ಬೀದರ್: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಸಹೋದರ ಅಮರ್ ಖಂಡ್ರೆಗೆ (Amar Khandre) ಹೈಕೋರ್ಟ್ (High Court) ನೋಟಿಸ್ ಜಾರಿ ಮಾಡಿದೆ.
ಡಿಸಿಸಿ ಬ್ಯಾಂಕ್ ಸದಸ್ಯರಾದ ಅತಿವಾಳ ಕಪಲಾಪುರ, ಶಿವರಾಜ್ ವೀರಶೆಟ್ಟಿ ಎಂಬುವರು ಅಮರ್ ಖಂಡ್ರೆ ರಾಜಕೀಯ ಪ್ರಭಾವದಿಂದಾಗಿ ನಿಯಮ ಬಾಹಿರವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಆದರೆ ಬ್ಯಾಂಕಿಂಗ್ ರೆಗ್ಯೂಲೇಶನ್ ಕಾಯ್ದೆ ಮತ್ತು ಆರ್ಬಿಐ (RBI) ತಿದ್ದುಪಡಿ ಗವರ್ನರ್ 2026ರ ಪ್ರಕಾರ ಒಬ್ಬರು ಮೂರನೇ ಅವಧಿಗೆ ಮುಂದುವರೆಯುವಂತಿಲ್ಲ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ನಂದಿನಿ ಮಿಲ್ಕ್ ಪೌಡರ್ ಸೇಫ್ – ಆಹಾರ ಸುರಕ್ಷತಾ ಇಲಾಖೆ ವರದಿ
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕಲಬುರಗಿ (Kalaburagi) ಹೈಕೋರ್ಟ್ ವಿಭಾಗೀಯ ಪೀಠ ಅಮರ್ ಖಂಡ್ರೆಗೆ ನೋಟಿಸ್ ಜಾರಿ ಮಾಡಿ, ನವಂಬರ್ 5ಕ್ಕೆ ವಿಚಾರಣೆಗೆ ಹಾಜರಾಗುವಂತ್ತ ನಿರ್ದೇಶನ ನೀಡಿದೆ.

