ಕಳೆದ ಕೆಲ ದಿನಗಳಿಂದ ಬಿರುಗಾಳಿ ಎದ್ದಿದ್ದ ಬಿಗ್‌ಬಾಸ್ (Bigg Boss) ಮನೆಯಲ್ಲಿ ಪಾಸಿಟಿವ್ ವೈಬ್ ಕಾಣಿಸ್ತಿದೆ. ವೈಯಕ್ತಿಕ ವಿಚಾರಗಳನ್ನು ಕೆದಕಿ ಜಗಳ ಮಾಡಿಕೊಂಡಿದ್ದ ಗಾನವಿ (Ganavi) ಹಾಗೂ ಗಗನ್ (Gagan) ಮನಸ್ತಾಪ ಬದಿಗಿಟ್ಟು ಸ್ನೇಹ ಬೆಳೆಸಿದ್ದಾರೆ.
ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಗಾನವಿ ಹಾಗೂ ಗಗನ್ ಪರಸ್ಪರ ಕ್ಷಮೆ ಕೇಳಿ, ಮನಸ್ತಾಪ ಬದಿಗಿಟ್ಟು ಒಂದಾಗಿದ್ದಾರೆ.
ಹಿಂದಿನ ವಾರ ಇಬ್ಬರು ಜಗಳವಾಡಿ, ವೈಯಕ್ತಿಕ ವಿಚಾರಗಳನ್ನು ಎಳೆದುತಂದಿದ್ದ ಕಾರಣ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೀಗ ಇಬ್ಬರು ಮಾತಾಡಿಕೊಂಡು ತಮ್ಮಲ್ಲಿನ ಮನಸ್ತಾಪಗಳನ್ನು ಬದಿಗಿಟ್ಟು, ಪರಸ್ಪರ ಕ್ಷಮೆಯಾಚಿಸಿದ್ದಾರೆ.
ಮನಸ್ತಾಪ side ಅಲ್ಲಿಟ್ಟು ಸ್ನೇಹ ಬೆಳೆಸೋಣ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKBBKPromo https://t.co/m2rMWN1a00
— Colors Kannada (@ColorsKannada) October 13, 2026
ಗಗನ್ ಮಾತನಾಡುತ್ತಾ, ನಿನ್ನ ಜೊತೆ ಪ್ರತಿ ಸಲ ಮಾತನಾಡುವಾಗಲೂ ಆ ಹಳೆಯ ಘಟನೆ ನೆನಪಾಗಿ ಟ್ರಿಗರ್ ಆಗುತ್ತೆ. ಅದನ್ನೆಲ್ಲಾ ಮರೆತು ನಾನಿಲ್ಲಿಂದ ಖುಷಿಯಿಂದ ಹೊರಹೋಗಬೇಕು. ಐ ಆಮ್ ಸಾರಿ ಎಂದು ಭಾವುಕರಾಗಿದ್ದಾರೆ. ಗಾನವಿ ಕೂಡ ಮಾತನಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡು, ನಮ್ಮಿಬ್ಬರ ವೈಯಕ್ತಿಕ ಜಗಳದಲ್ಲಿ ನಿನ್ನ ಫ್ಯಾಮಿಲಿಯನ್ನು ಎಳೆದು ತಂದಿದ್ದು ನಾನು ಮಾಡಿದ ಅತಿ ದೊಡ್ಡ ತಪ್ಪು. ನಿಜವಾಗಿಯೂ ಮನಸ್ಸಿನಿಂದ ಕ್ಷಮೆ ಕೇಳ್ತೀನಿ ಎಂದು ಸಾರಿ ಕೇಳಿದ್ದಾರೆ. ಕೊನೆಗೆ ಇಬ್ಬರೂ ಕೈಕುಲುಕಿ ಒಂದಾಗಿದ್ದಾರೆ.
ಬಿಗ್‌ಬಾಸ್ ರಣಾಂಗಣದಲ್ಲಿ ಪ್ರತಿ ಕ್ಷಣವೂ ಬಿರುಗಾಳಿಯೇ ಎದ್ದಿರುತ್ತೆ. ಆದರೆ ಕೆಲವೊಮ್ಮೆ ಅದೇ ರಣರಂಗದ ನಡುವೆ ಭಾವನೆಗಳ ಹೊಳೆಯೂ ಹರಿಯುತ್ತದೆ. ಇದೀಗ ಮನೆಯ ಅಂಗಳದಲ್ಲಿ ಎಮೋಷನಲ್ ಸನ್ನಿವೇಶವೊಂದು ನಡೆದಿದೆ. ಗಗನ್ ಹಾಗೂ ಗಾನವಿ ನಡುವಿನ ಮುನಿಸು, ಕ್ಷಮೆಯ ಅಧ್ಯಾಯದೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.

