ಬೆಂಗಳೂರು: ಶೃಂಗೇರಿಯ (Sringeri) ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮತ ಮರು ಎಣಿಕೆಯಲ್ಲಿ (Postal Ballot Recount) ದೊಡ್ಡ ಪಿತೂರಿ ನಡೆದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇಂತಹ ಕ್ರಿಮಿನಲ್ ಕೃತ್ಯ ಮಾಡ್ತಾರೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ಮಾಜಿ ಶಾಸಕರಾದ ಜೀವರಾಜ್ ಅವರೊಂದಿಗೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನು ಬಳಿಸಿಕೊಂಡಿದ್ದಾರೆ. ಇದು ದೇಶಕ್ಕೆ ಒಂದು ಸಾಕ್ಷಿ. ಇದರ ಬಗ್ಗೆ ವರದಿ ಬಂದಿದೆ. ಈ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಶೃಂಗೇರಿಯಲ್ಲಿ ಸತ್ಯಕ್ಕೆ ಜಯ – ವೋಟ್ ಚೋರ್ ಕೌನ್ ಹೈ? ರಾಹುಲ್ ಗಾಂಧಿ ಹೈ: ಆರ್. ಅಶೋಕ್
ಯಾವ ರೀತಿ ಬ್ಯಾಲೆಟ್ ಬಾಕ್ಸ್ ಓಪನ್ ಮಾಡಿಸಿ ಈ ರೀತಿ ಮಾಡಬಹುದು? ಕೋರ್ಟ್‍ಗೆ ಹೋಗಿ ಬರಿ ಪೋಸ್ಟಲ್ ಬ್ಯಾಲೆಟ್‍ಗಳನ್ನೇ ಕೌಂಟ್ ಆಗಿದ್ದನ್ನೇ ಮತ್ತೆ ಕೌಂಟ್ ಮಾಡಬೇಕು ಅಂದಿರೋದು? ಅವರದ್ದೇ ಏಜೆಂಟ್ ಸಹಿ ಮಾಡಿದ್ದನ್ನು ಮತ್ತೆ ಕೌಂಟ್ ಮಾಡಿಸಿದ್ದಾರೆ. ಇದು ಒಂದು ವ್ಯವಸ್ಥಿತ ಅಪರಾಧ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿಯಿಂದಲೂ ನಾನು ಗಮನಿಸುತ್ತಿದ್ದೇನೆ. ನಾವು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರದಿಂದಲೂ ನಾವು ಏನು ಮಾಡಬಹುದು ಎಂದು ನೋಡುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಟ್ವಿಸ್ಟ್ – ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಬಹುಮತ

