ಬೆಂಗಳೂರು: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಸರ್ಕಾರ ಬಿಗ್ ಶಾಕ್ ನೀಡಲು ತಯಾರಾಗಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಹೆಚ್ಚಿಸಲು ಸರ್ಕಾರ ಸಮ್ಮತಿ ನೀಡಿದೆ. ಈ ಬೆನ್ನಲ್ಲೇ ಇದೀಗ ಮೊಸರು, ಬಸ್ ಪ್ರಯಾಣ ದರ, ಬೆಣ್ಣೆ -ತುಪ್ಪ ಸೇರಿದಂತೆ ಹಲವು ಸಿಹಿ ಉತ್ಪನ್ನಗಳೂ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಹೀಗಾಗಿ ರಾಜ್ಯದ ಜನರಿಗೆ ನವರಾತ್ರಿಗೆ ಸಾಲು ಸಾಲು ಬೆಲೆಯೇರಿಕೆ ಬರೆ ಬೀಳಲಿದೆ. ನವರಾತ್ರಿ ಸಮಯದಲ್ಲಿಯೇ ಹಾಲಿನ ದರ ಏರಿಕೆಗೆ ಮುಹೂರ್ತ ನಿಗದಿಯಾಗಿದ್ದು, ಲೀಟರ್ ಹಾಲಿನ ದರಕ್ಕೆ 5 ರೂಪಾಯಿವರೆಗೂ ಏರಿಕೆಯ ಆತಂಕ ಶುರುವಾಗಿದೆ.

ಈ ಬೆನ್ನಲ್ಲೇ ಹಾಲಿನ ದರದ ಜೊತೆಗೆ ಮೊಸರಿನ ದರ ಏರಿಕೆಗೂ ಡಿಮ್ಯಾಂಡ್ ಇಟ್ಟಿದ್ದು, ಲೀಟರ್ ಮೊಸರು 2 ರೂವರಗೆ ಏರಿಕೆ ಸಾಧ್ಯತೆ ಇದೆ. ಹಾಲು ಮೊಸರಿನ ಜೊತೆಗೆ ಬೆಣ್ಣೆ, ತುಪ್ಪವೂ ದುಬಾರಿಯಾಗುವ ಆತಂಕ ಶುರುವಾಗಿದೆ.
ಇನ್ನೂ, ಈಗಾಗಲೇ ಬಸ್ ದರ ಏರಿಕೆ ಸುಳಿವು ಸಿಕ್ಕಿದ್ದು, ನಿಗಮಗಳು ತೀವ್ರ ನಷ್ಟದಲ್ಲಿದೆ. ಹೀಗಾಗಿ ಬಸ್‌ನ ದರವೂ ಏರಿಕೆಯಾಗುತ್ತಾ ಎನ್ನುವ ಆತಂಕ ಇದೆ. ಹಾಲಿನ ದರ ಏರಿಕೆಗೆ ಈಗಾಗಲೇ ಹೋಟೆಲ್ ಮಾಲೀಕರು ತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೇ, ಹಾಲಿನ ದರ ಏರಿಕೆ ಮುಹೂರ್ತ ಫಿಕ್ಸ್ ಆಗಿದ್ದು, ಹೋಟೆಲ್‌ನಲ್ಲಿ ಕಾಫೀ ಟೀ ದರವೂ 2-3 ರೂ. ಏರಿಕೆ ಸಾಧ್ಯತೆ ಇದೆ.

ಅಲ್ಲದೇ ಹಾಲಿನ ದರದ ಜೊತೆಗೆ ಬೇಕರಿ ಸಿಹಿ ಉತ್ಪನ್ನಗಳ ದರವೂ ಏರಿಕೆಯಾಗಲಿದೆ. ಈಗಾಗಲೇ ಬೇಕರಿ ಮಾಲೀಕರು ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.

