– ಇದೇ ಆ.8, 9 ರಂದು ಅರಮನೆ ಮೈದಾನದಲ್ಲಿ ಮೆಗಾ ಶೈಕ್ಷಣಿಕ ಮೇಳ
– 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು, 20ಕ್ಕೂ ಹೆಚ್ಚು ಕಂಪನಿಗಳು ಭಾಗಿ
ಬೆಂಗಳೂರು: ಡಿಗ್ರಿ ನಂತರ ಮುಂದೇನು ಎನ್ನುವುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಸರ್ವೇಸಾಮಾನ್ಯ. ಆಸಕ್ತಿಗೆ ಅನುಗುಣವಾಗಿ, ಬದಲಾದ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಬಗೆ ಬಗೆಯ ಕೋರ್ಸ್‌ಗಳು ಈ ವಿವಿಧ ಕಾಲೇಜುಗಳಲ್ಲಿ ಲಭ್ಯ ಇವೆ. ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ‘ಪಬ್ಲಿಕ್ ಟಿವಿ’ ವೇದಿಕೆಯೊಂದನ್ನು ಕಲ್ಪಿಸಿದೆ. ಒಂದೇ ಸೂರಿನಡಿ ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದೆ. ವಿದ್ಯಾಮಂದಿರ (Vidyamandira) ಪಿಜಿ ಶೈಕ್ಷಣಕ ಮೇಳಕ್ಕೆ (PG Education Expo) ವಿದ್ಯಾರ್ಥಿಗಳು ಮತ್ತು ಪೋಷಕರ ಆಗಮಿಸಿ ಹಲವು ಸಂದೇಹ, ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ವಿದ್ಯಾಮಂದಿರ 2 ದಿನಗಳ ಮೆಗಾ ಶೈಕ್ಷಣಿಕ ಮತ್ತು ಉದ್ಯೋಗ ಮೇಳ ಆಗಸ್ಟ್ 8 ಶನಿವಾರ ಮತ್ತು 9 ಭಾನುವಾರ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ – ಮೆಗಾ ಪಿಜಿ ಶೈಕ್ಷಣಿಕ ಮೇಳ, ಉದ್ಯೋಗ ಮೇಳಕ್ಕೆ ಬನ್ನಿ


40ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿ
ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 40ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು (Students) ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.
20ಕ್ಕೂ ಹೆಚ್ಚು ಕಂಪನಿಗಳು ಭಾಗಿ
ಈ ಉದ್ಯೋಗ ಮೇಳದಲ್ಲಿ 20ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಪದವೀಧರರಿಗೆ ನೇರ ಉದ್ಯೋಗಾವಕಾಶ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇದು ಸುವರ್ಣಾವಕಾಶವಾಗಿದೆ.
ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಗಳು:
ಲ್ಯಾಪ್‌ಟಾಪ್ ಮತ್ತು ಟ್ಯಾಬ್ ಗೆಲ್ಲಿ: ಬೆಳಗ್ಗೆ 9 ರಿಂದ 11 ಗಂಟೆಯೊಳಗೆ ನೇರ ನೋಂದಣಿ ಮಾಡಿಕೊಳ್ಳುವವರ ಪೈಕಿ ಲಕ್ಕಿ ಡ್ರಾ ಮೂಲಕ 1 ಲ್ಯಾಪ್‌ಟಾಪ್ ಪಡೆಯಬಹುದು. ಅಲ್ಲದೆ ಎಕ್ಸ್‌ಪೋದಲ್ಲಿ ಪ್ರತಿ 1 ಗಂಟೆಗೆ 1 ಟ್ಯಾಬ್ ಗೆಲ್ಲುವ ಸುವರ್ಣಾವಕಾಶವಿದೆ.
ಶೈಕ್ಷಣಿಕ ನೆರವು: ಸ್ಪಾಟ್ ಅಡ್ಮಿಷನ್, ಆಕರ್ಷಕ ಸ್ಕಾಲರ್‌ಶಿಪ್‌ಗಳು ಹಾಗೂ ಉಚಿತ ಬಹುಮಾನಗಳು ಲಭ್ಯವಿರಲಿವೆ.
