ನವದೆಹಲಿ: ನನ್ನ ಬ್ಯಾಟ್ಗೆ ದೇವರೇ ಎಐ ಚಿಪ್ ಅಂಟಿಸಿದ್ದಾನೆ, ಈಗ ಅದನ್ನೇ ಬಳಸ್ತಿದ್ದೀನಿ ಎಂದು ಪಾಕ್ ಕ್ರಿಕೆಟ್ ತಜ್ಞನ ಮಾತಿಗೆ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ವೈಭವ್ ಸೂರ್ಯವಂಶಿ (Vaibhav Suryavanshi) ಕೌಂಟರ್ ಕೊಟ್ಟಿದ್ದಾರೆ.
ಮಂಗಳವಾರ (ಏ.28) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 16 ಎಸೆತಗಳಲ್ಲಿ 43 ರನ್ ಗಳಿಸಿದ ನಂತರ ವೈಭವ್ ಸೂರ್ಯವಂಶಿ ಎಐ ಬಗ್ಗೆ ಮಾತನಾಡಿದರು. ದೇವರೇ ನನ್ನ ಬ್ಯಾಟ್ಗೆ ಎಐ ಚಿಪ್ ಅಂಟಿಸಿ ಕಳುಹಿಸಿದ್ದಾನೆ. ನಿನ್ನ ಬ್ಯಾಟಿಗೆ ಏನೋ ಒಂದನ್ನು ಅಂಟಿಸಿದ್ದೇನೆ ಎಂದು ದೇವರು ನನಗೆ ಹೇಳಿಯೇ ಕಳಿಸಿದ್ದ. ಈಗ ಅದನ್ನೇ ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೈಭವ್ ಸೂರ್ಯವಂಶಿ ಬ್ಯಾಟ್ನಲ್ಲಿ AI ಚಿಪ್ ಇರಬಹುದು, ಲ್ಯಾಬ್ ಟೆಸ್ಟ್ಗೆ ಕಳಿಸಿ: ಪಾಕ್ ಕ್ರಿಕೆಟ್ ತಜ್ಞ
ಇನ್ನೂ ಐಪಿಎಲ್ 2026ರ ಆವೃತ್ತಿಯಲ್ಲಿ ಸೂರ್ಯವಂಶಿ ಕೇವಲ 167 ಎಸೆತಗಳಲ್ಲಿ 400 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ಇತ್ತೀಚಿಗಷ್ಟೇ ಪಾಕಿಸ್ತಾನದಲ್ಲಿ ನಡೆದ ಆನ್ಲೈನ್ ಚರ್ಚೆಯ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಜ್ಞ ನೌಮನ್ ನಿಯಾಜ್ ಅವರು ತಮಾಷೆಯಾಗಿ ಹೇಳಿಕೆ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಎಲ್ಲೆಡೆ ಪ್ರಶಂಸೆ ಪಡೆದಿದ್ದಾರೆ. ಆ ಬಾಲಕ ಆಟವಾಡುವಾಗ ಶಕ್ತಿ ಹೆಚ್ಚಿಸಿಕೊಳ್ಳಲು ಬ್ಯಾಟ್ನಲ್ಲಿ ಎಐ ಚಿಪ್ ಬಳಸಿರಬಹುದು. ಹೀಗಾಗಿ ಆತನನ್ನು ಲ್ಯಾಬ್ ಟೆಸ್ಟ್ಗೆ ಕಳುಹಿಸಿ ಎಂದು ಹಾಸ್ಯಮಯವಾಗಿ ಹೇಳಿದ್ದರು.ಇದನ್ನೂ ಓದಿ: IPLನಲ್ಲಿ ಮತ್ತೊಂದು ರೆಕಾರ್ಡ್ ಬರೆಯಲು ಸಜ್ಜಾದ ಕೊಹ್ಲಿ - ಆ ದಾಖಲೆಗೆ ಬೇಕು ಕೇವಲ 11 ರನ್

