ನವದೆಹಲಿ: ಭಗವಾನ್ ಶಿವ(Shiva) ಮತ್ತು ಶ್ರೀರಾಮನನ್ನು(Rama) ಉಲ್ಲೇಖಿಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
“ನಾವು ದ್ರಾವಿಡರು, ಅವರು ಆರ್ಯರು. ನಮ್ಮ ಶಿವ ಬಡವರ ದೇವರು, ಅವರ ಶ್ರೀರಾಮ ಶ್ರೀಮಂತರ ದೇವರು” ಎಂದು ಹೇಳುವ ಮೂಲಕ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ” ದಕ್ಷಿಣ ಭಾರತದ ನಾವು ದ್ರಾವಿಡರು ಮತ್ತು ಶಿವನ ಭಕ್ತರು. ಅವರು ಆರ್ಯರು ಮತ್ತು ಶ್ರೀರಾಮನ ಆರಾಧಕರು. ಜನರು ಈ ಇಬ್ಬರೂ ದೇವರುಗಳನ್ನು ಪೂಜಿಸುತ್ತಾರೆ. ಆದರೆ ಬಿಜೆಪಿ ಉತ್ತರ ಭಾರತದಲ್ಲಿ ಶ್ರೀರಾಮನನ್ನು ರಾಜಕೀಯವಾಗಿ ಕಸಿದುಕೊಂಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ಬಲವಾಗಿ ನೆಲೆಯೂರಲು ಸಾಧ್ಯವಾಯಿತು” ಎಂದು ವ್ಯಾಖ್ಯಾನಿಸಿದರು.
మేము ద్రవిడియన్లం, ఉత్తరాదిలు ఆర్యన్లు ..
మేము శివుడి భక్తులం, ఇక్కడి వాళ్లు రాముడి భక్తులు
రాముడిని బీజేపీ దొంగలించింది.. ఇది ఒక భావోద్వేగం..
జైశ్రీరాం అని చెప్పే మోదీ, బీజేపీ వాళ్లు ఎన్నడైనా హరహరమహాదేవ్ అని చెప్పారా? ఎందుకు చెప్పరు?
మేం హరహరమహాదేవ్ అంటే… pic.twitter.com/7jg0tlmLzy
— Aapanna Hastham (@AapannaHastham) September 28, 2026
ಬಿಜೆಪಿ ನಾಯಕರು ಎಂದಾದರೂ ವೇದಿಕೆಗಳ ಮೇಲೆ ‘ಹರ್ ಹರ್ ಮಹಾದೇವ್’ ಎಂದು ಘೋಷಣೆ ಕೂಗಿದ್ದಾರೆಯೇ? ಪ್ರಧಾನಿ ಮೋದಿಯವರು ಏಕೆ ಆ ಘೋಷಣೆ ಹಾಕುವುದಿಲ್ಲ? ಅವರು ಕೇವಲ ‘ಜೈ ಶ್ರೀರಾಮ್’ ಎನ್ನುತ್ತಾರಷ್ಟೇ. ನಾವು ‘ಹರ್ ಹರ್ ಮಹಾದೇವ್’ ಎಂದಾಗ ಅವರಿಗೆ ಅದು ಸಹಿಸಲು ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದರು. ಇದೇ ವೇಳೆ, ಸ್ವಾತಂತ್ರ್ಯ ಸಂಗ್ರಾಮದ ‘ಸೈಮನ್ ಗೋ ಬ್ಯಾಕ್’ ಮಾದರಿಯಲ್ಲೇ ಪ್ರಸ್ತುತ ದೇಶದಲ್ಲಿ ಎಸ್ಐಆರ್ (SIR) ವಿರುದ್ಧ ಬೃಹತ್ ಜನಾಂದೋಲನ ನಡೆಯಲಿದೆ ಎಂದೂ ಎಚ್ಚರಿಸಿದರು. ಇದನ್ನೂ ಓದಿ: ಮತ ಕಳ್ಳತನದ ವಿರುದ್ಧ ‘ಬೀದಿಗಿಳಿದು ಹೋರಾಡಬೇಕು’ – CWC ಸಭೆಯಲ್ಲಿ ರಾಹುಲ್ ಗಾಂಧಿ ಕರೆ
ರೇವಂತ್ ರೆಡ್ಡಿ ಅವರ ಈ ವಿಭಜಕ ಹೇಳಿಕೆಗೆ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಈಗ ಹಿಂದೂ ದೇವರುಗಳ ನಡುವೆಯೂ ರಾಜಕೀಯ ವಿಭಜನೆ ಸೃಷ್ಟಿಸಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗದೊಂದಿಗೆ ಇರುವ ಅವಿನಾಭಾವ ಸಂಬಂಧ ಇಡೀ ದೇಶಕ್ಕೇ ತಿಳಿದಿದೆ. ಅವರು ತೆಲಂಗಾಣದ ಪ್ರಸಿದ್ಧ ವೇಮುಲವಾಡದ ರಾಜರಾಜೇಶ್ವರ (ಶಿವ) ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಭಗವಾನ್ ಶಿವ ಮತ್ತು ರಾಮನನ್ನು ಬೇರ್ಪಡಿಸುವ ಕಾಂಗ್ರೆಸ್ಸಿನ ಹೀನ ಸಂಸ್ಕೃತಿಯನ್ನು ಜನ ಒಪ್ಪುವುದಿಲ್ಲ ಎಂದು ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ.

