ಇನ್ಸ್ಟಾಗ್ರಾಮ್ನಲ್ಲಿ (Instagram) ಈಗ ಎಲ್ಲಿ ನೋಡಿದರೂ 80ರ ದಶಕದ ವಿಂಟೇಜ್ ಶೈಲಿಯ (Vintage Style) ಪೋಸ್ಟರ್ಗಳು ಮತ್ತು ರೆಟ್ರೋ ಫೋಟೋಗಳದ್ದೇ ಹವಾ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಹಳೆಯ ಕ್ಯಾಮೆರಾ ಫಿಲ್ಮ್, ಬೆಲ್ ಬಾಟಮ್ ಪ್ಯಾಂಟ್, ವಿಂಟೇಜ್ ಹೇರ್ಸ್ಟೈಲ್ ಹಾಗೂ ಕ್ಲಾಸಿಕ್ ಬ್ಯಾಕ್ಗ್ರೌಂಡ್ನಲ್ಲಿ ನಿಮ್ಮ ಇಂದಿನ ಫೋಟೋಗಳನ್ನು 80ರ ದಶಕದ ಸಿನಿಮಾ ಪೋಸ್ಟರ್ ಅಥವಾ ಮ್ಯಾಗಜೀನ್ ಕವರ್ನಂತೆ ಬದಲಾಯಿಸಿಕೊಳ್ಳುವುದು ಈಗಿನ ಹೊಸ ಕ್ರೇಜ್.
ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂಡು ಟ್ರೆಂಡ್ (Trend) ಬದಲಾಗುತ್ತಿರುತ್ತದೆ. ಒಂದೆರೆಡು ದಿನ ಈ ಟ್ರೆಂಡ್ ಇದ್ದರೆ.. ಇನ್ನೊಂದೆರೆಡು ದಿನದಲ್ಲಿ ಹೊಸ ಟ್ರೆಂಡ್ ಬರುತ್ತದೆ. ಆಗ ಜನ ಅದರ ಬೆನ್ನಟ್ಟಿ ಹೋಗುತ್ತಾರೆ. ಹೀಗಿರುವಾಗ ಸದ್ಯ ಈಗಿನ ಟ್ರೆಂಡ್ ಅದೇ ʻ80s’ ಫೋಟೋʼ

ಏನಿದು ರೆಟ್ರೋ 80s?
ಈ ಟ್ರೆಂಡ್ ಇಂದಿನ ಆಧುನಿಕ ಫೋಟೋಗಳನ್ನು 1980ರ ದಶಕದ ವಿಶಿಷ್ಟ ಶೈಲಿಯ ಪೋರ್ಟ್ರೇಟ್ಗಳಾಗಿ ಪರಿವರ್ತಿಸಲು ಕೃತಕ ಬುದ್ಧಿಮತ್ತೆ (AI) ಇಮೇಜ್ ಜನರೇಷನ್ ತಂತ್ರಜ್ಞಾನವನ್ನು ಬಳಸುತ್ತದೆ. ಬಳಕೆದಾರರು ತಮ್ಮದೊಂದು ಫೋಟೋವನ್ನು ಅಪ್ಲೋಡ್ ಮಾಡಿ, ಮುಖದ ಮೂಲ ಲಕ್ಷಣಗಳು ಬದಲಾಗದಂತೆ ಕಾಪಾಡಿಕೊಂಡು ರೆಟ್ರೋ ಸೌಂದರ್ಯವನ್ನು ಮರುಸೃಷ್ಟಿಸಲು ಚಾಟ್ಜಿಪಿಟಿಗೆ ಸೂಚಿಸುತ್ತಾರೆ.
ಇದರ ಫಲಿತಾಂಶವಾಗಿ ದಟ್ಟವಾದ ಹಾಗೂ ಉಬ್ಬಿದ ಕೇಶವಿನ್ಯಾಸ, ವಿಂಟೇಜ್ ಫ್ಯಾಷನ್ ಮತ್ತು ಆಭರಣಗಳು, ಫಿಲ್ಮ್ ಶೈಲಿಯ ವಿನ್ಯಾಸ, ವಿವಿಧ ಬಣ್ಣದ ಟೋನ್ಗಳು ಹಾಗೂ ಡಿಸ್ಕೋ ಅಥವಾ ಸ್ಟುಡಿಯೋಗಳಂತಹ ಕ್ಲಾಸಿಕ್ ಹಿನ್ನೆಲೆಗಳನ್ನು ಒಳಗೊಂಡ ನಾಸ್ಟಾಲ್ಜಿಕ್ ಮೇಕ್ ಓವರ್ ಸಿಗುತ್ತದೆ.

