Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Crime

ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Public TV
Last updated: April 30, 2026 3:56 pm
Public TV
Share
4 Min Read
Google Gemini Misused in AI Deepfake Loan Scam Ahmedabad Police Expose Aadhaar OTP Bypass four arrested Cyber Crime
SHARE

– ಗೂಗಲ್‌ ಜೆಮಿನಿ ಬಳಸಿ ಡೀಪ್‌ಫೇಕ್‌ ವಿಡಿಯೋ
– ವ್ಯಕ್ತಿಯ ಮೊಬೈಲ್‌ ಸಂಖ್ಯೆ ತೆಗೆದು ತಮ್ಮದೇ ಸಂಖ್ಯೆ ಅಪ್‌ಡೇಟ್‌

ಅಹಮದಾಬಾದ್‌: ಒಟಿಪಿ (OTP) ಪಡೆದು ಜನರ ಖಾತೆಯಿಂದ ದುಡ್ಡು ಎಗರಿಸುತ್ತಿದ್ದ ವಂಚಕರು ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಂಚಕರು ಈಗ ಸಂತ್ರಸ್ತರಿಗೆ ಒಟಿಪಿ ಬಾರದಂತೆ ತಡೆದು, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಸಾಲ ಪಡೆದ ಶಾಕಿಂಗ್‌ ಪ್ರಕರಣ ಬೆಳಕಿಗೆ ಬಂದಿದೆ.

ದೇಶದ ಪ್ರತಿಯೊಬ್ಬ ನಾಗರೀಕನ ಅತ್ಯಂತ ಸುದೃಢ ಗುರುತಿನ ಚೀಟಿ ಎಂದೇ ಪರಿಗಣಿಸಲ್ಪಟ್ಟಿರುವ ಆಧಾರ್ (Aadhaar) ವ್ಯವಸ್ಥೆಯ ಭದ್ರತೆಯನ್ನೇ ವಂಚಕರು ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಫೇಕ್ (Deepfake) ತಂತ್ರಜ್ಞಾನ ಬಳಸಿ ಭೇದಿಸಿದ್ದಾರೆ. ಅಷ್ಟೇ ಅಲ್ಲದೇ ವಂಚಕರು ಅತ್ಯಾಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸಂತ್ರಸ್ತರಿಗೆ ಒಟಿಪಿ (OTP) ಬಾರದಂತೆ ತಡೆದು ಅವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ.

ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು (Ahmedabad Cyber Crime) ಈ ಹೈಟೆಕ್ ವಂಚಕ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನು ಪರ್ಮಾರ್, ಆಶಿಶ್ ವಾಲಂಡ್, ಮೊಹಮ್ಮದ್ ಕೈಫ್ ಪಟೇಲ್ ಮತ್ತು ದೀಪ್ ಗುಪ್ತಾ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಆಧಾರ್‌ ಕಾಮನ್ ಸರ್ವಿಸ್ ಸೆಂಟರ್ (CSC) ಕಿಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ದಾಖಲೆ ಸೃಷ್ಟಿ ಹೇಗೆ?
ಈ ಖತರ್ನಾಕ್ ಗ್ಯಾಂಗ್ ಕೇವಲ ತಂತ್ರಜ್ಞಾನವನ್ನಷ್ಟೇ ಅಲ್ಲದೆ ವ್ಯವಸ್ಥೆಯ ಲೋಪದೋಷಗಳನ್ನೂ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದೆ. ಆರೋಪಿಗಳು ಮೊದಲು ಅಕ್ರಮ ಮೂಲಗಳಿಂದ ಸಂತ್ರಸ್ತ ವ್ಯಕ್ತಿಯ ಆಧಾರ್ ವಿವರಗಳು ಮತ್ತು ಕೇವಲ ಒಂದು ಸ್ಥಿರ ಫೋಟೋವನ್ನು ಪಡೆದುಕೊಳ್ಳುತ್ತಿದ್ದರು.

ಗೂಗಲ್‌ನ ಜೆಮಿನಿ (Gemini) ಎಐ ಟೂಲ್‌ ಬಳಸಿ ಆ ಸ್ಥಿರ ಫೋಟೋವನ್ನು ಜೀವಂತ ಮನುಷ್ಯನಂತೆ ಕಣ್ಣು ಮಿಟುಕಿಸುವ ಮತ್ತು ಮುಖದ ಚಲನೆಯಿರುವ (Eye Blink Animation) ಡೀಪ್‌ಫೇಕ್ ವಿಡಿಯೋ ಆಗಿ ಪರಿವರ್ತಿಸುತ್ತಿದ್ದರು.

ಆಧಾರ್ ನವೀಕರಣ ಕೇಂದ್ರಗಳಲ್ಲಿ ಇರುವ ಮುಖ ಗುರುತಿಸುವಿಕೆ (Facial Authentication) ವ್ಯವಸ್ಥೆಗೆ ವ್ಯಕ್ತಿ ನೇರವಾಗಿ ಹಾಜರಾಗುವ ಅಗತ್ಯವಿರುತ್ತದೆ. ಆದರೆ ಇಲ್ಲಿ ಆರೋಪಿಗಳು ಕ್ಯಾಮೆರಾ ಮುಂದೆ ತಾವೇ ತಯಾರಿಸಿದ ಡೀಪ್‌ಫೇಕ್ ವೀಡಿಯೊವನ್ನು ಪ್ರದರ್ಶಿಸಿ ‘ಜೀವಂತ ವ್ಯಕ್ತಿ’ ಹಾಜರಿದ್ದಾನೆ ಎಂದು ವ್ಯವಸ್ಥೆಯನ್ನು ನಂಬಿಸಿ ಭದ್ರತೆಯನ್ನು ಬೇಧಿಸುತ್ತಿದ್ದರು.

ಈ ತಂತ್ರದ ಮೂಲಕ ಆಧಾರ್ ಡೇಟಾಬೇಸ್‌ನಲ್ಲಿ ಸಂತ್ರಸ್ತ ವ್ಯಕ್ತಿಯ ಆಧಾರ್‌ಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯನ್ನು ತೆಗೆದು ತಮ್ಮದೇ ಮೊಬೈಲ್ ಸಂಖ್ಯೆಯನ್ನು ನಮೂದಿಸುತ್ತಿದ್ದರು. ಇದರಿಂದಾಗಿ ಆಧಾರ್ ಆಧಾರಿತ ಯಾವುದೇ ವಹಿವಾಟಿನ ಒಟಿಪಿಗಳು ಸಂತ್ರಸ್ತರಿಗೆ ಹೋಗುವ ಬದಲು ನೇರವಾಗಿ ವಂಚಕರ ಕೈ ಸೇರುತ್ತಿದ್ದವು.‌ ಇದನ್ನೂ ಓದಿ: ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Cyber Crime

ಲೂಟಿ ಹೇಗೆ?
ಒಟಿಪಿ ನಿಯಂತ್ರಣಕ್ಕೆ ಬಂದ ನಂತರ, ವಂಚಕರು ಸಂತ್ರಸ್ತನ ಡಿಜಿಲಾಕರ್ (DigiLocker) ಪ್ರವೇಶಿಸಿ ಆತನ ಪ್ರಮುಖ ಕೆವೈಸಿ ದಾಖಲೆಗಳನ್ನು ಬಳಸಿಕೊಂಡು ಹೊಸ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಅಷ್ಟೇ ಅಲ್ಲದೆ, ವಿವಿಧ ಡಿಜಿಟಲ್ ಸಾಲ ನೀಡುವ ವೇದಿಕೆಗಳ (Lending Platforms) ಮೂಲಕ ಸಂತ್ರಸ್ತನ ಹೆಸರಿನಲ್ಲಿ ಭಾರಿ ಪ್ರಮಾಣದ ಸಾಲವನ್ನೂ ಪಡೆದು ಲೂಟಿ ಮಾಡಿದ್ದಾರೆ. ಸಂತ್ರಸ್ತರಿಗೆ ತಾವು ವಂಚನೆಗೊಳಗಾಗಿದ್ದೇವೆ ಎಂಬ ಸುಳಿವು ಸಿಗುವ ಮೊದಲೇ ಆರೋಪಿಗಳು ಹಣದೊಂದಿಗೆ ಪರಾರಿಯಾಗುತ್ತಿದ್ದರು.

ವಂಚಕರು ಯಾರು?
ಕನು ಪರ್ಮಾರ್ (32): ಆನಂದ್ ಜಿಲ್ಲೆಯವನು, ಆಧಾರ್ ಅಪ್‌ಡೇಟ್ ಕಿಟ್‌ಗಳನ್ನು ಪೂರೈಸುತ್ತಿದ್ದ.
ಆಶಿಶ್ ವಾಲಂಡ್ (27): ವಡೋದರಾದವನು, ನಕಲಿ ನವೀಕರಣ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ.
ಮೊಹಮ್ಮದ್ ಕೈಫ್ ಪಟೇಲ್ (26): ಭರೂಚ್ ಜಿಲ್ಲೆಯವನು, ಡೀಪ್‌ಫೇಕ್ ವಿಡಿಯೋ ಸೃಷ್ಟಿಸುವ ತಾಂತ್ರಿಕ ಜವಾಬ್ದಾರಿ ಹೊತ್ತಿದ್ದ.
ದೀಪ್ ಗುಪ್ತಾ (29): ಅಹಮದಾಬಾದ್ ನಿವಾಸಿ, ಸಂತ್ರಸ್ತರ ದತ್ತಾಂಶ ಸಂಗ್ರಹಣೆಯಲ್ಲಿ ತೊಡಗಿದ್ದ

ಬೆಳಕಿಗೆ ಬಂದಿದ್ದು ಹೇಗೆ?
ಉದ್ಯಮಿಯೊಬ್ಬರಿಗೆ ಎರಡು ದಿನಗಳವರೆಗೆ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಒಟಿಪಿಗಳು ಬಂದಿರಲಿಲ್ಲ. ಅವರು ಆಧಾರ್ ಸೇವೆಗಳನ್ನು ಪಡೆಯಲು ಪ್ರಯತ್ನಿಸಿದಾಗ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬದಲಾಗಿರುವುದನ್ನು ನೋಡಿ ಶಾಕ್‌ ಆಗಿ ಏ.10 ರಂದು ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಅಹಮದಾಬಾದ್‌ ಪೊಲೀಸರು ಈಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವ್ಯವಸ್ಥೆಯ ದುರುಪಯೋಗ ಹೇಗೆ?
ವ್ಯವಸ್ಥೆಯ ದುರುಪಯೋಗ ತನಿಖೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ಬಯಲಾಗಿದೆ. ಆರೋಪಿಗಳು ಸಿಲಿಕಾನ್ ಬೆರಳಚ್ಚುಗಳನ್ನು ಬಳಸಿ ಆಧಾರ್ ಪೋರ್ಟಲ್‌ಗೆ ಲಾಗಿನ್ ಆಗುತ್ತಿದ್ದರು. ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ನೀಡಲಾಗುವ ಅಧಿಕೃತ ಆಧಾರ್ ಅಪ್‌ಡೇಟ್ ಕಿಟ್‌ಗಳನ್ನು ಈ ವಂಚನೆಗೆ ಬಳಸಿಕೊಳ್ಳಲಾಗಿತ್ತು. ಹೈಜಾಕ್ ಮಾಡಿದ ಆಧಾರ್ ಬಳಸಿ ಇವರು ಐಡಿಎಫ್‌ಸಿ, ಕೋಟಕ್‌ ಮಹೀಂದ್ರಾ ಮತ್ತು ಜಿಯೋ ಪೇಮೇಂಟ್ಸ್‌ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಪ್ರಯತ್ನಿಸಿದ್ದರು ಮತ್ತು ಕಿರು ಸಾಲ ಪಡೆದಿದ್ದರು.

