ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ತೀವ್ರ ಭಯದಲ್ಲಿದ್ದಾರೆ. ಅವರಿಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಲೇವಡಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್‌ಗೆ(Supreme Court) ಪ್ರತಿಭಟನಾ ಮೆರವಣಿಗೆ ನಡೆಸುವ ಮೊದಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ಪ್ರತಿಭಟನೆಗೆ ಹೆದರಿರುವ ಜ್ಞಾನೇಶ್ ಕುಮಾರ್‌ಗೆ ರಾತ್ರಿ ನಿದ್ದೆಯೇ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಈ ಹೋರಾಟದಲ್ಲಿ ಪೊಲೀಸರು ನಮ್ಮ ಮೇಲೆ ಲಾಠಿ ಪ್ರಹಾರ ನಡೆಸುತ್ತಿರುವುದರಿಂದ ನಮಗೆ ಕಷ್ಟವಾಗುತ್ತಿದೆ ಎಂದು ನೀವು ಭಾವಿಸಬಹುದು. ಆದರೆ ನಾವು ದಣಿದಿದ್ದರೆ, ಅತ್ತ ಪೊಲೀಸರೂ ದಣಿದಿದ್ದಾರೆ. ಪೊಲೀಸ್ ಇಲಾಖೆಯ ಶೇ. 50 ರಷ್ಟು ಸಿಬ್ಬಂದಿ ನಾವು ಮಾಡುತ್ತಿರುವುದು ಸರಿ ಎಂದೇ ಹೇಳುತ್ತಿದ್ದಾರೆ. ಜ್ಞಾನೇಶ್ ಕುಮಾರ್ ಅವರಂತಹ ಕಳ್ಳನನ್ನು ನಾವೇಕೆ ರಕ್ಷಿಸಬೇಕು ಎಂದು ಪೊಲೀಸರೇ ಪ್ರಶ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ತೆರೆದಿದೆ, ಮನವಿ ಕೊಡೋ ಬದಲು ಕೋರ್ಟ್‌ಗೆ ಅರ್ಜಿ ಹಾಕಲಿ: ಸಿಜೆಐ
🔵 पहले दिन INDIA गठबंधन के नेता चुनाव आयोग जा रहे थे, हमें रोका गया और बस में डाल दिया।
🔵 दूसरे दिन हम जंतर मंतर जा रहे थे, वहां भी हमें रोक दिया गया और हमारे साथ धक्का-मुक्की हुई
🔵 तीसरे दिन विपक्ष के सारे नेता राजघाट गए
आज हम सुप्रीम कोर्ट जा रहे हैं।
: नेता विपक्ष श्री @RahulGandhi
📍 दिल्ली
— Congress (@INCIndia) October 12, 2026
ಇದು ಸಂಯಮ ಮತ್ತು ದೃಢತೆಯ ಹೋರಾಟ. ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಇದಕ್ಕೆ ದಿನಗಳು, ವಾರಗಳು, ತಿಂಗಳುಗಳು ಅಥವಾ ವರ್ಷಗಳೇ ಹಿಡಿದರೂ ಸರಿಯೇ, ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೂ ನೇರ ಎಚ್ಚರಿಕೆ ರವಾನಿಸಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದೊಳಗಿನ ಅಧಿಕಾರಿಗಳೇ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಸರ್ಕಾರದೊಳಗಿನ ಸುಮಾರು 200 ಮಂದಿ ಹಿರಿಯ ಅಧಿಕಾರಿಗಳು ಸದ್ಯ ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ನಮಗೆ ನಿರಂತರವಾಗಿ ಅಗತ್ಯ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