ಇನ್ಸ್ಟಾಗ್ರಾಮ್ನ “Add Yours” ಸ್ಟಿಕ್ಕರ್ ಮತ್ತು ರೀಲ್ಸ್ಗಳ ಮೂಲಕ ಬಳಕೆದಾರರು ತಮ್ಮ ರೂಪಾಂತರಗಳನ್ನು ಹಂಚಿಕೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಈ ಟ್ರೆಂಡ್ ಭಾರಿ ಸದ್ದು ಮಾಡುತ್ತಿದೆ.
ಈಗ ನೀವು ಇನ್ಸ್ಟಾಗ್ರಾಮ್ ತೆರೆದು ಸ್ಕ್ರೋಲ್ ಮಾಡಿದರೆ ಸಾಕು, ರೆಟ್ರೋ ಶೈಲಿಯ ಪೋರ್ಟ್ರೇಟ್ಗಳ ಮಹಾಪೂರವೇ ಕಣ್ಣಿಗೆ ಬೀಳುತ್ತದೆ. ಬೋಲ್ಡ್ ಹೇರ್ಸ್ಟೈಲ್ಗಳು, ವಿಂಟೇಜ್ ಉಡುಪುಗಳು, ಮೃದುವಾದ ಸ್ಟುಡಿಯೋ ಲೈಟಿಂಗ್ಗಳನ್ನು ಒಳಗೊಂಡ ಈ ಫೋಟೋಗಳು ನೇರವಾಗಿ 1980ರ ದಶಕದ ನೆನಪನ್ನು ಮರುಕಳಿಸುತ್ತಿವೆ.
ಇದುವೇ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವೈರಲ್ ಚಾಟ್ಜಿಪಿಟಿ ’80s ಫೋಟೋ ಟ್ರೆಂಡ್ ಆಗಿದ್ದು, 2026ರ ಅತ್ಯಂತ ದೊಡ್ಡ ಎಐ (AI) ಫೋಟೋ ಟ್ರೆಂಡ್ಗಳಲ್ಲಿ ಒಂದಾಗಿ ವೇಗವಾಗಿ ಬೆಳೆಯುತ್ತಿದೆ. ಇನ್ಸ್ಟಾಗ್ರಾಮ್ ಫೀಡ್ಗಳನ್ನು ಆವರಿಸಿಕೊಳ್ಳುತ್ತಿರುವ ಈ ಟ್ರೆಂಡ್, ಬಳಕೆದಾರರ ದಿನನಿತ್ಯದ ಸೆಲ್ಫಿಗಳನ್ನು ರೆಟ್ರೋ ಶೈಲಿಯ ಪೋರ್ಟ್ರೇಟ್ಗಳಾಗಿ ಬದಲಾಯಿಸುತ್ತಿದೆ.

80s ಲುಕ್ ವೈರಲ್ ಆಗುತ್ತಿರುವುದೇಕೆ?
ಈ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ (ನಾಸ್ಟಾಲ್ಜಿಯಾ) ದೊಡ್ಡ ಅಲೆಯನ್ನು ಹುಟ್ಟುಹಾಕಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಳಕೆದಾರರು ಬೋಲ್ಡ್ ಶೈಲಿಯೊಂದಿಗೆ 1980ರ ದಶಕದ ಬಾಲಿವುಡ್ನ ನೋಟಗಳು ಮತ್ತು ಮ್ಯಾಗಜೀನ್ ಶೈಲಿಯ ಭಾವಚಿತ್ರಗಳನ್ನು ಮರುಸೃಷ್ಟಿಸುತ್ತಿದ್ದಾರೆ. ವಿಂಟೇಜ್ ಫ್ಯಾಷನ್ ಮತ್ತು ಸಿನಿಮಾದ ಮೇಲಿನ ಹಂಬಲ, ವಿಭಿನ್ನ ಕಾಲಘಟ್ಟದಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವ ಕುತೂಹಲ, ಎಐ ಚಿತ್ರಗಳನ್ನು ಹಂಚಿಕೊಳ್ಳುವ ಉತ್ಸಾಹ ಮತ್ತು ಬಳಸಲು ಸುಲಭವಾದ ಎಐ ಇಮೇಜ್ ಟೂಲ್ಗಳ ಬೆಳವಣಿಗೆಯೇ ಈ ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ.
ಈ ಹಿಂದೆ ವೈರಲ್ ಆಗಿದ್ದ ಎಐ ವ್ಯಂಗ್ಯಚಿತ್ರಗಳು (caricatures) ಮತ್ತು ಘಿಬ್ಲಿ-ಶೈಲಿಯ (Ghibli-style) ಪೋರ್ಟ್ರೇಟ್ಗಳ ಹಾದಿಯಲ್ಲೇ ಇದು ಮುಂದುವರಿದಿದ್ದು, ಎಐ-ರಚಿತ ವಿಷಯಗಳು ದೃಶ್ಯ ಸಂಸ್ಕೃತಿಯನ್ನು ಎಷ್ಟು ವೇಗವಾಗಿ ರೂಪಿಸುತ್ತಿವೆ ಎಂಬುದನ್ನು ಇದು ತೋರಿಸುತ್ತದೆ.