ವೃತ್ತಿಪರ ಮಾರ್ಗದರ್ಶನ: ವಿದೇಶಿ ಉದ್ಯೋಗಾವಕಾಶ, ಸ್ಟಾರ್ಟ್‌ಅಪ್‌ಗಳಿಗೆ ಸೂಕ್ತ ಕೋರ್ಸ್‌ಗಳು ಹಾಗೂ ‘ಸ್ಟೂಡೆಂಟ್ ಫಾರಿನ್ ಎಕ್ಸ್‌ಚೇಂಜ್ ಪ್ರೋಗ್ರಾಂ’ ಕುರಿತು ವಿಷಯ ತಜ್ಞರಿಂದ ಸಂಪೂರ್ಣ ಮಾಹಿತಿ ಸಿಗಲಿದೆ.
ದಿನಾಂಕ: ಆಗಸ್ಟ್ 8 ಮತ್ತು 9
ಸ್ಥಳ: ಗಾಯತ್ರಿ ವಿಹಾರ್, ಅರಮನೆ ಮೈದಾನ, ಗೇಟ್ ಸಂಖ್ಯೆ-4, ಬೆಂಗಳೂರು
ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ
ಪ್ರವೇಶ: ಸಂಪೂರ್ಣ ಉಚಿತ
ಹೆಚ್ಚಿನ ವಿವರಗಳು ಹಾಗೂ ಮಾಹಿತಿಗಾಗಿ 99000 60815 ಅಥವಾ 99000 60891 ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಪ್ಲಾಟಿನಂ ಪ್ರಾಯೋಜಕರು
ರಾಮಯ್ಯ ಯೂನಿವರ್ಸಿಟಿ, ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ, ಪ್ರೆಸಿಡೆನ್ಸಿ ಯೂನಿವರ್ಸಿಟಿ, ಕೇಂಬ್ರಿಡ್ಜ್ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ
ಗೋಲ್ಡ್ ಪ್ರಾಯೋಜಕರು
ಇಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ , ಸಿಎಂಆರ್ ಯೂನಿವರ್ಸಿಟಿ, ಬಿಜೆಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಚಾಣಕ್ಯ ಯೂನಿವರ್ಸಿಟಿ, ಪಾರುಲ್ ಯೂನಿವರ್ಸಿಟಿ
ಸಿಲ್ವರ್ ಪ್ರಾಯೋಜಕರು
ಎಎಂಸಿ ಇನ್‌ಸ್ಟಿಟ್ಯೂಷನ್ಸ್, ಇಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ಸಿಟಿ ಇನ್‌ಸ್ಟಿಟ್ಯೂಷನ್ಸ್, ಪಿಇಎಸ್ ಯೂನಿವರ್ಸಿಟಿ, ಅಮಿಟಿ ಯೂನಿವರ್ಸಿಟಿ, ಎಐಎಂಎಸ್ ಇನ್‌ಸ್ಟಿಟೂಷನ್ಸ್, ದಿ ಆಕ್ಸ್‌ಫರ್ಡ್ ಇನ್‌ಸ್ಟಿಟೂಷನ್ಸ್, ಡಾನ್ ಬಾಸ್ಕೋ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಆಚಾರ್ಯ ಬೆಂಗಳೂರು ಬಿ-ಸ್ಕೂಲ್, ಡಾ. ಎಸಿಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಸಿಇಎ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್
ಸ್ಪೆಷಲ್ ಪೆವಿಲಿಯನ್
ರಾಮಯ್ಯ ಇನ್‌ಸ್ಟಿಟೂಟ್ ಆಫ್ ಮ್ಯಾನೆಜ್ಮೆಂಟ್
ಗಿಫ್ಟ್ ಸ್ಪಾನರ್ಸ್
ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ
ಕ್ರಿಯೆಟಿವ್ ಸ್ಟಾಲ್
ಆರ್‌ಆರ್ ಇನ್‌ಸ್ಟಿಟೂಷನ್ಸ್
ಬೆವರೆಜ್ ಪಾರ್ಟ್‌ನರ್
ಬಾಯರ್ಸ್ ಕಾಫೀ

