ಮಂಡ್ಯ: ತಮಿಳುನಾಡಿಗೆ (Tamil Nadu) ನೀರು ಬಿಡಲ್ಲ ಎಂದಿದ್ದ ಸರ್ಕಾರ ಈಗಲೂ ನೀರು ಹರಿಸುತ್ತಿದೆ. ಹೇಮಾವತಿಯಿಂದ ಕೆಆರ್‌ಎಸ್‌ಗೆ (KRS) ನೀರು ಹರಿಸಿ ಒಳಹರಿವು ಹೆಚ್ಚಿಸಲಾಗಿದೆ.
ಇನ್ನೂ ಇತ್ತ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಯುತ್ತಿದೆ. ಹೇಮಾವತಿಯಿಂದ ನೀರು ಬಿಟ್ಟಿರುವ ಕಾರಣ ಕೆಆರ್‌ಎಸ್ ಒಳಹರಿವು 4,457 ಕ್ಯೂಸೆಕ್ ಏರಿಕೆಯಾಗಿದ್ದು, ಇಂದು ತಮಿಳುನಾಡಿಗೆ 6,634 ಕ್ಯೂಸೆಕ್ ಹೊರಹರಿವಿನ ರೂಪದಲ್ಲಿ ಹೋಗುತ್ತಿದೆ. ಇದನ್ನೂ ಓದಿ: ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ – ಬೆಂಗಳೂರಿಗೆ ಸೇರಿ 10 ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್
ಸೆ.9ರಂದು 15 ದಿನಗಳ ಕಾಲ ನೀರು ಬಿಡುವಂತೆ ಸಿಡಬ್ಲ್ಯೂಎಂಎ ಆದೇಶ ನೀಡಿದಾಗ, ನೀರು ಬಿಡಲ್ಲ, ಕೋರ್ಟ್‌ಗೆ ಹೋಗುತ್ತೇವೆ ಎಂದಿತ್ತು ಸರ್ಕಾರ. ಆದರೆ ಇತ್ತ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇನ್ನೂ ವಿಚಾರಣೆಗೆ ಬಂದಿಲ್ಲ, ಅತ್ತ ಒಂದೆರಡು ದಿನ ಹೊರತುಪಡಿಸಿ ನಿತ್ಯವೂ ತಮಿಳುನಾಡಿಗೆ ನೀರು ಹರಿಯುತ್ತಲೇ ಇದೆ. ಹೀಗೆಯೇ ಮುಂದುವರೆದರೆ ಕೆಆರ್‌ಎಸ್ ಮಾತ್ರವಲ್ಲ, ಕಬಿನಿ, ಹಾರಂಗಿ, ಹೇಮಾವತಿ ಡ್ಯಾಂಗಳು ಖಾಲಿ ಖಾಲಿಯಾಗಲಿವೆ. ಇದನ್ನೂ ಓದಿ: ಜೈಲಿನಲ್ಲಿ 5 ಸಜಾಬಂಧಿಗಳಿರುವ ಬ್ಯಾರಕ್‌ಗೆ ಪವಿತ್ರಾ ಗೌಡ ಶಿಫ್ಟ್; ಇಂದು ಜಾಮೀನು ಅರ್ಜಿ ವಿಚಾರಣೆ
124.80 ಅಡಿ ಗರಿಷ್ಟ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ 105.86 ಅಡಿಯಷ್ಟು ನೀರಿದೆ. ಇನ್ನೂ 49.452 ಟಿಎಂಸಿ ಗರಿಷ್ಟ ಸಾಮರ್ಥ್ಯವನ್ನು ಕೆಆರ್‌ಎಸ್ ಹೊಂದಿದ್ದು ಸದ್ಯ 27.761 ಟಿಎಂಸಿ ನೀರು ಮಾತ್ರ ಇದೆ. ಇದನ್ನೂ ಓದಿ: ಇಂದಿನಿಂದ 3 ದಿನ ವಿಶೇಷ ಅಧಿವೇಶನ – ಕಸ್ತೂರಿ ರಂಗನ್ ವರದಿ, ಬರದ ಬಗ್ಗೆ ಚರ್ಚೆ