ನಿಮ್ಮದೇ ಆದ 80ರ ದಶಕದ ಲುಕ್ ಪಡೆಯುವುದು ಹೇಗೆ?
ಈ ಟ್ರೆಂಡ್ನ ನಿಮ್ಮದೇ ಆವೃತ್ತಿಯನ್ನು ರಚಿಸಲು ಯಾವುದೇ ವೃತ್ತಿಪರ ಎಡಿಟಿಂಗ್ ಕೌಶಲ್ಯಗಳ ಅಗತ್ಯವಿಲ್ಲ. ಸರಳವಾಗಿ ಈ ಕೆಳಗಿಂತೆ ಮಾಡಿ
- ಚಾಟ್ಜಿಪಿಟಿ (ChatGPT) ತೆರೆದು ಹೊಸ ಚಾಟ್ ಆರಂಭಿಸಿ.
- ಪ್ಲಸ್ (+) ಐಕಾನ್ ಒತ್ತಿ ನಿಮ್ಮ ಸ್ಪಷ್ಟವಾದ ಭಾವಚಿತ್ರವನ್ನು ಅಪ್ಲೋಡ್ ಮಾಡಿ. ನಿಮಗೆ ಉತ್ತಮ ಬೆಳಕು ಹೊಂದಿರುವ, ಮುಂಭಾಗಕ್ಕೆ ಮುಖ ಮಾಡಿರುವ ಮತ್ತು ಸ್ವಚ್ಛವಾದ ಬ್ಯಾಕ್ಗ್ರೌಂಡ್ ಇರುವ ಫೋಟೋ ನೀಡಿ
- ಬಟ್ಟೆ, ಕೇಶವಿನ್ಯಾಸ, ಆಭರಣಗಳು, ಬ್ಯಾಕ್ಗ್ರೌಂಡ್, ಬೆಳಕು ಮತ್ತು ಒಟ್ಟಾರೆ ವಿನ್ಯಾಸದ ವಿವರಗಳನ್ನು ಒಳಗೊಂಡಂತೆ ನಿಮಗೆ ಬೇಕಾದ 1980ರ ದಶಕದ ಶೈಲಿಯನ್ನು ವಿವರಿಸಿ.
- ನಿಮ್ಮ ಮುಖದ ಲಕ್ಷಣಗಳು ಮತ್ತು ನೈಸರ್ಗಿಕ ಚರ್ಮದ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗಬಾರದು, ಆದರೆ ಶೈಲಿ ಮತ್ತು ಪರಿಸರ ಮಾತ್ರ ಬದಲಾಗಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ.
- ರಚನೆಯಾದ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಏನಾದರೂ ಸರಿಹೊಂದದಿದ್ದರೆ, ಮೊದಲಿನಿಂದ ಆರಂಭಿಸುವ ಬದಲು ಸ್ಪಷ್ಟ ಸೂಚನೆಗಳನ್ನು ನೀಡಿ ಚಿತ್ರವನ್ನು ಸರಿಪಡಿಸಿಕೊಳ್ಳಿ.

