ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಅಮಾವಾಸ್ಯೆ
ನಕ್ಷತ್ರ: ಹಸ್ತಾ
ರಾಹುಕಾಲ: 9:11 – 10:40
ಗುಳಿಕಕಾಲ: 6:12 – 7:42
ಯಮಗಂಡಕಾಲ: 1:39 – 3:08
ಮೇಷ: ಪಾಲುದಾರಿಕೆಯಲ್ಲಿ ಶುಭ, ವಾಹನದಿಂದ ತೊಂದರೆ, ಬೇರೆಯವರ ಮೇಲೆ ಜಾಸ್ತಿ ಅವಲಂಬಿತರಾಗದಿರಿ.
ವೃಷಭ: ಬಂಧುಗಳೊಂದಿಗೆ ಹಣಕಾಸು ವ್ಯವಹಾರ ಬೇಡ, ಕೆಲಸದ ಪ್ರಯಕ್ತ ದೂರ ಪ್ರಯಾಣ, ಕಾನೂನು ವಿಷಯಗಳಲ್ಲಿ ಶುಭ.
ಮಿಥುನ: ಕೀಲುನೋವಿನ ಸಮಸ್ಯೆಯ ಉಲ್ಬಣ, ಕೃಷಿಯಿಂದ ಲಾಭ, ಕೆಲಸಗಳಲ್ಲಿ ಮಧ್ಯವರ್ತಿಗಳನ್ನು ನಂಬಬೇಡಿ.
ಕಟಕ: ಅಧಿಕಾರಿಗಳಿಂದ ಸಹಾಯ, ವಿದ್ಯಾರ್ಥಿಗಳಿಗೆ ಪ್ರಗತಿ, ಬಂಧುಗಳ ಆಗಮನ.
ಸಿಂಹ: ಮನೋವೈದ್ಯರಿಗೆ ಬೇಡಿಕೆ, ರೈತರಿಗೆ ಅಲ್ಪಾದಾಯ, ಆಕಸ್ಮಿಕ ಪ್ರಯಾಣ.
ಕನ್ಯಾ: ಹಿರಿಯ ಸೇನಾಧಿಕಾರಿಗಳಿಗೆ ಗೌರವ ಪ್ರಾಪ್ತಿ, ಹೊಸ ಜನರ ಪರಿಚಯ, ಆಡಳಿತಾತ್ಮಕ ವರ್ಗದವರಿಗೆ ಶುಭ.
ತುಲಾ: ಹೈನುಗಾರಿಕೆಯಲ್ಲಿ ದ್ವಿಗುಣಾದಾಯ, ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ, ಕಲಾವಿದರಿಗೆ ಶುಭ.
ವೃಶ್ಚಿಕ: ತಂದೆಯಿಂದ ಕೆಲಸಗಳಿಗೆ ಸಲಹೆ ಲಭ್ಯ, ಸಂಗಾತಿ ಜೊತೆ ಮಾಡಿದ ವ್ಯವಹಾರದಲ್ಲಿ ಲಾಭ, ಆಪ್ತರಿಗಾಗಿ ಅಲೆದಾಟ.
ಧನಸ್ಸು: ಅಧಿಕಾರ ಪ್ರಾಪ್ತಿ, ವಾಹನ ಯೋಗ, ದೈವ ಕೃಪೆ ಇರುತ್ತದೆ.
ಮಕರ: ತಾಯಿಯ ಆರೋಗ್ಯದಲ್ಲಿ ಸುಧಾರಣೆ, ಸಂಗಾತಿಯ ಕಡೆಯವರಿಂದ ಧನಸಹಾಯ, ಅತಿಯಾಗಿ ನಂಬಿರುವವರಿಂದ ಮೋಸ.
ಕುಂಭ: ಆತುರದ ನಿರ್ಧಾರಗಳಿಂದ ಕಂಟಕ, ಇನ್ನೊಬ್ಬರ ಮಾರ್ಗದರ್ಶನವನ್ನು ಪಡೆಯಿರಿ, ಮಕ್ಕಳಿಂದ ಶುಭ.
ಮೀನ: ಜಮೀನು ಕೊಳ್ಳುವವರಿಗೆ ಶುಭ, ದುಂದು ವೆಚ್ಚ, ಅಗೋಚರ ಶತ್ರುಗಳಿಂದ ತೊಂದರೆ.

