– ಬೆಂಗಳೂರಲ್ಲಿ ‘ಏರ್’ ಟೆಸ್ಟಿಂಗ್ ಜಾಲ!
– ಹೊಗೆಯುಗುಳುವ ಕಂಪನಿಗಳಿಗೆ ಫೇಕ್ ಸರ್ಟಿಫಿಕೇಟ್?
ಬೆಂಗಳೂರು: ಇಲ್ಲಿನ ಥಣಿಸಂದ್ರದ ಲ್ಯಾಬ್ ಮೇಲೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ದಾಳಿ ನಡೆಸಿದ್ದಾರೆ. ನಗರದ ಅನಾಲಿಟಿಕಲ್ ರೀಸರ್ಚ್ ಸೆಂಟರ್ ಕರ್ಮಕಾಂಡ ಬಯಲಾಗಿದೆ.
ಸಿವೇಜ್ ನೀರನ್ನು ಕಂಪನಿ ನೇರವಾಗಿ ಬಿಟ್ಟಿದೆ. ಸಚಿವರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ರೇಡ್ ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿ ನೀರು ಕಲುಷಿತವಾಗುತ್ತಿದೆ. ಕೆರೆ ನೀರು, ನದಿ ನೀರು ಕಲುಷಿತಗೊಳ್ಳುತ್ತಿದೆ. ನೀರು ಪರೀಕ್ಷೆ ಮಾಡುವ ಲ್ಯಾಬ್ಗೆ ವಿಸಿಟ್ ಮಾಡಿದ್ವಿ. ಇಲ್ಲಿ ನೀರು ಸೇರಿದಂತೆ ಆಹಾರ ಪದಾರ್ಥ ಟೆಸ್ಟಿಂಗ್ ಮಾಡುತ್ತಾರೆ. ಆಗ್ರಿಮೆಂಟ್ ಪ್ರಕಾರ ಮೂವರು ಅನಾಲೈಸರ್ ಇರಬೇಕಿತ್ತು. ಇಬ್ನರು ಅನಾಲೈಸರ್ ಇಲ್ಲದೇ ಮಾಡುತ್ತಿದ್ದಾರೆ. ಸ್ಪರ್ಧೆಯ ಕಾರಣಕ್ಕೆ 5 ಸಾವಿರ ಫೀಸ್ ಇರುವ ಕಡೆ ಒಂದು ಸಾವಿರ ತೆಗೆದುಕೊಳ್ಳುತ್ತಿದ್ದಾರೆ. ಗುಂಡಿ ತೋಡಿ ನೀರು ಬಿಟ್ಟುಬಿಟ್ಟಿದ್ದಾರೆ ಎಂದು ತಿಳಿಸಿದರು.
ಬೇಕಾಬಿಟ್ಟಿ ಏರ್ ಟೆಸ್ಟ್ ಕೂಡ ಈ ಲ್ಯಾಬ್ನಲ್ಲಿ ಮಾಡ್ತಾರೆ. ಏರ್ ಟೆಸ್ಟ್ಗೆ 6 ಗಂಟೆ ಬೇಕು. ಆದರೆ, ಟೆಸ್ಟ್ ಸರಿಯಾಗಿ ಮಾಡುತ್ತಿಲ್ಲ. ತಿಂಗಳಿಗೆ ಮೂರು ಸಾವಿರ ಟೆಸ್ಟ್ ಮಾಡಿದ್ದಾರೆ. ದಾಖಲೆ ಸರಿಯಾಗಿ ಇಟ್ಟಿಲ್ಲ. ವಿಶ್ಲೇಷಣೆಗೂ ರಿಪೋರ್ಟ್ಗೂ ಟ್ಯಾಲಿನೇ ಆಗ್ತಾ ಇಲ್ಲ ಎಂದು ಆರೋಪಿಸಿದರು.
ಹೊಗೆಯುಗುಳುವ ಕಂಪನಿಗಳಿಗೆ ಫೇಕ್ ಸರ್ಟಿಫಿಕೇಟ್ ಕೊಡುವ ಜಾಲವಿದೆ. ಇಂಡಸ್ಟ್ರಿಗಳಿಗೆ ಫೇಕ್ ಸರ್ಟಿಫಿಕೇಟ್ ಕೊಡುವ ಜಾಲ ಪತ್ತೆಯಾಗಿದೆ. ದುಡ್ಡು ಕೊಟ್ಟರೆ ಅನಾಲೈಸ್ ಮಾಡದೇ ರಿಪೋರ್ಟ್ ಕೊಡುತ್ತಾರೆ. ಬೆಂಗಳೂರಿನ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ ಇದು. ಚಿಮುಣಿ ಇರುವ ಕಾರ್ಖಾನೆಗಳಿಗೆ ಕಡ್ಡಾಯ ಟೆಸ್ಟಿಂಗ್ ಇರುತ್ತೆ. ಬೇಕಾಬಿಟ್ಟಿ ವಾಯು ಮಾಲಿನ್ಯದ ರಿಪೋರ್ಟ್ ಕೊಡಲಾಗುತ್ತಿದೆ. ನೋಟಿಸ್ ನೀಡುತ್ತೇವೆ ಎಂದು ತಿಳಿಸಿದರು.
ಅನಾಲೈಸ್ ಮಾಡದೇ ಕಾಸು ಕೊಟ್ಟರೆ ಲ್ಯಾಬ್ ಟೆಸ್ಟ್ ರಿಪೋರ್ಟ್ ಸಿಗುತ್ತೆ. ಪ್ರತಿಷ್ಟಿತ ಕಂಪನಿಗಳ ಜ್ಯೂಸ್, ಬಿಸ್ಕೆಟ್ ಕೂಡ ಇಲ್ಲೇ ಟೆಸ್ಟಿಂಗ್ ಆಗುತ್ತೆ. ಫುಡ್ ಡಿಪಾರ್ಟ್ಮೆಂಟ್ಗೂ ಮಾಹಿತಿ ಕೊಡ್ತೀವಿ ಎಂದು ಹೇಳಿದರು.