ಈ ಪ್ರಾಂಪ್ಟ್ಗಳನ್ನು ಬಳಸಿ
ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಿ ಈ ಕೆಳಗಿನ ಪ್ರಾಂಪ್ಟ್ ಅನ್ನು ಬಳಸಿ:
“Reimagine this image as a glamorous 1980s Indian film portrait. Retain the subject’s recognisable facial features and natural skin tone. Add voluminous, softly curled hair, a bold and colourful outfit, statement jewellery, warm studio-style lighting, rich cinematic tones and a subtle vintage film grain. Ensure the final image looks realistic, polished and elegant.”
ಕನ್ನಡ ಸಿನಿಮಾದ ಹಳೆಯ ಶೈಲಿಯ ಚಿತ್ರಕ್ಕಾಗಿ:
|Transform this photo into an authentic 1980s Sandalwood studio portrait. Keep my facial features and identity recognisable. Give me period-appropriate 1980s Indian clothing, hairstyle and accessories, with warm studio lighting, soft focus, subtle film grain and slightly faded colours. Make it look like a real photograph taken in India in the 1980s, not a modern photo with a vintage filter. Do not change my facial structure or make me look like a different person. Keep the result photorealistic. Avoid excessive vintage effects, sepia tones or artificial-looking ageing. The photograph should look naturally shot on an analogue camera in the 1980s.

ಹಾಲಿವುಡ್ ಶೈಲಿಯ ಚಿತ್ರಕ್ಕಾಗಿ:
Turn this photo into a glamorous 1980s Hollywood studio portrait. Keep my face and facial features unchanged. Give me period-accurate 1980s hair, makeup and clothing, with dramatic studio lighting, soft focus, subtle film grain and the look of an analogue camera.
ಹಳೆಯ ಫ್ಯಾಮಿಲಿ ಆಲ್ಬಂಗಾಗಿ:
Recreate this photo as if it were taken in an Indian family photo album in the mid-1980s. Keep the person’s face and expression natural. Add period-appropriate clothes, hairstyle and background, with a simple indoor setting, analogue camera texture, slight grain, soft lighting and realistic film colours. Avoid a modern digital look.

1980ರ ನಟಿಯರಂತೆ:
Turn this photo into a glamorous 1980s Kannada Cinema heroine portrait. Keep my face recognisable and natural. Style the hair with a voluminous 1980s look, add a colourful saree and statement jewellery, and place me in a classic Indian studio setting. Use warm lighting, soft focus, analogue film grain and the look of an old Sandalwood publicity photograph.
1980ರ ನಟರು:
Recreate this photo as a 1980s Kannada Cinema hero studio portrait. Keep my facial identity unchanged. Give me an authentic period hairstyle, moustache if appropriate, tucked or loose shirt, high-waisted trousers and a classic studio backdrop. Use analogue film grain, warm lighting and slightly faded colours. Make it look like a genuine 1980s photograph.

ಭಾರತದಲ್ಲಿ 1980ರದಲ್ಲಿ ಮದುವೆ ಆಲ್ಬಂ:
Imagine this photo was taken at an Indian wedding in the 1980s. Keep the people’s faces recognisable. Recreate the clothing, hairstyles, jewellery, decorations, lighting and photography style of an Indian wedding from that decade. Use realistic analogue film grain and colours, with the slightly imperfect look of an old family photograph.
1980ರಲ್ಲಿ ನಿಯತಕಾಲಿಕೆಗಳ ಕವರ್
Turn this photo into an Indian magazine portrait from the 1980s. Keep my face recognisable and realistic. Use period-appropriate hair, clothing, jewellery and makeup, with a simple studio background, dramatic but natural lighting, soft focus and analogue film texture. Make it look like a real editorial photograph from the decade.
ರೆಟ್ರೋ ಶೈಲಿಯ ಚಿತ್ರ
Imagine this photo was taken on an Indian street in 1987. Keep my face and identity recognisable. Recreate the surroundings, clothing, hairstyle, vehicles, signs and colours to match India in the late 1980s. Use realistic daylight, analogue film grain and the texture of a photograph printed from film.

