ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ಮುಂದಿನ 2 ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶ ಸೇರಿದಂತೆ, 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಸೆಲ್ಸಿಯಸ್ ಹಾಗೂ ಕನಿಷ್ಠ 21 ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 32-25
ಶಿವಮೊಗ್ಗ: 31-22
ಬೆಳಗಾವಿ: 31-22
ಮೈಸೂರು: 31-22

ಮಂಡ್ಯ: 31-22
ಮಡಿಕೇರಿ: 27-21
ರಾಮನಗರ: 31-22
ಹಾಸನ: 28-21
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 29-21

ಕೋಲಾರ: 28-21
ತುಮಕೂರು: 29-21
ಉಡುಪಿ: 32-25
ಕಾರವಾರ: 32-27
ಚಿಕ್ಕಮಗಳೂರು: 26-19

ದಾವಣಗೆರೆ: 32-23
ಹುಬ್ಬಳ್ಳಿ: 32-23
ಚಿತ್ರದುರ್ಗ: 30-22
ಹಾವೇರಿ: 34-20
ಬಳ್ಳಾರಿ: 33-24
ಗದಗ: 32-23
ಕೊಪ್ಪಳ: 32-24

ರಾಯಚೂರು: 34-25
ಯಾದಗಿರಿ: 34-24
ವಿಜಯಪುರ: 33-24
ಕಲಬುರಗಿ: 33-23
ಬಾಗಲಕೋಟೆ: 33-24

