂತ್ಯಕ್ರಿಯೆ ನಡೆಸುವ ಆತುರ ಏನಿತ್ತು..? ಅವರ ಕುಟುಂಬದವರಾದರೂ ಅವರ ಮುಖವನ್ನು ಸರಿಯಾಗಿ ನೋಡಿದ್ದಾರೆಯೇ..? ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಯಾವುದೇ ವಿಡಿಯೋಗಳು ಮತ್ತು ಫೋಟೋಗಳು ಏಕೆ ಇಲ್ಲ..? ಆ ನಟ ಸಿಂಗಾಪುರ ಅಥವಾ ಮಲೇಷ್ಯಾದಲ್ಲಿ ಇರಬಹುದು ಅಂತ ನಟಿಯು ಆರೋಪಿಸಿದ್ದಾರೆ.
ಅಂದಹಾಗೆ, 2008ರಲ್ಲಿ `ಹಾರ್ನ್ ಓಕೆ ಪ್ಲೀಸ್’ ಚಿತ್ರದ ಹಾಡೊಂದರ ಶೂಟಿಂಗ್ನಲ್ಲಿ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಅಂತ ತನುಶ್ರೀ ದತ್ತಾ ಮೀಟೂ ಆರೋಪ ಮಾಡಿದ್ದರು.
ನಾನಾ ಪಾಟೇಕರ್ ಅವರು ಅಕ್ಟೋಬರ್ 8 ರಂದು ಗೋವಾದ ಪಣಜಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಕೂಡ ರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟಿ ಹೃದಯಾಘಾತವಾಗಿದೆ ಅಂತ ಹೇಳಿದೆ.

