ಬೆಂಗಳೂರು: ಸ್ನೇಹಿತರಿಂದ ಬಿ.ಕಾಂ ವಿದ್ಯಾರ್ಥಿ ಯೋಗೇಶ್ ಹತ್ಯೆ ಮಾಡಿದ್ದ ಹಂತಕರನ್ನ ಅನ್ನಪೂರ್ಣೇಶ್ವರಿ ನಗರ (Annapoorneshwari Nagar) ನಾಲ್ವರನ್ನ ಬಂಧನ ಮಾಡಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳು ಕೂಡ ಅಪ್ರಾಪ್ತರೆಂದು ತಿಳಿದು ಬಂದಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಕೊಲೆ ಹಿಂದಿನ ಕಹನಿಯನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನಾಪತ್ತೆ
ಯೋಗೇಶ್ ಹತ್ಯೆಗೆ ಆರೋಪಿಗಳು ಆನ್ಲೈನ್ನಲ್ಲಿ ಚಾಕು ಬುಕ್ ಮಾಡಿ ತರಿಸಿಕೊಂಡಿದ್ದರು. ಆರೋಪಿ ಪ್ರೀತಿಸುತ್ತಿದ್ದ ಯುವತಿಗೆ ಕೊಲೆಯಾದ ಯುವಕ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಅನ್ನೋ ಕಾರಣಕ್ಕೆ ಹತ್ಯೆ ಮಾಡಿರೋದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಬಂಧಿತ ಆರೋಪಿಗಳು ಯೋಗೇಶ್ನನ್ನು ಕೂತು ಮಾತನಾಡುವ ಎಂದು ಕರೆಸಿಕೊಂಡು ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪ್ಲ್ಯಾನ್ನಂತೆ ಚಾಕುವಿನಿಂದ ಎದೆಯ ಭಾಗಕ್ಕೆ ಬಲವಾಗಿ ಚುಚ್ಚಿದ್ದರು. ಯೋಗೇಶ್ ಎದೆಗೆ ಬಲವಾಗಿ ಚುಚ್ಚಿದ್ದರಿಂದ ರಕ್ತಸ್ರಾವವಾಗಿ ಚಿಕಿತ್ಸೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಎಪಿ ನಗರ ಪೊಲೀಸರು ನಾಲ್ವರನ್ನ ಬಂಧಿಸಿದ್ದು ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧಾರವಾಡ ಕೋರ್ಟ್ ಆವರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ರೌಡಿಶೀಟರ್

