ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತದ ಸ್ಟಾರ್ ಕುಸ್ತಿಪಟು ಅಮನ್ ಸೆಹ್ರಾವತ್(Aman Sehrawat) ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ (Gold Medal) ಗೆದ್ದಿದ್ದಾರೆ.
ಉತ್ತರ ಕೊರಿಯಾದ ಸಾಂಗ್ ಹ್ಯಾನ್ (Han Chong Song) ಅವರ ವಿರುದ್ಧ 11-07 ಅಂತರದಿಂದ ಜಯ ಸಾಧಿಸಿದರು. 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಮನ್, ಈ ಬಾರಿ ತಮ್ಮ ಪದಕದ ಬಣ್ಣವನ್ನು ಚಿನ್ನಕ್ಕೆ ಬದಲಾಯಿಸುವಲಲ್ಲಿ ಯಶಸ್ವಿಯಾಗಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ, ವೈಯಕ್ತಿಕ ಒಲಿಂಪಿಕ್ ಪದಕ ಜಯಿಸಿದ ಅತ್ಯಂತ ಕಿರಿಯ ಭಾರತೀಯ (21 ವರ್ಷ) ಎಂಬ ಐತಿಹಾಸಿಕ ದಾಖಲೆಯನ್ನು ಇವರು ಬರೆದಿದಿದ್ದರು.
ಅಮನ್ ಸೆಹ್ರಾವತ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಇಂದು ಒಟ್ಟು 4 ಚಿನ್ನದ ಪದಕ ಸೇರಿ 20 ಗೋಲ್ಡ್ ಮೆಡಲ್ ಗೆದ್ದುಕೊಂಡಿದೆ. ಗಾಲ್ಫ್‌ನಲ್ಲಿ ಮೈಸೂರಿನ ಪ್ರಣವಿ ಅರಸ್, ರಿಕರ್ವ್ ಅರ್ಚರಿಯಲ್ಲಿ ಕುಂಕುಮ್, ಕ್ರಿಕೆಟ್‌ನಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.

