ಬೆಂಗಳೂರು: ಹೋಟೆಲ್ ಆಯ್ತು, ಕ್ಲಬ್ ಆಯ್ತು, ಪಿಜಿ ಆಯ್ತು ಈಗ ಇ-ಕಾಮರ್ಸ್ ಸರದಿ. ಇ-ಕಾಮರ್ಸ್ ವೇರ್‌ಹೌಸ್‌ಗಳ (e-Commerce Warehouses) ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆನೇಕಲ್ ಸೇರಿದಂತೆ ವಿವಿಧ ವೇರ್‌ಹೌಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆನ್‌ಲೈನಲ್ಲಿ ದಿನಸಿ ವಸ್ತುಗಳು, ಪ್ರಾಡಕ್ಟ್‌ಗಳನ್ನು ಬುಕ್ ಮಾಡುವುದಕ್ಕೂ ಮುಂಚೆ ಎಚ್ಚರವಹಿಸುವಂತೆ ಸೂಚಿಸಲಾಗಿದೆ. ಹಲವು ಇ-ಕಾಮರ್ಸ್ ವೇರ್‌ಹೌಸ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. FDA ಅಧಿಕಾರಿಗಳ ದಾಳಿಯಿಂದ ವೇರ್‌ಹೌಸ್‌ಗಳ ಕರ್ಮಕಾಂಡ ಬಯಲಾಗಿದೆ. ಇದನ್ನೂ ಓದಿ: ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಿ: ಡಿ.ಕೆ ಶಿವಕುಮಾರ್
ದಿನಸಿ ಮತ್ತು ಮನೆಬಳಕೆಯ ಸಾಮಗ್ರಿಗಳ ಒಳಗೊಂಡ ವೇರ್‌ಹೌಸ್‌ಗಳು, ಅಕ್ಕಿ, ಬೇಳೆ, ಎಣ್ಣೆ, ಸೋಪು, ಶಾಂಪೂ, ಡಿಟರ್ಜೆಂಟ್ ಸ್ವಚ್ಛಗೊಳಿಸುವ ಸಾಮಗ್ರಿಗಳ ಗೋದಾಮು, ಪ್ರಾಡಕ್ಟ್‌ಗಳ ಮೇಲೆ ಲೇಬಲಿಂಗ್ ಮತ್ತು ಮ್ಯಾನಿಫ್ಯಾಕ್ಚರಿಂಗ್ ಡೇಟ್ ಇಲ್ಲದೇ ಇರೋದು ಬಯಲಾಗಿದೆ.
ವೇರ್‌ಹೌಸ್‌ಗಳಲ್ಲಿ ಸ್ವಚ್ಛತೆ ಇಲ್ಲದೇ ಇರುವುದು ಕೂಡ ಬಟಾ ಬಯಲಾಗಿದೆ. ಆನ್‌ಲೈನ್‌ನಲ್ಲಿ ದಿನಸಿ & ಇನ್ನಿತರ ಅಹಾರ ಪದಾರ್ಥಗಳನ್ನ ಆರ್ಡರ್ ಮಾಡೋಕು ಮುಂಚೆ ಹುಷಾರು ಎನ್ನಲಾಗಿದೆ. ಇದನ್ನೂ ಓದಿ: KPSC ಅಕ್ರಮದ ವಿರುದ್ಧ ಅಖಾಡಕ್ಕಿಳಿದ ವಿದ್ಯಾರ್ಥಿಗಳು; ರಾಜ್ಯದಲ್ಲಿ ಜೆನ್-ಝೀ ಮಾದರಿ ಹೋರಾಟಕ್ಕೆ ಪ್ಲ್ಯಾನ್
ಆಹಾರ ಸುರಕ್ಷತಾ ನಿಯಮಗಳು ಉಲ್ಲಂಘನೆ ಮಾಡಿರುವ ವೇರ್‌ಹೌಸ್‌ಗಳಿಗೆ ನೋಟಿಸ್ ನೀಡಲು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
