ಅಂದುಕೊಂಡಂತೆ ಆಗಿದ್ದರೆ ದರ್ಶನ್‌ಗಾಗಿ ಪ್ರೇಮ್ ಸಿನಿಮಾ ಮಾಡಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಹಾಗಾಗಿ ಸುದೀಪ್ ಗಾಗಿ ಪ್ರೇಮ್ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಪ್ರೇಮ್ ವೃತ್ತಿ ಬದುಕಿನ 10ನೇ ಸಿನಿಮಾಗೆ ನಾಯಕನಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆ. ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ಪ್ರೇಮ್ ಈ ಅಚ್ಚರಿಯ ಉಡುಗೊರೆಯನ್ನ ಕನ್ನಡ ಕಲಾಭಿಮಾನಿಗಳಿಗೆ ನೀಡಿದ್ದಾರೆ.
ದಿ ವಿಲನ್ ಸಿನಿಮಾ ಮೂಲಕ ಸಂಚಲನ ಸೃಷ್ಟಿದ್ದ ಈ ಜೋಡಿ, ಇದೀಗ ಮತ್ತೆ ಒಂದಾಗಿದೆ. ಅಂದಿಗೆ ದಿ ವಿಲನ್ ಮೊದಲ ವಾರವೇ 32ಕೋಟಿ ಗ್ರಾಸ್ ಗಳಿಸಿದ್ದು ಇತಿಹಾಸ. ಅಷ್ಟು ದೊಡ್ಡ ಸೆನ್ಸೆಷನ್ ಆಗಿತ್ತು. ಅಲ್ಲಿ ಕಿಚ್ಚನಿಗೆ ಶಿವಣ್ಣನೂ ಸಾಥ್ ಕೊಟ್ಟಿದ್ದರು, ಆದ್ರೆ ಈ ಸಲ 1 & only ಕಿಚ್ಚನ ಜೊತೆಗೆ ಪ್ರೇಮ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಟೈಟಲ್ ಇಲ್ಲದ ಪ್ರೇಮ್ ಸುದೀಪ್ ಜೋಡಿ ಸಿನಿಮಾದ ಮೊದಲ ನೋಟ ಮತ್ತು ಅದರ ಸಂಗೀತದ ಸೆಳೆತ ಕುತೂಹಲ ಹುಟ್ಟಿಸ್ತಿದೆ.
ಅಂದ್ಹಾಗೆ ಈ ಸಲ ಪ್ರೇಮ್ ಮತ್ತು ಕಿಚ್ಚ ಸೀರಿಯಸ್ ಆಗಿ ಇವತ್ತಿ ಜನರೇಷನ್ನಿನ ಮನೆ ಮನೆಯ ಕಥೆಯನ್ನ ಅದು ಸೀರಿಯಸ್ಸಾಗಿ ಕಲರ್ ಪುಲ್ಲಾಗಿ ಹೇಳೋದಕ್ಕೆ ಹೊರಟಿದ್ದಾರೆ. ಸಂಬಂಧಗಳು, ಭಾವೆನೆಗಳ ಕಥೆಯನ್ನ ಹಣೆಯೋದ್ರಲ್ಲಿ ಹಾಗೂ ಮ್ಯೂಸಿಕಲಿ ಅದನ್ನ ನಿರೂಪಿಸೋದ್ರಲ್ಲಿ ಪ್ರೇಮ್ ಅಕ್ಷರಶಃ ನಿಪುಣ. ಇನ್ನು ಎಮೋಷನ್ನೂ, ಆ್ಯಕ್ಷನ್ನೂ, ಕ್ಲಾಸಿ ಲುಕ್ಕಿಗೆ ಕೇರ್ ಆಫ್ ಅಡ್ರೆಸ್ ಕಿಚ್ಚ. ಈ ಜನರೇಷನ್ ಹುಡುಗರಿಗೂ ಹಾಟ್ ಫೇವಿರೀಟ್ ಸುದೀಪ್. ಈ ಎರಡೂ ತಲೆಗಳು, ಕೈಗಳು, ಮನಸುಗಳು ಒಂದಾದ್ರೆ ಹೇಗಿರುತ್ತೆ ಊಹಿಸಿ. ನಿಮ್ಮ ಊಹೆಗೂ ನಿಲುಕದ ಇನ್ನಷ್ಟು ವಿಶೇಷ ಸಹಯೋಗಗಳೊಂದಿಗೆ ನಿರ್ದೇಶಕ ಪ್ರೇಮ್ ಬರ್ತಿದ್ದಾರೆ. ಅಕ್ಟೋಬರ್ 20ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 20ರಿಂದ ಹೊಸ ಅಧ್ಯಾಯಕ್ಕೆ ಕಿಚ್ಚ ಮತ್ತು ಪ್ರೇಮ್ ಮುನ್ನುಡಿ ಬರೆಯಲಿದ್ದಾರೆ.
