ಯಾದಗಿರಿ: ನಟ ಸುದೀಪ್ (Actor Sudeep) ವಿಚಾರದಲ್ಲಿ ಮಾಜಿ ಸಂಸದ ಉಗ್ರಪ್ಪ (Ugrappa) ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಉಗ್ರಪ್ಪ ನಡೆಯನ್ನು ಬಿಜೆಪಿ ಮಾಜಿ ಸಚಿವ ರಾಜುಗೌಡ (Raju Gowda) ತೀವ್ರವಾಗಿ ಖಂಡಿಸಿದ್ದಾರೆ.
ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿಯ ಮಾಜಿ ಸಚಿವ ರಾಜುಗೌಡ, ಯಾವುದೇ ಗಾಡ್ಫಾದರ್ ಇಲ್ಲದೆ ಕಷ್ಟಪಟ್ಟು ಬೆಳೆದಿರುವ ಮೇರು ನಟ ಸುದೀಪ್ಗೆ ಉಗ್ರಪ್ಪ ಕೂಡಲೇ ಬೇಷರತ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವ್ಯಾಪಾರಿ ಆತ್ಮಹತ್ಯೆ ಕೇಸ್ – ಬಿಜೆಪಿ ಶಾಸಕ ಹೆಚ್.ಕೆ ಸುರೇಶ್ ವಿರುದ್ಧ ಎಫ್ಐಆರ್
ವೀರಮದಕರಿ ನಾಯಕ ಜಯಂತಿಗೆ ಸುದೀಪ್ ಬಂದರೆ ತಪ್ಪೇನು? ಕಲಾವಿದನಿಗೆ ಯಾವುದೇ ಜಾತಿ ಇರಲ್ಲ ಎಂದಿದ್ದಾರೆ. ಸುದೀಪ್ ಅವರ ಹೆಲಿಕಾಪ್ಟರ್ ಬರೋದು ನೋಡಿ ಉಗ್ರಪ್ಪ ಅವರಿಗೆ ಹೊಟ್ಟೆಕಿಚ್ಚಾಗಿದೆ. ರಾಜಕೀಯವಾಗಿ ತಮ್ಮ ಅಥವಾ ಶ್ರೀರಾಮುಲು ಅವರ ಬಗ್ಗೆ ಮಾತನಾಡಲಿ, ಆದರೆ ನಟರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಹಾಗೂ ಅವಮಾನಿಸುವುದು ಸರಿಯಲ್ಲ. ಮೀಸಲಾತಿ ರದ್ದಾದಾಗ ಹೈಕೋರ್ಟ್ನಲ್ಲಿ ವಾದ ಮಾಡದ ಕಾಂಗ್ರೆಸ್ಗೆ ನೈತಿಕತೆ ಇಲ್ಲ. ಅಲ್ಲದೇ ಒಂದು ವೇಳೆ ಅಭಿಮಾನಿಗಳು ಆಕ್ರೋಶಗೊಂಡರೆ ಅದಕ್ಕೆ ಯಾರು ಹೊಣೆ ಎಂದು ಎಚ್ಚರಿಸಿದ್ದಾರೆ.
ಮಂಗಳವಾರ (ಅ.13) ಚಿತ್ರದುರ್ಗದಲ್ಲಿ ನಡೆದ ರಾಜ ವೀರಮದಕರಿ ನಾಯಕ ಜಯಂತೋತ್ಸವದ ವೇಳೆ ನೀನು ನಿಜವಾಗಿಯೂ ನಾಯಕರ ಮಗನಾಗಿದ್ದರೆ ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬಾ ಸುದೀಪ್ ಎಂದು ಬಹಿರಂಗವಾಗಿ ಏಕವಚನದಲ್ಲಿ ಮಾಜಿ ಸಂಸದ ಉಗ್ರಪ್ಪ ಸವಾಲ್ ಹಾಕಿದ್ದರು.ಇದನ್ನೂ ಓದಿ: ಚಿತ್ರದುರ್ಗ ಮದಕರಿನಾಯಕ ಜಯಂತೋತ್ಸವದಲ್ಲಿ ಕಿಚ್ಚ ಸುದೀಪ್ ಹವಾ; ಬರಿಗಾಲಲ್ಲೇ ವೇದಿಕೆಗೆ ಬಂದ ನಟ

