ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (MANMUL) ಬಹುಕೋಟಿ ಹಾಲಿನ ಪುಡಿ ಕಲಬೆರಕೆ (Milk Powder Adulteration) ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ (BJP) ಕಾರ್ಯಕರ್ತರು ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಆವರಣದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಯನಗರ ಪೊಲೀಸ್ ಠಾಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಭೇಟಿ

ದೊಡ್ಡ ತಿಮಿಂಗಿಲಗಳ ರಕ್ಷಣೆಗೆ ಯತ್ನ: ಬಿಜೆಪಿ ಆರೋಪ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಾಯಕರು, ಈ ಹಾಲಿನ ಪುಡಿ ಕಲಬೆರಕೆ ಜಾಲದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳ ಕೈವಾಡವಿದೆ. ಆದರೆ, ಸರ್ಕಾರ ಕೇವಲ ನೆಪ ಮಾತ್ರಕ್ಕೆ ಕೆಲವರನ್ನು ಬಂಧಿಸಿ ಕೈತೊಳೆದುಕೊಳ್ಳಲು ಯತ್ನಿಸುತ್ತಿದೆ. ಸ್ಥಳೀಯ ಪೊಲೀಸರ ತನಿಖೆಯ ಮೇಲೆ ಸರ್ಕಾರದ ನೇರ ಹಸ್ತಕ್ಷೇಪವಿದ್ದು, ಇದರಿಂದ ಯಾವುದೇ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಬಯಲಾಗಲು ಕೂಡಲೇ ಇದನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟುಹಿಡಿದರು. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ಗಾಂಧಿ ಮತ್ತೆ ಪೊಲೀಸರ ವಶಕ್ಕೆ; ಬಸ್ ಟೈರ್ ಪಂಕ್ಚರ್ ಮಾಡಿದ ‘ಕೈ’ ಕಾರ್ಯಕರ್ತರು
ಸ್ಥಳದಲ್ಲಿ ಹೈಡ್ರಾಮಾ, ಮುತ್ತಿಗೆ ಯತ್ನ:
ಪ್ರತಿಭಟನೆಯ ವೇಳೆ ಮನ್‌ಮುಲ್ ಮುಖ್ಯದ್ವಾರದ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಮನ್‌ಮುಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಬ್ಯಾರಿಕೇಡ್‌ಗಳನ್ನು ನೂಕಿ ಗೇಟ್ ಹತ್ತಿ ಒಳನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು, ರಸ್ತೆಯುದ್ದಕ್ಕೂ ಹಾಲಿನ ಪೌಡರ್ ಚೆಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ.ವಿಜಯೇಂದ್ರ
ಇದೇ ವೇಳೆ ಮನ್‌ಮುಲ್ ಕಚೇರಿಯ ಮುಂಭಾಗ ಅಳವಡಿಸಲಾಗಿದ್ದ ಆಡಳಿತ ಮಂಡಳಿ ಸದಸ್ಯರ ಪೋಸ್ಟರ್‌ನಲ್ಲಿದ್ದ, ಹಾಲಿನ ಪುಡಿ ಹಗರಣದಲ್ಲಿ ಸದ್ಯ ಬಂಧನಕ್ಕೊಳಗಾಗಿರುವ ಮನ್‌ಮುಲ್ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಅವರ ಭಾವಚಿತ್ರಕ್ಕೆ ಬಿಜೆಪಿ ಕಾರ್ಯಕರ್ತರು ಮಸಿ ಬಳಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ ಕೇಸ್; ಶಿವಶಂಕರಪ್ಪ, ಗೀತಾ 13 ದಿನ ಇ.ಡಿ ಕಸ್ಟಡಿಗೆ

