ಬೆಂಗಳೂರು: ಸಚಿವ ಬಾಲಕೃಷ್ಣ (HC Balakrishna) ಸರ್ಕಾರಿ ಜಮೀನು ನಕಲಿ ದಾಖಲೆ ಸೃಷ್ಟಿ ಮಾಡಿ 36 ಎಕರೆ ಜಾಗ ಲೂಟಿ ಮಾಡಿದ್ದಾರೆ ಅಂತ ಮಾಜಿ ಶಾಸಕ ಮಾಗಡಿ ಮಂಜುನಾಥ್ (A. Manjunath) ದಾಖಲಾತಿ ಸಮೇತ ಆರೋಪ ಮಾಡಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಸಚಿವ ಬಾಲಕೃಷ್ಣ ತಾವರೆಕೆರೆ ಕುರುಬಹಳ್ಳಿ ಬಳಿ 36 ಎಕರೆ ಜಮೀನು ಕಬಳಿಸಿದ್ದಾರೆ. ಅವರ ಹೆಂಡತಿ ಹೆಸರಿಗೆ 10 ಎಕರೆ ಮಾಡಿಸಿದ್ದಾರೆ. 26 ಎಕರೆ ಅವರ ಜೊತೆ ಇರೋ ವ್ಯಕ್ತಿ ನಟರಾಜ ನಾಯ್ಡು ಅನ್ನೋರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ದಾಖಲಾತಿ ಸೃಷ್ಟಿ ಮಾಡಿದ್ದಾರೆ. ಉಳುಮೆ ಚೀಟಿಯಿಂದ ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ. 50-60 ವರ್ಷಗಳಿಂದ ಉಳುಮೆ ಮಾಡುತ್ತಿರುವವರನ್ನು ಬೆದರಿಸಿ ಅವರನ್ನ ಹೊರಗೆ ಹಾಕಿದ್ದಾರೆ. ಸಿಎಂ ಪಾರದರ್ಶಕವಾಗಿ ಇದ್ದರೆ ಕೂಡಲೇ ಈ ಜಮೀನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದರು. ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ; ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ, ಹಲವೆಡೆ ಹಾನಿ
ಐಎಎಸ್ ಅಧಿಕಾರಿ ಜೊತೆ ಸೇರಿಕೊಂಡು, ಅಧಿಕಾರಿಗಳನ್ನು ಸೇರಿಸಿಕೊಂಡು ಈ ಅಕ್ರಮ ಮಾಡಿದ್ದಾರೆ. ರಾಜ್ಯಪಾಲರಿಗೆ ಸಮಯ ಕೇಳಿದ್ದೇವೆ. ಅವರು ಸಮಯ ಕೊಟ್ಟ ಮೇಲೆ ಬಾಲಕೃಷ್ಣ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿ

