ಬೆಂಗಳೂರು: ನಂದಿನಿ ಮಿಲ್ಕ್ ಪೌಡರ್ (Milk Powder) ಕಲಬೆರಕೆ ಆಗಿದೆ ಎಂಬ ಆರೋಪದ ಬಳಿಕ ಇದೀಗ ಲ್ಯಾಬ್ ವರದಿ ಹೊರಬಂದಿದ್ದು, ಇದು ಸಂಪೂರ್ಣವಾಗಿ ಸುರಕ್ಷಿತ (ಸೇಫ್) ಎಂದು ತಿಳಿದುಬಂದಿದೆ.
ಈ ಹಿಂದೆ ನಂದಿನಿ ಮಿಲ್ಕ್ ಪೌಡರ್‌ನಲ್ಲಿ ಕಲಬೆರಕೆ ಆಗ್ತಿದೆ ಅನ್ನೋ ಗಂಭೀರ ಆರೋಪ ಇತ್ತು. ಇದರ ಬೆನ್ನಲ್ಲೇ ಮಿಲ್ಕ್ ಪೌಡರ್ ಗುಣಮಟ್ಟ ಟೆಸ್ಟ್ ಮಾಡಿಸಲು ಆರೋಗ್ಯ ಸಚಿವರು ಸೂಚನೆ ನೀಡಿದ್ದರು. ಬಳಿಕ ಸೆಪ್ಟೆಂಬರ್ 26ರಂದು ಕೆಎಂಎಫ್ ಡೈರಿಗಳಿಂದ ಮಿಲ್ಕ್ ಪೌಡರ್ ಸ್ಯಾಂಪಲ್ ಸಂಗ್ರಹ ಮಾಡಿ ಎಫ್‌ಎಸ್‌ಎಸ್‌ಎಐ (FSSAI) ಟೆಸ್ಟ್‌ಗೆ ಕಳಿಸಲಾಗಿತ್ತು. ಇದನ್ನೂ ಓದಿ: ದಸರಾ ರಜೆ ಹೊತ್ತಲ್ಲೇ ಪದವಿ ಪರೀಕ್ಷೆ- ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರ ಪ್ರತಿಭಟನೆ
ಇದೀಗ ಲ್ಯಾಬ್ ರಿಪೋರ್ಟ್ ಬಂದಿದ್ದು, ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅಧಿಕೃತ ವರದಿ ಬಂದಿದೆ.

