ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ನಡೆದಿದೆ. ಮನೆಯ ಎಲ್ಲಾ ಸದಸ್ಯರನ್ನು ಕಿಚ್ಚ ಸುದೀಪ್ ನಾಮಿನೇಟ್ ಮಾಡುವ ಮೂಲಕ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಸುಳಿವು ನೀಡಿದ್ದರು. ಹೀಗಾಗಿ ಮನೆಯಿಂದ ಒಬ್ಬ ಸ್ಪರ್ಧಿ ಹೊರಹೋಗುವುದು ಖಚಿತ ಎಂಬುದು ವೀಕ್ಷಕರಿಗೆ ತಿಳಿದಿತ್ತು. ಆದರೆ, ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಮಾತ್ರ ಎಲ್ಲರಲ್ಲೂ ಇತ್ತು.
ಬಿಗ್ ಬಾಸ್ ಮನೆಯಲ್ಲಿ EMERGENCY EXIT!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/tXQKTyDSKr
— Colors Kannada (@ColorsKannada) September 24, 2026
ಎಲಿಮಿನೇಷನ್ ಇರಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರೂ, ಜನರ ಮನ ಗೆದ್ದಿದ್ದ ಹಾಗೂ ಬಿಗ್ ಬಾಸ್ ಮನೆಯೊಳಗೆ ತನ್ನದೇ ಆದ ಛಾಪು ಮೂಡಿಸಿದ್ದ ಸ್ಪರ್ಧಿಯೊಬ್ಬರು ʻಎಮರ್ಜೆನ್ಸಿ ಎಕ್ಸಿಟ್ʼ ಪಡೆಯುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಈ ಸ್ಪರ್ಧಿ ವಿನ್ನರ್ ರೇಸ್‌ನಲ್ಲಿದ್ದಾರೆ ಎಂದು ವೀಕ್ಷಕರು ಕೂಡ ಭಾವಿಸಿದ್ದರು. ಹೀಗಾಗಿ ಈ ಅನಿರೀಕ್ಷಿತ ಎಕ್ಸಿಟ್ ಎಲ್ಲರಿಗೂ ಶಾಕ್ ನೀಡಿದೆ.
ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕಾರಣದಿಂದಾಗಿ ಎಮರ್ಜೆನ್ಸಿ ಎಕ್ಸಿಟ್ ಮನೆಯ ಸದಸ್ಯರಿಗೆ ಮಾತ್ರವಲ್ಲದೆ, ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ.

ಈ ನಡುವೆ, ಮನೆಯಿಂದ ಹೊರಹೋಗುವ ಮುನ್ನ ಸ್ಪರ್ಧಿಗಳಿಗೆ ಕೊನೆಯ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಲು ಬಿಗ್ ಬಾಸ್ ಅವಕಾಶ ನೀಡಿದ್ದಾರೆ. ಈ ವೇಳೆ ಮನೆಯ ಸದಸ್ಯರು ಭಾವುಕರಾಗಿದ್ದು, ಅನಿರೀಕ್ಷಿತ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ.
ಕಿಚ್ಚ ಸುದೀಪ್ ಎಲಿಮಿನೇಷನ್ ಕುರಿತು ಘೋಷಿಸಿದ ಬಳಿಕ ಮನೆಯಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಎಲಿಮಿನೇಷನ್ ನಡೆಯಲಿದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಅಂತಿಮವಾಗಿ ಯಾರು ಹೊರಹೋಗುತ್ತಾರೆ ಎಂಬುದನ್ನು ಕೊನೆಯ ಕ್ಷಣದವರೆಗೂ ಊಹಿಸಲು ಸಾಧ್ಯವಾಗಿರಲಿಲ್ಲ.

ಎಲಿಮಿನೇಷನ್ ಇದೆ ಎಂಬುದು ಗೊತ್ತಿತ್ತು. ಆದರೆ, ಇವರೇ ಮನೆಯಿಂದ ಹೊರಹೋಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ಎಮರ್ಜೆನ್ಸಿ ಎಕ್ಸಿಟ್‌ನಿಂದಾಗಿ ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದೆ.

