– ವೋಟ್ ಟ್ಯಾಂಪರಿಂಗ್ ಆಗಿದೆ, ಪೊಲೀಸ್ ಠಾಣೆಗೆ ದೂರು ಕೊಡ್ತೀನಿ ಎಂದ ರಾಜೇಗೌಡ
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ (Sringeri Assembly Constituency) ಅಂಚೆ ಮತ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ (Jeevaraj) ಮುನ್ನಡೆ ಸಾಧಿಸಿರುವ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ (T.D.Rajegowda) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ರಾಜೇಗೌಡ, ಬೆಳಗ್ಗೆ ಸ್ಟ್ರಾಂಗ್ ರೂಂ ಓಪನ್ ಆದಾಗ ಟ್ರಂಕ್‌ನ ಲಾಕ್ ಒಡೆದಿದ್ರು ಸೀಲ್ ಇರಲಿಲ್ಲ. ಟ್ರಂಕ್ ಲಾಕ್ ಕಟ್ ಆಗಿತ್ತು. ಟ್ರಂಕ್‌ನ ಹಾರೆ ಹಾಕಿ ಮೀಟಿದಂತೆ ಇತ್ತು. ನಾವು ಬೆಳಗ್ಗೆ ವೋಟ್ ಟ್ಯಾಂಪರಿಂಗ್ ಮಾಡಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ವಿ. ಟ್ರಂಕ್‌ಗಳನ್ನ ಇಲ್ಲಿಗೆ ತಂದಾಗ ಎಲ್ಲವನ್ನೂ ರೆಕಾರ್ಡ್ ಮಾಡಿದ್ದಾರೆ. ಕೋರ್ಟ್ ಆದೇಶದಂತೆ 279 ಮತ ರಿಕೌಂಟ್ ಆಯ್ತು, 6-7 ಹೆಚ್ಚಿಗೆ ಮತ ಬಂದ್ವು, ನನಗೂ 2 ಮತ ಹೆಚ್ಚಾಗಿದೆ. 2023ರ ಚುನಾವಣೆ ಮತ ಎಣಿಕೆ ಬಳಿಕ ಯಾರ‍್ಯಾರಿಗೆ ಎಷ್ಟು ಮತ ಬಂದಿದೆ ಎಂದು ಬಂಡಲ್ ಮಾಡಿ ಇಟ್ಟಿದ್ರು. ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಎಲ್ಲಾ ಪಕ್ಷಗಳ ಏಜೆಂಟ್ ಸಮ್ಮುಖದಲ್ಲಿ ಬಂಡಲ್ ಮಾಡಿದ್ರು. ಈಗ ಬಂಡಲ್-ಬಂಡಲ್‌ಗಳನ್ನೇ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಟ್ವಿಸ್ಟ್ – ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಬಹುಮತ
ನನಗೆ ಬಂದಿರುವ ಮತದ ಬ್ಯಾಲೆಟ್ ಪೇಪರ್ ಮೇಲೆ ಮತ್ತೊಬ್ಬರಿಗೆ ಗೆರೆ ಎಳೆದಿದ್ದಾರೆ. ಮಾರ್ಕ್ ಮಾಡಿರೋದು ಟ್ಯಾಲಿ ಆಗ್ತಿಲ್ಲ, ಬೇರೆ-ಬೇರೆ ರೀತಿ ಮಾಡಿದ್ದಾರೆ. ಬೇರೆ ಇಂಕ್ ಬಳಸಿದ್ದಾರೆ, ಅದು ನೋಡೋದಕ್ಕೆ ನೀಟಾಗಿ ಕಾಣುತ್ತೆ. ನನ್ನ 158 ವೋಟ್‌ಗಳನ್ನೂ ಅಸಿಂಧು ಮಾಡಿದ್ದಾರೆ. ವೋಟ್ ಟ್ಯಾಂಪರ್ ಆಗಿದೆ. ಜೀವರಾಜ್ ಹಾಗೂ ಅವರ ಜೊತೆ ಸೇರಿರೋರು ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದಿದ್ದಾರೆ.
ನಾನು ಪೊಲೀಸ್ ಸ್ಟೇಷನ್‌ಗೆ ದೂರು ದಾಖಲು ಮಾಡುತ್ತೇನೆ. ಟ್ರಂಕ್ ಸೀಲ್ ಇಲ್ಲದಿರೋದು, ಲಾಕ್ ಕಟ್ ಆಗಿರೋದು, ಬಟ್ಟೆ ಸುತ್ತಿರೋದು ಎಲ್ಲವನ್ನೂ ಅಧಿಕಾರಿಗಳು ರಿಪೋರ್ಟ್ ಮಾಡಿದ್ದಾರೆ. 2023ರಲ್ಲಿ ಸಿಂಧು ಆಗಿದ್ದ ಮತಗಳನ್ನ ಇಂದು ಅಸಿಂಧು ಮಾಡಿದ್ದಾರೆ. ನನ್ನ 258 ಮತಗಳನ್ನ ಟ್ರಾಂಪರಿಂಗ್ ಮಾಡಿದ್ದಾರೆ, ರಾಜೇಗೌಡ ಅಂತ ಬಂಡಲ್ ಮಾಡಿ ಇಟ್ಟಿದ್ರು. ಚುನಾವಣಾ ಅಧಿಕಾರಿಗಳು ಇನ್ನೂ ಫಲಿತಾಂಶವನ್ನ ಅನೌನ್ಸ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶೃಂಗೇರಿಯಲ್ಲಿ ಸತ್ಯಕ್ಕೆ ಜಯ – ವೋಟ್ ಚೋರ್ ಕೌನ್ ಹೈ? ರಾಹುಲ್ ಗಾಂಧಿ ಹೈ: ಆರ್. ಅಶೋಕ್