ಮುಂಜಾಗ್ರತಾ ಕ್ರಮ ಏನು?
ಮೊಬೈಲ್‌ಗೆ ಆಧಾರ್ ಸಂಬಂಧಿತ OTPಗಳು ಬರುವುದು ಇದ್ದಕ್ಕಿದ್ದಂತೆ ನಿಂತರೆ ಕೂಡಲೇ ಎಚ್ಚೆತ್ತುಕೊಳ್ಳಿ.
ನಿಯಮಿತವಾಗಿ UIDAI ಅಧಿಕೃತ ವೆಬ್‌ಸೈಟ್ ಮೂಲಕ ನಿಮ್ಮ ಆಧಾರ್ ಇತಿಹಾಸ ಮತ್ತು ಲಿಂಕ್ ಆದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು
ಸೈಬರ್ ವಂಚನೆಗೊಳಗಾದಲ್ಲಿ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ Cybercrime Portal ನಲ್ಲಿ ದೂರು ನೀಡಿ.

TAGGED:cyber crimeDeep Fakepoliceಅಹಮಾದಾಬಾದ್ಆಧಾರ್ಪೊಲೀಸ್ಸೈಬರ್ ಕ್ರೈಂ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

grapes
Chikkaballapur

ದ್ರಾಕ್ಷಿಗೆ ಬಂಪರ್ ಬೆಲೆ – ರೈತರ ಮೊಗದಲ್ಲಿ ನಗು, ಕೈಗೆ ಕಾಂಚಾಣ ತಂದ ಬೆಳೆ

Public TV
By Public TV
21 minutes ago
ipac vinesh chandel
Court

ಪಶ್ಚಿಮ ಬಂಗಾಳ ಕಲ್ಲಿದ್ದಲು ಹಗರಣ| I-PAC ನಿರ್ದೇಶಕನಿಗೆ ಜಾಮೀನು ಮಂಜೂರು

Public TV
By Public TV
2 hours ago
Narendra Modi 1 2
Latest

ಪ್ರಧಾನಿ ನರೇಂದ್ರ ಮೋದಿ ಜಾತಿ ಸಮೀಕ್ಷೆಯನ್ನು ಮುಂದೂಡಲು ಬಯಸಿದ್ದಾರೆ: ಕಾಂಗ್ರೆಸ್ ಆರೋಪ

Public TV
By Public TV
2 hours ago
Lokayukta Justice BS Patil
Bengaluru City

Bowring Hospital Wall Collapse| ಶಾಲಿನಿ ರಜನೀಶ್‌, ಮಹೇಶ್ವರ ರಾವ್‌ ವಿರುದ್ಧ ಕೇಸ್‌: ಗುಡುಗಿದ ಲೋಕಾಯುಕ್ತ ನ್ಯಾ. ಪಾಟೀಲ್‌

Public TV
By Public TV
3 hours ago
Nelamangala Banana Plantation Rain Effect
Bengaluru City

ಬೆಂಗಳೂರಲ್ಲಿ ಭೀಕರ ಮಳೆ – ಹೆಂಡತಿಯ ಮಾಂಗಲ್ಯ, ಚಿನ್ನಾಭರಣ ಅಡವಿಟ್ಟು ಬೆಳೆದಿದ್ದ 3 ಎಕರೆ ಬಾಳೆ ತೋಟ ನೆಲಸಮ

Public TV
By Public TV
3 hours ago
Travis Head
Cricket

ತನ್ನ ಬ್ಲಂಡರ್‌ನಿಂದ ಹೈದರಾಬಾದ್‌ ವಿರುದ್ಧ ಸೋತ ಮುಂಬೈ!

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?