ಇಲ್ಲಿರುವ ಪ್ರಾಂಪ್ಟ್ ಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡಿದರೆ ಸಾಕು. ಇದರೊಂದಿಗೆ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಿದರೆ ಎಐ ನಿಮ್ಮ ಫೋಟೋವನ್ನು 80s ಟ್ರೆಂಡಿಗೆ ಬದಲಾಯಿಸಿಕೊಡುತ್ತದೆ.
ಫಲಿತಾಂಶವನ್ನು ಮತ್ತಷ್ಟು ನೈಜವಾಗಿಸಲು ಸಲಹೆಗಳು:
ಕೇವಲ “Make This look Like 1980s” ಎಂಬ ಅಸ್ಪಷ್ಟ ಪ್ರಾಂಪ್ಟ್ ನೀಡಿದರೆ ಸಾಮಾನ್ಯ ಮಾದರಿಯ ಫಲಿತಾಂಶ ಬರಬಹುದು. ನಿಮ್ಮ ಸೂಚನೆಗಳು ಎಷ್ಟು ನಿರ್ದಿಷ್ಟವಾಗಿರುತ್ತವೆಯೋ, ಅಂತಿಮ ಚಿತ್ರವು ಅಷ್ಟು ವಿಶಿಷ್ಟವಾಗಿ ಮತ್ತು ಆಕರ್ಷಕವಾಗಿ ಮೂಡಿಬರುತ್ತದೆ. ವಿಶಾಲವಾಗಿ ಕೇಳುವ ಬದಲು, ನಿಮಗೆ ಬೇಕಾದ ನಿಖರವಾದ ಶೈಲಿಯನ್ನು ಸೂಚಿಸಿ. ಉದಾಹರಣೆಗೆ:
- ಬಾಲಿವುಡ್ ಶೈಲಿಯ ಸ್ಟುಡಿಯೋ ಪೋರ್ಟ್ರೇಟ್
- ಮಧ್ಯಮ ವರ್ಗದ ಭಾರತೀಯ ಕುಟುಂಬದ ಆಲ್ಬಮ್ ಶೈಲಿ
- ವಿಂಟೇಜ್ ಮದುವೆಯ ಛಾಯಾಚಿತ್ರ
- ರೆಟ್ರೋ ಡಿಸ್ಕೋ ಕಾಲದ ಲುಕ್
- ಹಳೆಯ ಮ್ಯಾಗಜೀನ್ ಮುಖಪುಟದ ಶೂಟ್
- ಫಿಲ್ಮ್-ಕ್ಯಾಮೆರಾ ಶೈಲಿಯ ಚಿತ್ರ
- ವಿವಿಧ ಹೇರ್ಸ್ಟೈಲ್ನೊಂದಿಗೆ 70ರ ದಶಕದ ಕೊನೆಯ ಅಥವಾ 80ರ ದಶಕದ ಸೀರೆ
- ಕ್ಲಾಸಿಕ್ ಕುರ್ತಾ, ಟ್ರೌಸರ್ಸ್ ಅಥವಾ ಪ್ರಿಂಟೆಡ್ ಶರ್ಟ್ ಜೋಡಿ
ಇದಲ್ಲದೆ ಬಣ್ಣಗಳ ಸಂಯೋಜನೆ, ಬ್ಯಾಕ್ಗ್ರೌಂಡ್ ಸೆಟ್ಟಿಂಗ್ ಅಥವಾ ಒಟ್ಟಾರೆ ಮೂಡ್ನಂತಹ ವಿವರಗಳನ್ನು ನಿರ್ದಿಷ್ಟಪಡಿಸುವ ಮೂಲಕ ಚಿತ್ರವನ್ನು ಇನ್ನಷ್ಟು ಉತ್ತಮಗೊಳಿಸಬಹುದು. ಒಂದು ವೇಳೆ ರಚನೆಯಾದ ಚಿತ್ರವು ಇನ್ನೂ ಆಧುನಿಕವಾಗಿಯೇ ಕಾಣಿಸುತ್ತಿದ್ದರೆ, ಅಸಲಿ ರೆಟ್ರೋ ಫಿನಿಶ್ ಪಡೆಯಲು ಪ್ರಸ್ತುತ ಫ್ಯಾಷನ್, ಹೇರ್ಸ್ಟೈಲ್ ಅಥವಾ ಹಿನ್ನೆಲೆಗಳಂತಹ ಸಮಕಾಲೀನ ಅಂಶಗಳನ್ನು ತೆಗೆದುಹಾಕುವಂತೆ ಟೂಲ್ಗೆ ಸೂಚಿಸಬಹುದು.


