ಕೊಪ್ಪಳ: ಅಂಜನಾದ್ರಿ ಬೆಟ್ಟದಿಂದ (Anjanadri Hills) ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಕ್ಕೆ ಕಳಿಸಿ, ಆಡಳಿತ ಕಚೇರಿ ಸೇರಿ ಎಲ್ಲ ಕಚೇರಿಗಳಿಗೆ ವಿದ್ಯಾದಾಸ್ ಬಾಬಾ ಬೀಗ ಜಡಿದಿದ್ದಾರೆ.
ಆಂಜನೇಯನ ಜನ್ಮ ಸ್ಥಳ ಎಂದೆ ಖ್ಯಾತಿ ಪಡೆದಿರುವ ಗಂಗಾವತಿ (Gangavathi) ತಾಲೂಕಿನ ಹನುಮನಹಳ್ಳಿ (Hanumanahalli) ಬಳಿ ಇರುವ ಅಂಜನಾದ್ರಿ ಪರ್ವತ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಅಧಿಸೂಚಿತ ದೇವಸ್ಥಾನವೆಂದು ಹೊರಡಿಸಿದ ಜಿಲ್ಲಾಡಳಿತದ ಆದೇಶವನ್ನು ಧಾರವಾಡ ವಿಭಾಗೀಯ ಪೀಠ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ವಿದ್ಯಾದ್ಯಾಸ್ ಬಾಸ್ ಬೆಟ್ಟದಿಂದ ಸಿಬ್ಬಂದಿಯನ್ನ ಕೆಳಗಿಳಿಸಿ ಆಡಳಿತ ಕಚೇರಿ ಸೇರಿದಂತೆ ಎಲ್ಲಾ ಕಟ್ಟಡಗಳಿಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೈತಪ್ಪಿದ ಅಂಜನಾದ್ರಿ ಬೆಟ್ಟ
ಆಡಳಿತ ಕಚೇರಿ, ಉಗ್ರಾಣ ಕೊಠಡಿ, ಸಂಸ್ಕ್ರತ ಪಾಠಶಾಲೆ, ಅಡುಗೆ ಕೋಣೆ ಸೇರಿ 08 ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗೆ ಬೆಟ್ಟದ ಮೇಲೆ ಬರಲು ಪ್ರವೇಶ ನಿರ್ಬಂಧ ಹೇರಲಾಗಿದೆ.
ಜಿಲ್ಲಾಡಳಿತದ ಆದೇಶವನ್ನ ಹೈಕೋರ್ಟ್ ರದ್ದು ಮಾಡಿದ ಬೆನ್ನಲ್ಲೇ ದೇವಸ್ಥಾನವನ್ನು ವಿದ್ಯಾದಾಸ್ ಬಾಬಾ ಕಬ್ಜಾ ಮಾಡಿದ್ದಾರೆ.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆ

