ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಟೇಕಾಫ್ ಆಗಿದೆ. ಫ್ಲೈಟ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಪ್ರಯಾಣಿಕರಂತೆ ಸ್ಪರ್ಧಿಗಳು ಬೋರ್ಡಿಂಗ್ ಪಾಸ್ ಪಡೆದು ತಮ್ಮ ಸೀಟ್‌ಗಳಲ್ಲಿ ಕೂರುತ್ತಿದ್ದಾರೆ. ಅಂತಿಮವಾಗಿ ಪೈಲಟ್ ಆಗಿ ಕಿಚ್ಚ ಸುದೀಪ್ ಅವರು ಫ್ಲೈಟ್‌ನಲ್ಲಿ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕರೆದೊಯ್ಯಲಿದ್ದಾರೆ.
ಸುದೀಪ್ ಅವರಿಂದ ಎಲ್ಲಾ ಸ್ಪರ್ಧಿಗಳು ಬೋರ್ಡಿಂಗ್ ಪಾಸ್ ಪಡೆದು ತಮಗೆ ನಿಗದಿಯಾದ ಸೀಟ್‌ಗಳನ್ನು ಅಲಂಕರಿಸುತ್ತಿದ್ದಾರೆ. ದೊಡ್ಮನೆಗೆ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೇಲ್ 3’ ಖ್ಯಾತಿಯ ಜಗ್ಗ ಮಮ್ಮಿ (ಜಗದೀಶ್) ಎಂಟ್ರಿ ಕೊಟ್ಟಿದ್ದಾರೆ.
ಮಂಡ್ಯ ಮೂಲದವರಾದ ಜಗದೀಶ್ ತಮ್ಮ ಮುಗ್ದತೆ, ಹಾಸ್ಯ, ಕೀಟಲೆ ಸ್ವಭಾವದವರು. ಎಂಟ್ರಿಯಲ್ಲೇ ವೀಕ್ಷಕರನ್ನು ನಗಿಸಿದ್ದಾರೆ ಜಗ್ಗ.
ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೆಲ್ 3 ಸಿನಿಮಾದಲ್ಲಿ ‘ಜಗ್ಗ ಮಮ್ಮಿ’ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಹಳ್ಳಿಗಾಡಿನ ಜಗ್ಗ ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ದೊಡ್ಮನೆಯಲ್ಲಿ ಮೋಡಿ ಮಾಡುವ ನಿರೀಕ್ಷೆಯಿದೆ.
ಇನ್ನು 2ನೇ ಸ್ಪರ್ಧಿಯಾಗಿ ಮಂಗಳೂರು ಮೂಲದ ಮಾಡೆಲ್ ಸೌಂದರ್ಯ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕರಾವಳಿ ಚೆಲುವೆ ಜನಿಸಿದ್ದು ಮಸ್ಕತ್‌ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ತಮ್ಮ ಗ್ಲಾಮರಸ್ ಲುಕ್‌ನಲ್ಲಿ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದ್ದಾರೆ.
ಸೌಂದರ್ಯ ಶೆಟ್ಟಿ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್ 2019ರ ಕಿರೀಟ್ ಧರಿಸಿದ್ದಾರೆ. ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 16 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅಂತಿಮ ಹಂತ ತಲುಪಿ ಗಮನ ಸೆಳೆದಿದ್ದರು. ತುಂಬಾ ಕಾನ್ಫಿಡೆಂಟ್, ಸ್ಟೈಲಿಶ್ ಹುಡುಗಿ ಈಗ ದೊಡ್ಮನೆಯಲ್ಲಿ ಮೋಡಿ ಮಾಡಲು ಬಂದಿದ್ದಾರೆ.
ಬಿಗ್ ಬಾಸ್ ಮನೆಗೆ 3ನೇ ಸ್ಪರ್ಧಿಯಾಗಿ ಕನ್ನಡ ಚಿತ್ರರಂಗದ ಯುವನಟ ಅವಿನಾಶ್ ಶತಮರ್ಷನ ಎಂಟ್ರಿಯಾಗಿದೆ. 2018ರಲ್ಲಿ ತೆರೆಕಂಡ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ದೊಡ್ಮನೆಗೆ 4ನೇ ಸ್ಪರ್ಧಿಯಾಗಿ ಕನ್ನಡದ ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಎಂಟ್ರಿ ಕೊಟ್ಟಿದ್ದಾರೆ. ನಟಿ, ಡ್ಯಾನ್ಸರ್ ಆಗಿರುವ ಆಗಿರುವ ಭಾವನಾ ಟ್ರೋಫಿ ಗೆಲ್ಲುವ ಭರವಸೆಯೊಂದಿಗೆ ಬಂದಿದ್ದಾರೆ.
ಮಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಕೊಡಲು ನಟಿ ವಿನಯಾ ಪ್ರಸಾದ್ ಕೂಡ ಬಂದಿದ್ದರು. ಅವರಿಗೆ ಕಿಚ್ಚ ಸುದೀಪ್ ಗೌರವ ತೋರಿದ್ದು ಗಮನ ಸೆಳೆಯಿತು. ತಮ್ಮ ಮೊದಲ ಚಿತ್ರದ ನಿರ್ದೇಶನದಲ್ಲಿ ಹಿರಿಯ ನಟಿ ಕೂಡ ಇದ್ದರು ಎಂದು ಕಿಚ್ಚ ಸುದೀಪ್ ಈ ವೇಳೆ ನೆನಪಿಸಿಕೊಂಡರು.
