ಬೆಂಗಳೂರು: ಜಿಬಿಎ (GBA) ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಚರಣೆ ಮಾಡೋ ವೇಳೆ ಗುಂಡಾಗಳ ರೀತಿ ಹಲ್ಲೇ ಮಾಡಿದ್ದ ಬಸವರಾಜ್ ಪಡುಕೋಟೆ (Basavaraj Padukote) ಮೇಲೆ ಈಗ ಪೊಲೀಸರು ಮಾತ್ರವಲ್ಲ ಜಿಬಿಎ ಅಧಿಕಾರಿಗಳು ತಮ್ಮ ಅಧಿಕಾರದ ಪವರ್ ಏನೂ ಅಂತಾ ತೋರಿಸಲು ಮುಂದಾಗಿದ್ದಾರೆ. ಬಸವರಾಜ್ ಪಡುಕೋಟೆಯ ಇತಿಹಾಸವನ್ನ ಕೆದುಕುತ್ತಿರೋ ಅಧಿಕಾರಿಗಳಿಗೆ ಹೋರಾಟಗಾರನ ಹೆಸರಲ್ಲಿ ಬಸವರಾಜ್ ಪಡುಕೋಟೆ ಹೇಗೆಲ್ಲ ಹಣ ಮಾಡುತ್ತಿದ್ದ? ಹೇಗೆ ಶಿವಾಜಿನಗರದಲ್ಲಿ (Shivajinagar) ಹಿಡಿತ ಸಾಧಿಸಿದ್ದ ಎಂಬ ಕುರಿತು ತಲಾಶ್ ನಡೆಸುತ್ತಿದ್ದಾರೆ.
ಪೊಲೀಸರು ಇದ್ದರೂ ಪಾದಚಾರಿ ಮಾರ್ಗದ ಒತ್ತುವರಿ ತೆರವಿಗೆ ಹೋಗಿದ್ದ ಜಿಬಿಎ ಅಧಿಕಾರಿಗಳ ಮೇಲೆ ಬಸವರಾಜ್ ಪಡುಕೋಟೆ & ಗ್ಯಾಂಗ್ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಸವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಮುಂದೆ 3 ಡಿಸಿಎಂ ಪ್ರಸ್ತಾಪ – ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಡಿಕೆಶಿ ಮಾಸ್ಟರ್‌ಸ್ಟ್ರೋಕ್!
ಕನ್ನಡ ಸಂಘದ ಹೆಸರಲ್ಲಿ ಗಣೇಶ ಚತುರ್ಥಿ ಮಾಡೋದು, ಕನ್ನಡ ಸಂಘಟನೆಯ ಹೆಸರಲ್ಲಿ ಶಿವಾಜಿನಗರದ ಫುಟ್‌ಪಾತ್‌ನಲ್ಲಿರುವ ಅಂಗಡಿಗಳಿಂದ ಹಫ್ತಾ ವಸೂಲಿ ಮಾಡೋದು ಮಾಡುತ್ತಾ ಅದೇ ದುಡ್ಡಿನಲ್ಲಿ ಬಸವರಾಜ್ ಪಡುಕೋಣೆ ಬಿಲ್ಡಪ್ ಕೊಡುತ್ತಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸೆಲೆಬ್ರಿಟಿಗಳ ಜೊತೆಗೆ ಫೋಟೋ ಕ್ಲಿಕಿಸಿಕೊಂಡು ತಾನೊಬ್ಬ ಸೂಪರ್ ಸ್ಟಾರ್ ಎಂಬ ಫೀಲ್‌ನಲ್ಲಿದ್ದ ಬಸವರಾಜ್ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ. ಆತನ ಮಗ ರಾಘು ಸೇರಿ ಒಟ್ಟು 11 ಜನರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ನಿಂತಿದ್ದವರ ಮೇಲೆ ಹರಿದ ಕಾರು – ಯುವಕ ಸಾವು, ಮಹಿಳೆಯ ಕಾಲು ಮುರಿತ
ಇನ್ನೂ ಜಿಬಿಎ ಅಧಿಕಾರಿಗಳು ಬಸವರಾಜ್ ಪಡುಕೋಟೆಯ ಜನ್ಮ ಜಾಲಾಡುತ್ತಿದ್ದು, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಇರುವ ನಮ್ಮ ಕರ್ನಾಟಕ ಸೇನೆಯ ಕಚೇರಿಗೆ ಬೀಗ ಹಾಕಲು ಮುಂದಾಗಿದ್ದಾರೆ. ಬಾಡಿಗೆ ಪಡೆಯುವಾಗ ಪ್ಲಬಿಂಗ್ ವಸ್ತುಗಳ ಮಾರಾಟ ಮಾಡುತ್ತೇವೆ ಎಂದು ಬಾಡಿಗೆ ಪಡೆದು ಈಗ ಕಚೇರಿ ಮಾಡಿಕೊಂಡಿರೋದು ಕಟ್ಟಡದ ಮಾಲೀಕರಿಂದ ತಿಳಿದುಬಂದಿದೆ. ಇನ್ನೂ ಕಚೇರಿಗೆ ವಾಣಿಜ್ಯ ಪರವಾನಿಗೆ ಪಡೆದಿದ್ದಾರೆ ಅನ್ನೋದನ್ನ ಪರಿಶೀಲನೆ ನಡೆಸುತ್ತಿದ್ದು, ಅಕ್ರಮ ಕಚೇರಿ ಅಂತಾ ತಿಳಿದು ಬಂದರೆ ಕಚೇರಿಯನ್ನ ಸೀಜ್ ಮಾಡುವಂತೆ ಕೂಡ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಬಸವರಾಜ್ ಪಡುಕೋಟೆಯ ಮನೆ ಮತ್ತು ಇತರೆ ಆಸ್ತಿಗಳ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದು, ಟ್ಯಾಕ್ಸ್ ಕಟ್ಟದೇ ಇದ್ದರೇ ಪ್ಲಾನ್ ಮೀರಿ ಮನೆ ನಿರ್ಮಾಣ ಮಾಡಿದ್ರೆ ಅದಕ್ಕೂ ಆಪರೇಷನ್ ಜೆಸಿಬಿ ಮಾಡಿಸುವ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬೇಡಿ: ರಾಹುಲ್ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ
