ಧಾರವಾಡ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ 13 ಕೋಟಿ ಮತದಾರರನ್ನ ಹೊರಗಿಟ್ಟು ಜ್ಞಾನೇಶ್ ಕುಮಾರ್ ಬಿಜೆಪಿ ಗೆಲ್ಲಿಸುವ ಕುತಂತ್ರ ಮಾಡಿದ್ದಾರೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್ ಲಾಡ್ (Santosh Lad) ಆರೋಪಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂತೋಷ್ ಲಾಡ್ ಒತ್ತಾಯಿಸಿದ್ದಾರೆ. ಸರ್ಕಾರದ ಯಾವುದೇ ಅಧಿಕೃತ ಅನುಮತಿ ಇಲ್ಲದೆ ದೇಶಾದ್ಯಂತ ಸುಮಾರು 13 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಫಾರ್ಮ್ ನಂಬರ್ 6ರಲ್ಲಿ ಯಾವುದೇ ಬದಲಾವಣೆ ತರಬೇಕಾದರೂ ಚುನಾವಣಾ ಆಯೋಗದ ಮೂರು ಸದಸ್ಯರ ಜೊತೆ ಚರ್ಚಿಸಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಕಾನೂನಿನ ಗೆಜೆಟ್ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಈ ಅಕ್ರಮ ಎಸಗಿದೆ ಎಂದು ದೂರಿದ್ದಾರೆ.
ಮಹಾರಾಷ್ಟ್ರ, ಹರಿಯಾಣ, ಬಿಹಾರ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳನ್ನು ಗೆಲ್ಲಲು ಕೇಂದ್ರ ಸರ್ಕಾರ ಮತ್ತು ಜ್ಞಾನೇಶ್ ಕುಮಾರ್ ಸೇರಿ ಈ ದೊಡ್ಡ ಕುತಂತ್ರ ಮಾಡಿದ್ದಾರೆ. ಈ ರಾಜ್ಯಗಳಲ್ಲಿ ತಮಗೆ ಹಿನ್ನಡೆಯಾಗಬಹುದು ಎಂಬ ಭಯದಿಂದ ಬಿಜೆಪಿ ಪಕ್ಷವನ್ನು ಹೇಗಾದರೂ ಮಾಡಿ ಗೆಲ್ಲಿಸಲು ಇಂತಹ ದಾರಿ ಹಿಡಿದಿದ್ದಾರೆ. ರಾಜ್ಯದಲ್ಲೂ ಕೇವಲ ಅಲ್ಪಸಂಖ್ಯಾತರ ಮತಗಳನ್ನು ಟಾರ್ಗೆಟ್ ಮಾಡಿ ಡಿಲೀಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂ ಅಂಗಳ ತಲುಪಿದ ಕೋಲಾರ, ಚಿಕ್ಕಬಳ್ಳಾಪುರ `ಕೈ’ ಶಾಸಕರ ಕಿತ್ತಾಟ – ಜೋರಾಯ್ತು ಪ್ರದೀಪ್ ಈಶ್ವರ್ vs ಎಂ.ಸಿ ಸುಧಾಕರ್ ಫೈಟ್
SIR ಪ್ರಕ್ರಿಯೆ ಮುಗಿದ ತಕ್ಷಣ ಫಾರ್ಮ್ ನಂಬರ್ 7 ಬರುವುದೇ ಇಲ್ಲ. ಎಸ್‌ಐಆರ್ ಮಾಡಿದ್ದೂ ಇವರೇ, ಮ್ಯಾಪಿಂಗ್ ಮಾಡಿದ್ದೂ ಇವರೇ ಎಂದ ಮೇಲೆ ಮತ್ತೆ ಫಾರ್ಮ್ ನಂಬರ್ 7 ಯಾಕೆ ಬೇಕು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ನಕಲಿ ಮತ ಹಾಕಿಸುತ್ತಿದ್ದ ಕಾಂಗ್ರೆಸ್‌ನವರಿಗೆ SIR ನಿಂದ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ

