ಬೆಂಗಳೂರು: ತಮ್ಮ ಬಗ್ಗೆ ಇಡಿಗೆ ದೂರು ಕೊಟ್ಟವರು ಯಾರು ಎಂಬುದು ಗೊತ್ತು ಎಂದು ಸಚಿವರ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಡಿಗೆ ದೂರು ಕೊಟ್ಟವರು ಯಾರು ಅನ್ನೋದರ ಬಗ್ಗೆ ಸಿಎಂಗೆ ಹೇಳಿದ್ದೇನೆ. ಪಕ್ಷದ ಒಳಗಿನವರು ಇರಬಹುದು, ಇಲ್ಲದೆಯೂ ಇರಬಹುದು. ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಂಬಂಧ, ಬಿಜೆಪಿ ವೋಟರ್ ಅವರು. ಹೀಗೆ ಫಿಫ್ಟಿ ಫಿಫ್ಟಿ ಇದೆ ಎಂದಿದ್ದಾರೆ.
ಇಡಿ ಅವರು ಹೂಡಿಕೆ ಮಾಡಿದ್ದೇವೆ ಅಂದಿದ್ದಾರೆ. ನಾವು ಹೂಡಿಕೆ ಮಾಡಬೇಕು ಅಂದುಕೊಂಡಿದ್ದೆವು ಎಂದಿದ್ದೆ. ಅವರು ಹೇಳಿದ್ದು ಸರಿಯಲ್ಲ, ನಾವು ಹೇಳಿದ್ದು ಸರಿಯಲ್ಲ. ಮುಂದೆ ಅವರು ಮಾಹಿತಿ ಕೇಳ್ತಾರೆ ಅವಾಗ ನಾವು ಹೇಳುತ್ತೇವೆ. ಸಸ್ಪೆಕ್ಟ್ ಅಂತ ಅವರು ಹೇಳಿದ್ದಾರೆ ಮಾಡಿದ್ದಾರೆ ಅಂತ ಹೇಳಿಲ್ಲ. ಸಸ್ಪೆಕ್ಟ್ ಅಂದಿದ್ದಾರೆ, ಸರಿ ಇದೆ ಅದು. ನೋಟಿಸ್ ಕೊಟ್ಟರೆ ಸರಿಯಾದ ಉತ್ತರ ಕೊಡುತ್ತೇವೆ. ಸಸ್ಪೆಕ್ಟ್ ಅಲಿಗೇಶನ್ ಮುಂದೆ ತನಿಖೆ ಮಾಡ್ತೀವಿ ಅಂತಾರೆ. ಲಂಚದ ವಿಚಾರ ಪ್ರಸ್ತಾಪಿಸಿದ್ದಾರೆ. ಇವಾಗೇನು ತಪ್ಪು ಅಂತ ಅವರು ಹೇಳಿಲ್ಲ. ಸಸ್ಪೆಕ್ಟ್ ಅಂತಿದಾರೆ ಮುಂದೆ ತನಿಖೆ ಆದಾಗ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.
ಅವರದು ಅಲಿಗೇಶನ್ ಇದೆ. ಮುಂದೆ ನೋಡೋಣ. ಸಸ್ಪೆಕ್ಟ್ ಅಲಿಗೇಶನ್ ಅಂತ ಅವರು ಒಂದು ಸೇಪ್ಟಿ ಇಟ್ಟುಕೊಂಡೆ ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ. ಹೂಡಿಕೆ ಆಗಿದೆಯಾ ಇಲ್ವಾ ಅದು ಇಲ್ಲಿ ಚರ್ಚೆ ಮಾಡೋದಲ್ಲ. ಅದು ಇ.ಡಿ ಆಫೀಸಲ್ಲಿ ಮಾತಾಡ್ತೀವಿ. ನಾಳೆ ಚಾರ್ಜ್‌ಶೀಟ್ ಹಾಕಲೇಬೇಕು. ಫೈನಲ್ ರಿಸಲ್ಟ್ ಬರಬೇಕು.
40% ಹೂಡಿಕೆ ಅಂದಿದ್ದಾರೆ. ದುಡ್ಡೆ ಹೋಗಿಲ್ಲ ಎಂದಿದ್ದಾರೆ.

